Breaking News

ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗೆ ಆತಂಕ; ಗಣೇಶಗುಡಿ – ಇಳವಾದಲ್ಲಿ ದೈತ್ಯ ಮೊಸಳೆ ಪ್ರತ್ಯಕ್ಷ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಸ್ಥಳವಾದ ಜೋಯಿಡಾ, ಗಣೇಶ ಗುಡಿ ಭಾಗದ ಕಾಳಿ ನದಿಯಲ್ಲಿ  ಮೊಸಳೆಗಳು ಹೆಚ್ಚಾಗಿದ್ದು, ಆತಂಕ ತಂದೊಡ್ಡಿವೆ.

ಜೋಯಿಡಾ ತಾಲೂಕಿನ ಗಣೇಶ ಗುಡಿಯಲ್ಲಿ ರಿವರ್ ರ‍್ಯಾಫ್ಟಿಂಗ್‌, ಕಯಾಕಿಂಗ್, ಬೋಟಿಂಗ್ ಹಾಗೂ ರಿಪವರ್ ಸ್ವಿಮ್ಮಿಂಗ್ ಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಿರುವಾಗ ಜಲಸಾಹಸ ಕ್ರೀಡೆ ನಡೆಸುವ ಸ್ಥಳದಲ್ಲೇ ಮೊಸಳೆ ಪ್ರತ್ಯಕ್ಷವಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಕಾಳಿ ನದಿ ನೀರಿನಲ್ಲಿ ಈ ಹಿಂದೆ ಮೊಸಳೆಗಳು ಇರಲಿಲ್ಲ. ಬಹುತೇಕ ಮೊಸಳೆಗಳು ದಾಂಡೇಲಿ ನಗರ ಭಾಗದ ಕಾಳಿ ನದಿಹರಿವಿನಲ್ಲಿ ಕಾಣಸಿಗುತಿದ್ದವು. ಆದರೀಗ ಗಣೇಶ ಗುಡಿಯ ಡ್ಯಾಮ್‌ನ ಕೆಳಭಾಗದಲ್ಲಿ ಮೊಸಳೆಗಳು ಕಾಣಸಿಗುತಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರವಾಸಿಗರಲ್ಲಿ ಭಯ ಹುಟ್ಟಿಸುವಂತೆ ಮಾಡಿದೆ.

ಆತಂಕದ ನಡುವೆ ಇಲ್ಲ ಕ್ರಮ.
ಗಣೇಶ ಗುಡಿಯ ಇಳವಾದ ಕಾಳಿ ನದಿ ಪ್ರದೇಶದಲ್ಲಿ ಜಲಸಾಹಸ ಕ್ರೀಡೆಗೆ ಪ್ರಸಿದ್ಧಿ ಪಡೆದಿದೆ. ಈ ಭಾಗದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನ ಪ್ರವಾಸಿಗರು ಭೇಟಿನೀಡಿ ಜಲಸಾಹಸ ಕ್ರೀಡೆಯಲ್ಲಿ ಭಾಗಿಯಾಗುತ್ತಾರೆ. ಆದರೇ ಇದೀಗ ಮೊಸಳೆಗಳು ಈ ಭಾಗದಲ್ಲಿಯೇ ಕಾಣಿಸಿಕೊಂಡಿದೆ. ಹೀಗಿರುವಾಗ ನಾಳೆದಿನ ಮೊಸಳೆಗಳು ನೀರಿಗಿಳಿದ ಪ್ರವಾಸಿಗರ ಮೇಲೆ ದಾಳಿಮಾಡಿದರೇ ಏನುಗತಿ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

ಇನ್ನು ದಾಂಡೇಲಿ ನಗರ ಪ್ರದೇಶದ ಕಾಳಿ ನದಿ ತೀರದಲ್ಲಿ ಜನರು ನದಿಗೆ ಇಳಿಯದಂತೆ ಮೊಸಳೆಗಳ ಬಗ್ಗೆ ಎಚ್ಚರಿಕೆ ವಹಿಸುವ ನಾಮಫಲಕ ಹಾಕಲಾಗಿದೆ. ಇದಲ್ಲದೇ ಮೊಸಳೆಗಳು ಹೊರಹೋಗದಂತೆ ಕಬ್ಬಿಣದ ಜಾಲಿ ಅಳವಡಿಸಲಾಗಿದೆ. ಆದರೇ ಪ್ರತಿ ದಿನ ಸಾವಿರಾರು ಜನ ಪ್ರವಾಸಿಗರು ಬರುವ ಇಳವಾ ಭಾಗದ ಜಲಸಾಹಸ ಕ್ರೀಡೆಯ ಪ್ರದೇಶದಲ್ಲಿ ಮೊಸಳೆಗಳ ಓಡಾಟದ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ಬಂದರೂ ನಾಮಫಲಕ ಅಳವಡಿಸುವ ಹಾಗೂ ಜನರಿಗೆ ಎಚ್ಚರಿಕೆ ಸೂಚನೆ ನೀಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿಲ್ಲ. ಕೊನೆ ಪಕ್ಷ ಪದೇ -ಪದೇ ಕಾಣಿಸುವ ಬೃಹತ್ ಗಾತ್ರದ ಮೊಸಳೆಯನ್ನು ಹಿಡಿಯುವ ಕೆಲಸಕ್ಕೂ ಕೈಹಾಕದೇ ನಿರ್ಲಕ್ಷ ಮಾಡಲಾಗಿದೆ.

ಒಂದು ವೇಳೆ ಮೊಸಳೆ ಪ್ರವಾಸಿಗರ ಮೇಲೆ ದಾಳಿ ಮಾಡಿದರೇ ಏನು ಗತಿ? ಎಂಬ ಆತಂಕ ತಂದೊಡ್ಡಿದೆ. ಇದೀಗ ದಸರಾ ರಜೆ ಇರುವುದರಿಂದ ಹಲವು ಪ್ರವಾಸಿಗರು ದಾಂಡೇಲಿಯತ್ತ ಮುಖ ಮಾಡಿದ್ದಾರೆ. ಹೀಗಾಗಿ ದಾಂಡೇಲಿ, ಜೋಯಿಡಾ ಭಾಗದಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಅವರ ಎಚ್ಚರಿಕೆಯಲ್ಲಿ ಅವರು ಇರದಿದ್ದರೇ ಅನಾಹುತ ಮಾತ್ರ ಕಟ್ಟಿಟ್ಟ ಬುತ್ತಿ ಎನ್ನುವಂತಿದೆ.


Spread the love

About Laxminews 24x7

Check Also

ವೋಟ್‌ಚೋರಿಗೆ SIR ದುರ್ಬಳಕೆ..? – ಬೆಂಗಳೂರಿನ ಜನರಿಗೂ ಸಿಎಂ ಡಿಕೆಶಿ ಎಚ್ಚರಿಕೆ

Spread the loveಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್ ಫಾರಂ-7 ವಿವಾದ ಮತ್ತೊಂದು ಮಜಲಿಗೆ ತಲುಪಿದೆ. ಬೆಂಗಳೂರಿನಲ್ಲೂ ಎಸ್‌ಐಆರ್ ಸಂಬಂಧ ಇಬ್ಬರ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ