Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ರಾಯಲ್‌ ಚಾಲೆಂಜರ್ಸ್‌ ತಂಡ ಕ್ರಿಕೆಟ್‌ ಚಾಂಪಿಯನ್‌

ರಾಯಲ್‌ ಚಾಲೆಂಜರ್ಸ್‌ ತಂಡ ಕ್ರಿಕೆಟ್‌ ಚಾಂಪಿಯನ್‌

Spread the love

ಮೂಡಲಗಿ: ಮಾರ್ನಿಂಗ್‌ ಸ್ಟಾರ್‌ ಕ್ರಿಕೆಟರ್ಸ್‌ ಹಾಗೂ ಲಯನ್ಸ್‌ ಕ್ಲಬ್‌ ಮೂಡಲಗಿ ಪರಿವಾರ ಸಹಯೋಗದಲ್ಲಿ ಸ್ಥಳೀಯ ಎಸ್‌ಎಸ್‌ಆರ್‌ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ 5 ದಿನಗಳ ಮೂಡಲಗಿ ಪ್ರಿಮಿಯರ್‌ ಲೀಗ್‌ -2023 ಕ್ರಿಕೆಟ್‌ ಟೂರ್ನಿಯಲ್ಲಿ ಪಟ್ಟಣದ ರಾಯಲ್‌ ಚಾಲೆಜರ್ ತಂಡವು ಪ್ರಥಮ ಸ್ಥಾನ ಪಡೆದು ರೂ.

50,001 ನಗದು ಬಹುಮಾನ ಮತ್ತು ಪಾರಿತೋಷಕವನ್ನು ತನ್ನದಾಗಿಸಿಕೊಂಡಿತು.

ದ್ವಿತೀಯ ಸ್ಥಾನವನ್ನು ಮೂಡಲಗಿಯ ಬುಲ್ಡೋಜರ್‌ ತಂಡ ಪಡೆದು ರೂ. 30,001 ಮತ್ತು ಪಾರಿತೋಷಕ ಪಡೆದುಕೊಂಡರೆ,
ಮೂಡಲಗಿ ಸ್ಟ್ರೈಕರ್ಸ ತಂಡವು ತƒತೀಯ ಸ್ಥಾನವನ್ನು ಪಡೆದುಕೊಂಡು ರೂ. 20,001 ಮತ್ತು ಪಾರಿತೋಷಕ ಪಡೆದುಕೊಂಡಿತು. ಪಂದ್ಯ ಪುರುಷೋತ್ತಮ ಮತ್ತು ಅತಿ ಹೆಚ್ಚು ವಿಕೆಟ್‌ ಪಡೆದ ಹಣಮಂತ ಗಣಿ ಒಂದು ಬೆ„ಸಿಕಲ್‌ ಮತ್ತು ಎಲ್‌ಇಡಿ ಟಿವಿ ಪಡೆದುಕೊಂಡರು. ಬೆಸ್ಟ್‌ ಬ್ಯಾಟ್ಸ್‌ಮನ್‌ ಪ್ರಶಸ್ತಿಯನ್ನು ಪಡೆದ ಜುನೇದ್‌ ಅವರಿಗೆ ಎಲ್‌ ಇಡಿ ಟಿವಿ ಬಹುಮಾನವಾಗಿ ನೀಡಲಾಯಿತು.

ಅತಿಥಿಗಳಾಗಿ ಆಗಮಿಸಿದ್ದ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಬಸವೇಶ್ವರ ಅರ್ಬನ್‌
ಸಹಕಾರಿ ಉಪಾಧ್ಯಕ್ಷ ಗಿರೀಶ ಢವಳೇಶ್ವರ, ವಿರೇಶ ಢವಳೇಶ್ವರ, ಪುರಸಭೆ ಸದಸ್ಯ ರವೀಂದ್ರ ಸಣ್ಣಕ್ಕಿ, ಮೂಡಲಗಿ ಶಿಕ್ಷಣ ಸಂಸ್ಥೆ ನಿರ್ದೇಶಕ ಸಂದೀಪ ಸೋನವಾಲಕರ, ಎನ್‌.ಟಿ. ಪಿರೋಜಿ, ಪ್ರೊ.ಎಸ್‌.ಬಿ. ಖೋತ, ಪ್ರಶಾಂತ ನಿಡಗುಂದಿ, ಸಂಜಯ ಮೋಕಾಶಿ, ಹಣಮಂತ ಬಸಳಿಗುಂದಿ, ಕೃಷ್ಣಾ ಕೆಂಪಸತ್ತಿ, ಸಂಜಯ ಮೋಕಾಶಿ, ಶಿವಾನಂದ ಗಾಡವಿ, ಮಲ್ಲು ಕುರಬಗಟ್ಟಿ, ರವಿ ಪತ್ತಾರ, ಮೇತ್ರಿ ಬಹುಮಾನ ವಿತರಿಸಿದರು


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ