Breaking News

ಸಿಂಹ ರೂಪ ತಾಳಿದ ಮಂಗಳೂರಿನ ಮಾಡೆಲ್

Spread the love

ಮಂಗಳೂರು: ವಿದೇಶಗಳಲ್ಲಿ ಹೆಚ್ಚಾಗಿ ಕಾಣ ಸಿಗುತ್ತಿದ್ದ ಫೇಸ್ ಪೈಂಟಿಂಗ್ ಇದೀಗ ನಮ್ಮ ರಾಜ್ಯದ ಕರಾವಳಿಯಲ್ಲೂ ಮೊದಲ ಬಾರಿಗೆ ಕಾಣ ಸಿಕ್ಕಿದೆ.

ಮಂಗಳೂರಿನ ಬೆಂದೂರ್ ವೆಲ್ ನಲ್ಲಿರುವ ಬ್ಯೂಟಿ ಲಾಂಜ್ ಆ್ಯಂಡ್ ಅಕಾಡೆಮಿಯ ಮುಖ್ಯಸ್ಥೆ ಚೇತನಾ ಎಂಬ ಮಾಡೆಲ್, ಮುಖದ ಮೇಲೆ ಮಾಡಿರುವ ಫೇಸ್ ಪೈಂಟಿಂಗ್ ಈಗ ಮಂಗಳೂರಿನಲ್ಲಿ ಸಖತ್ ಫೇಮಸ್ ಆಗಿದೆ. ವಿದೇಶಗಳಲ್ಲಿ ಹೆಚ್ಚಾಗಿ ಮಾಡುವ ಫೇಸ್ ಪೈಂಟಿಂಗ್ ಅನ್ನು ಇವರು ಮಾಡಿ ಈಗ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ಶಿವಮೊಗ್ಗ ಮೂಲದ ಮಾಡೆಲ್ ಶ್ರೇಯಾ ಭಟ್ ಎಂಬವರ ಮುಖದ ಮೇಲೆ ಸತತ 5 ಗಂಟೆಗಳ ಕಾಲ ಪೈಂಟಿಂಗ್ ಮಾಡಿ ಸಿಂಹದ ಕಳೆಯನ್ನು ಕೊಟ್ಟಿದ್ದಾರೆ. ಇದನ್ನು ಮಂಗಳೂರಿನ ಛಾಯಾಗ್ರಾಹಕ ವಿವೇಕ್ ಸಿಕ್ವೇರಾ ಸೆರೆಹಿಡಿದಿದ್ದಾರೆ. ಶ್ರೇಯಾ ಅವರ ಮುಖ ಮತ್ತು ಅವರ ಒರಿಜಿನಲ್ ಕೂದಲನ್ನು ಬಳಿಸಿಕೊಂಡು ಈ ಅದ್ಭುತ ಕಲೆಯನ್ನು ಹೊರ ತಂದಿದ್ದಾರೆ. ಸದ್ಯ ಈ ಸಿಂಹ ಈಗ ಕರಾವಳಿಯಲ್ಲಿ ಸಖತ್ ಫೇಮಸ್ ಆಗಿ ಎಲ್ಲರ ಮನ ಮತ್ತು ಮೊಬೈಲ್ ಗಳಲ್ಲಿ ತುಂಬಿ ಹೋಗಿದೆ.

ಸಿಂಹದ ಮೇಕಪ್ ನಲ್ಲಿ ಕಣ್ಣುಗಳನ್ನು ಮುಚ್ಚಿ ಕಣ್ಣಿನ ಹುಬ್ಬುಗಳಿಗೆ ವ್ಯಾಕ್ಸ್ ಹಚ್ಚಿ ಅದರ ಮೇಲೆ ಸಿಂಹದ ಕಣ್ಣನ್ನು ಚಿತ್ರಿಸಲಾಗಿದೆ. ಶ್ರೇಯಾಳ ತಲೆ ಕೂದಲನ್ನೇ ಬಳಸಿ ಸಿಂಹದ ಮುಖದ ಸುತ್ತಲಿನ ಕೂದಲನ್ನಾಗಿ ಪರಿವರ್ತಿಸಲಾಗಿದೆ. ಈ ಮೇಕಪ್ ಮುಗಿದ ಬಳಿಕ ಅಲ್ಲಿದ್ದವರೇ ನಿಜವಾದ ಸಿಂಹ ಅಂತ ಹೆದರಿಕೊಂಡಿದ್ದು ಇದೆ ಎಂದು ಚೇತನಾ ಅವರ ವಿದ್ಯಾರ್ಥಿಗಳು ಹೇಳುತ್ತಾರೆ.

 


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ