Breaking News

ಪೆಟ್ರೋಲ್ ಪಂಪಿಗೆ ಆಗಮಿಸಿ, ಸಾವಿರ ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು, ಪರಾರಿ

Spread the love

ದ್ವಿಚಕ್ರ ವಾಹನ ಸವಾರನು ಪೆಟ್ರೋಲ್ ಪಂಪಿಗೆ ಆಗಮಿಸಿ, ಸಾವಿರ ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು, ಪರಾರಿ ಆಗುತ್ತಿರುವ ಘಟನೆಯೊಂದು ಶಿರುಗುಪ್ಪಿ ಗ್ರಾಮದ ಪಂಪುಗಳಲ್ಲಿ ಸಂಭವಿಸುತ್ತಿದ್ದು, ಪಂಪ್ ಕಾರ್ಮಿಕರು ಹೈರಾಣಾಗಿದ್ದಾರೆ.

ಶಿರುಗುಪ್ಪಿ ಗ್ರಾಮದಲ್ಲಿ ಸುಮಾರು ಮೂರು ಪೆಟ್ರೋಲ್ ಪಂಪ್‌ಗಳಿದ್ದು, ಉಗಾರ್ ರಸ್ತೆಯಲ್ಲಿರುವ ಪೆಟ್ರೋಲ್ ಪಂಪಿನಲ್ಲಿ ಸತತ ಮೂರನೇ ಬಾರಿಗೆ ಇಂಥದೊಂದು ಘಟನೆ ಸಂಭವಿಸಿದೆ. ಇದಲ್ಲದೆ ಜುಗೂಳ ರಸ್ತೆಯಲ್ಲಿರುವ ಪಂಪ್‌ನಲ್ಲಿಯೂ ಸಹ ಇಂಥದೇ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ

. ಈ ಕುರಿತು ಪಂಪಿನಲ್ಲಿ ಕೆಲಸ ಮಾಡುವ ಕಾರ್ಮಿಕರಾದ ರಮೇಶ್ ಬಾಗೇನೂರ್ ಯೋಗೇಶ್ ವಡ್ಡರ್, ಕಿರಣ ಶಹಾಪೂರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪೆಟ್ರೋಲ್ ಹಾಕಿಸಿಕೊಂಡು ಪರಾರಿ ಆಗುತ್ತಿರುವ ದೃಶ್ಯ ಪಂಪಿನಲ್ಲಿರುವ ಸಿಸಿ ಟಿವ್ಹಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಡ ಕುಟುಂಬದಿಂದ ಬಂದ ಯುವಕರು, ಹೊಟ್ಟೆಪಾಡಿಗಾಗಿ ಪಂಪಿನಲ್ಲಿ ಕೆಲಸ ಮಾಡುತ್ತಿದ್ದು, ಸತತವಾಗಿ ನಡೆಯುತ್ತಿರುವ ಇಂತಹ ಘಟನೆಗಳಿಂದ ಹೈರಾಣಾಗಿದ್ದು, ಆ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನವನ್ನು ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ಪೆಟ್ರೋಲ್ ಪಂಪಿನ ಕಾರ್ಮಿಕರು ಮೈಯೆಲ್ಲ ಕಣ್ಣಾಗಿಸಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಬಂದೊದಗಿದೆ.


Spread the love

About Laxminews 24x7

Check Also

ಅತ್ತೆ-ಮಾವನ ಮನಸ್ಥಿತಿ ಎಂದಿಗೂ ಬದಲಾಗಲ್ಲʼ; ವಿಡಿಯೋ ರೆಕಾರ್ಡ್‌ ಮಾಡಿ ನೇಣಿಗೆ ಶರಣಾದ ಶಿಕ್ಷಕಿ

Spread the loveನವದೆಹಲಿ: ಮದುವೆಯಾದ 8 ತಿಂಗಳ ಬಳಿಕ ಸರ್ಕಾರಿ ಶಿಕ್ಷಕಿಯೊಬ್ಬರು ವಿಡಿಯೋ ರೆಕಾರ್ಡ್‌ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ