Breaking News

ರೈತ ಸಾವನ್ನಪ್ಪಿದ ಕೆಲವೇ ಗಂಟೆಯಲ್ಲಿ ಪ್ರಾಣಬಿಟ್ಟ ಎತ್ತು.

Spread the love

ಗದಗ: ಎತ್ತು ಮತ್ತು ಅದರ ಮಾಲೀಕ ಒಂದೇ ದಿನ ಮೃತಪಟ್ಟ ಘಟನೆ ಗದಗ ತಾಲೂಕಿನ ಬೆನಕನಕೊಪ್ಪದಲ್ಲಿ‌ ಗುರುವಾರ ನಡೆದಿದೆ. ಅಕಾಲಿಕವಾಗಿ ಮಾಲೀಕ ಭೀಮಪ್ಪ‌ ಕಣಗಿನಹಾಳ (90) ಮರಣ ಹೊಂದಿದ್ದರು.

ಬಳಿಕ ಕೆಲವೇ ಗಂಟೆಗಳಲ್ಲಿ ಕೃಷಿ ಕಾರ್ಯ‌ದಲ್ಲಿ ರೈತನ ಜೊತೆಗಿದ್ದ ಪ್ರೀತಿಯ ಎತ್ತು ಕೂಡ ಕೊನೆಯುಸಿರೆಳೆದಿದೆ.

ಮಾಲೀಕನ‌ ಸಾವಿನ‌ ಬೆನ್ನಲ್ಲೇ ಎತ್ತು ಸಾವನ್ನಪ್ಪಿರುವ ಘಟನೆ ಕಂಡು ಗ್ರಾಮಸ್ಥರು ಮಮ್ಮಲ‌ ಮರುಗಿದರು. ಮನಕಲಕುವ ಘಟನೆ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಕಣ್ನೀರಿಟ್ಟರು. ಭೀಮಪ್ಪನ ಜಮೀನಿನಲ್ಲಿ ಅಕ್ಕ-ಪಕ್ಕ‌ ಸಮಾಧಿ ಮಾಡಿ ಲಿಂಗಾಯತ ವಿಧಿವಿಧಾನದಂತೆ ರೈತ ಭೀಮಪ್ಪ ಮತ್ತು ಅವರ ಎತ್ತಿನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮನಕಲಕುವ ಅಂತ್ಯಸಂಸ್ಕಾರಲ್ಲಿ ಬೆನಕನಕೊಪ್ಪ ಸೇರಿದಂತೆ ಹಲವಾರು ಗ್ರಾಮಸ್ಥರು ಭಾಗಿಯಾಗಿದ್ದರು.

ಈ ಹಿಂದೆ ಅಪ್ಪ-ಮಗ, ತಾಯಿ-ಮಗ, ಗಂಡ-ಹೆಂಡತಿ ಸಾವಿನಲ್ಲೂ ಒಂದಾದ ಘಟನೆಗಳು ನಡೆದಿದ್ದವು. ಇದೀಗ ಗದಗದಲ್ಲಿ ಮಾಲೀಕನ ಜೊತೆ ಎತ್ತು ಕೂಡ ಸಾವನ್ನಪ್ಪಿರುವುದು ಮನಕಲಕುವಂತಿದೆ.

 


Spread the love

About Laxminews 24x7

Check Also

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Spread the loveನವದೆಹಲಿ: ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ