Breaking News

ದೇವೇಗೌಡರು ಹಳ್ಳಿಯಲ್ಲಿ ಹುಟ್ಟಿ ಪ್ರಧಾನಿ ಆದರು: ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋದರೆ ತಪ್ಪಿಲ್ಲ : ಹೆಚ್ ವಿಶ್ವನಾಥ

Spread the love

ಹುಬ್ಬಳ್ಳಿ : ರಾಜಕಾರಣದಲ್ಲಿ ಯಾರು ಕನಸು ಕಂಡಿರೋದಿಲ್ಲ. ಅದರಂತೆ ಸಿಎಂ ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋದರೆ ತಪ್ಪಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ ಅವರು ಸಿದ್ದರಾಮಯ್ಯ ರಾಷ್ಟ್ರದ ರಾಜಕಾರಣಕ್ಕೆ ಹೋಗಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

 

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾಕೆ ರಾಷ್ಟ್ರದ ರಾಜಕಾರಣಕ್ಕೆ ಹೋಗಬಾರದು. ಈ ಹಿಂದೆ ಹೆಚ್ ಡಿ ದೇವೇಗೌಡ ಅವರು ಪ್ರಧಾನಮಂತ್ರಿ ಆಗುವ ಯಾವುದೇ ಕನಸು ಕಂಡಿರಲಿಲ್ಲ. ಅದರಂತೆ ಸಿದ್ದರಾಮಯ್ಯ ಅವರು ಯಾವುದೇ ಕನಸು ಕಂಡಿಲ್ಲ. ಆದರೆ ನಾವು ಕನಸು ಕಾಣುತ್ತೇವೆ ಎಂದು ಹೇಳಿದರು.

ಇನ್ನು ಸದ್ಯದ ಬಿಜೆಪಿ ಪಕ್ಷದ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿ, ರಾಜಕಾರಣಕ್ಕಾಗಿ ಕೆಲವರು ತಮ್ಮ ಮಕ್ಕಳು, ಕುಟುಂಬವನ್ನು ಬಲಿ ಕೊಟ್ಟಿದ್ದಾರೆ. ಯಾರು ಅವರವರ ಸಮಾಜವನ್ನು ತುಳಿಯುವುದಿಲ್ಲ. ಬದಲಾಗಿ ಬೇರೆಯವರನ್ನು ತುಳಿದು ರಾಜಕಾರಣದಲ್ಲಿ ಬೆಳೆಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ