Breaking News

ಕೊಪ್ಪಳ ಜಿಲ್ಲೆಯಾದ್ಯಂತ ಉತ್ತಮ ಮಳೆ, ತುಂಬಿ ಹರಿದ ಹಳ್ಳಕೊಳ್ಳ

Spread the love

ಕೊಪ್ಪಳ: ಭಾನುವಾರ ಮಧ್ಯರಾತ್ರಿಯಿಂದ ಸೋಮವಾರದ ಬೆಳಗಿನ ಜಾವದ ತನಕ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ಕುಷ್ಟಗಿ ತಾಲ್ಲೂಕಿನ ಹೆಸರೂರು ಬಳಿಯ ಚೆಕ್ ಡ್ಯಾಮ್ ತುಂಬಿದ್ದು, ಇದೇ ತಾಲ್ಲೂಕಿನ ತಾವರಗೇರಾ ನಂದಾಪೂರ ರಸ್ತೆಯಲ್ಲಿ ಕೆರೆಯ ನೀರು ಹರಿದಿದೆ.ಕೊಪ್ಪಳ ಜಿಲ್ಲೆಯಾದ್ಯಂತ ಉತ್ತಮ ಮಳೆ, ತುಂಬಿ ಹರಿದ ಹಳ್ಳಕೊಳ್ಳ

ಕೊಪ್ಪಳ ತಾಲ್ಲೂಕಿನ ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಿಂದ ಕವಲೂರು ಸಂಪರ್ಕಿಸುವ ರಸ್ತೆಯ ಮಧ್ಯದಲ್ಲಿರುವ ಹಿರೇಹಳ್ಳವೂ ತುಂಬಿ ಹರಿದಿದೆ.

ಕಳೆದ ವರ್ಷ ಮಳೆಯ ದರ್ಶನವಿಲ್ಲದೆ ಪರದಾಡಿದ್ದ ಜನರಿಗೆ ಈ ಬಾರಿ ಮೇಲಿಂದ ಮೇಲೆ ಬೀಳುತ್ತಿರುವ ಮಳೆ ಖುಷಿ ನೀಡಿದೆ. ಕೃಷಿ ಚಟುವಟಿಕೆಗೂ ಅನುಕೂಲವಾಗಿದ್ದು ರೈತರಲ್ಲಿ ಮೊಗದ ಮೇಲೆ ಮಂದಹಾಸ ಮೂಡಿದೆ.

ಕೊಪ್ಪಳ ನಗರ, ಕುಷ್ಟಗಿ, ತಾವರಗೇರಾ, ಕಾರಟಗಿ, ಕುಕನೂರು ತಾಲ್ಲೂಕುಗಳಲ್ಲಿ ಉತ್ತಮ ಮಳೆ ಬಂದಿದ್ದು ಕೃಷಿ ಚಟುವಟಿಕೆ ಗರಿಗೆದರಿದೆ.


Spread the love

About Laxminews 24x7

Check Also

ಪರಿಷ್ಕರಣೆ ಹೆಸರಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ: ಸರ್ಕಾರದ ವಿರುದ್ಧ ಶ್ರೀರಾಮುಲು ಕಿಡಿ

Spread the loveಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ ಮಾಡ್ತಿದೆ ಅಂತ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ