Breaking News

ಆನೇಕಲ್: ಅಡುಗೆ ಅನಿಲ ಸಿಲಿಂಡರ್ ಸ್ಫೋಟ, ಐವರಿಗೆ ಗಂಭೀರ ಗಾಯ

Spread the love

ಆನೇಕಲ್ (ಬೆಂಗಳೂರು): ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಏಳು ಮಂದಿ ಗಾಯಗೊಂಡಿರುವ ಘಟನೆ ಇಂದು ಇಲ್ಲಿನ ಬೆಂಗಳೂರು-ವೀವರ್ಸ್ ಕಾಲೊನಿಯ ಮಾರುತಿ ಬಡಾವಣೆಯಲ್ಲಿ ಸಂಭವಿಸಿತು.

ಮಾರ್ಟಿನ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಿದ್ದ ಉತ್ತರ ಪ್ರದೇಶದ ಬನಾರಸ್ ಮೂಲದ ಜಮಾಲ್ (32), ನಾಜಿಯಾ (22), ಇರ್ಫಾನ್ (21), ಗುಲಾಬ್ (18) ಹಾಗು ಶಹಜಾದ್ (9) ಗಾಯಗೊಂಡಿದ್ದಾರೆ.

ಮುಂಜಾನೆ 5:30ರ ಸುಮಾರಿಗೆ ವಿದ್ಯುತ್‌ ಬಲ್ಬ್‌ ಸ್ವಿಚ್ ಆನ್ ಮಾಡಿದಾಗ ಆಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ, ಬಾಗಿಲುಗಳು ಛಿದ್ರಗೊಂಡಿವೆ. ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜುಗಳು ಸಿಡಿದಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇತ್ತೀಚಿನ ಘಟನೆ-ಚಿಕ್ಕಬಳ್ಳಾಪುರದಲ್ಲಿ ಸಿಲಿಂಡರ್ ಸ್ಫೋಟ: ಇದೇ ತಿಂಗಳ 16ನೇ ತಾರೀಖಿನಂದು ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಮಹಿಳೆ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿತ್ತು. ಅಡುಗೆ ಅನಿಲ ಸೋರಿಕೆಯಾಗಿರುವ ಬಗ್ಗೆ ಪಕ್ಕದ ಮನೆಯವರಿಗೆ ತಿಳಿಸಲು ಮಹಿಳೆ ಬಂದಿದ್ದರು. ಈ ಸಮಯದಲ್ಲೇ ಸಿಲಿಂಡರ್​ ಸ್ಫೋಟಗೊಂಡಿದೆ. ಮೂವರಿಗೆ ಗಾಯಗಳಾಗಿತ್ತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ