Breaking News

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಇಬ್ಬರು ದುರ್ಮರಣ

Spread the love

ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ಸಾವನಪ್ಪಿರುವ ಘಟನೆ ಶಹಾಪುರ ಹತ್ತಿಗೂಡು ಬ್ರಿಡ್ಜ್ ಬಳಿ ಭಾನುವಾರ ತಡರಾತ್ರಿ ನಡೆದಿದೆ.

ಕಲಬುರಗಿಯಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಶಹಾಪುರ ಮಾರ್ಗವಾಗಿ ತಾಲೂಕಿನ ಹತ್ತಿಗುಡೂರು ಬ್ರಿಡ್ಜ್ ಬಳಿ ಸಂಚರಿಸುವಾಗ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಬಸ್ ನಲ್ಲಿದ್ದ 37 ಪ್ರಯಾಣಿಕರ ಪೈಕಿ ಕಲಬುರಗಿಯ ಇಬ್ಬರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ.

ಭಾಗಲಕೋಟ ಭಾಗದ ಬಸ್ ಚಾಲಕ ಯಾದಗಿರಿ, ಕಲಬುರಗಿ, ಶಹಾಪುರ ರಸ್ತೆ ಮಾರ್ಗಕ್ಕೆ ಹೊಸ ಅನುಭವ ಇರುವ ಕಾರಣ ರಸ್ತೆಯ ಹಿಡಿತ ಅರಿಯದ ಚಾಲನ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗುತ್ತಿದೆ.

ಭಾನುವಾರ ರಾತ್ರಿ 11.40 ಸುಮಾರು ಹತ್ತಿಗುಡೂರು ಬ್ರಿಡ್ಜ್ ಕ್ರಾಸ್ ಬಳಿ ಎದುರಿಗೆ ವಾಹನ ಬಂದ ತಕ್ಷಣ ರಸ್ತೆಗೆ ಬದಿಗೆ ತೆಗೆದುಕೊಂಡ ಬಸ್ ಚಾಲಕ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದುವಿಗೆ ಪಲ್ಟಿಯಾಗಿ ಬಿದ್ದಿರುವ ಘಟನೆ ತಡವಾಗಿ ತಿಳಿದುಬಂದಿದೆ.

ಶಹಾಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ