Breaking News
Home / ರಾಜಕೀಯ / ಜಾನಪದ ವಿದ್ವಾಂಸನಿಗೆ ಗ್ರಂಥ ಅರ್ಪಣೆ

ಜಾನಪದ ವಿದ್ವಾಂಸನಿಗೆ ಗ್ರಂಥ ಅರ್ಪಣೆ

Spread the love

ಮೂಡಲಗಿ: ‘ಘಟಪ್ರಭೆ ಧಬಧಬೆಗೆ ಜೀವಜಲ ದಡಗುಟ್ಟಿ ಹರಿದಿರುವಂತೆ, ಭರವಸೆಯ ತೂಗು ಸೇತುವೆ ದಾಟಿ’ ಕವಿ ಚನ್ನವೀರ ಕಣವಿ ಅವರು ಗೋಕಾಕದ ಜಾನಪದ ವಿದ್ವಾಂಸ ಸಿ.ಕೆ. ನಾವಲಗಿ ಅವರ ಕುರಿತು ಬರೆದಿರುವ ಸುನೀತದ ಸಾಲು ಇದು. ಈ ಸಾಲುಗಳಿಗೆ ಅರ್ಥ ಬರುವಂತೆ ಬಾಳಿದವರು ಈ ಸಾಹಿತಿ.

 

ಸಿ.ಕೆ. ನಾವಲಗಿ ಅವರು ಮೂರೂವರೆ ದಶಕಗಳ ಅಧ್ಯಯನ, ಪರಿಶ್ರಮದ ಮುಪ್ಪರಿಗೊಂಡ ಪರಿಪಕ್ವತೆಯ ವ್ಯಕ್ತಿತ್ವ. ಓದು, ಬರವಣಿಗೆ, ಅಧ್ಯಾಪನಗಳೊಂದಿಗೆ ಜಾನಪದ ಸಾಹಿತ್ಯದಲ್ಲಿ ಅಗ್ರಗಣ್ಯ ಎನಿಸಿಕೊಂಡಿದ್ದಾರೆ.

‘ನನ್ನ ನಂತರ ನನ್ನ ರೀತಿಯಲ್ಲಿ ಆಲೋಚಿಸುವ ಗೋಕಾಕ ಪರಿಸರದ ಏಕೈಕ ವ್ಯಕ್ತಿ ಸಿ.ಕೆ. ನಾವಲಗಿ’ ಎಂದು ಚಂದ್ರಶೇಖರ ಕಂಬಾರ ಅವರ ಹೇಳಿಕೆ ಅನ್ವರ್ಥ.

ಚನ್ನಬಸಪ್ಪ ಕಲ್ಲಪ್ಪ ನಾವಲಗಿ ಕಿತ್ತೂರು ತಾಲ್ಲೂಕು ಬಸರಕೋಡದಲ್ಲಿ ಹುಟ್ಟಿದವರು. ಅಪ್ಪ ಕಲ್ಲಪ್ಪ, ಅವ್ವ ಬಸಲಿಂಗವ್ವ ಅವರು ಹೇಳುತ್ತಿದ್ದ ತ್ರಿಪದಿ, ಜಾನಪದ ಕತೆಗಳಿಂದ ಚನ್ನಬಸಪ್ಪ ದೇಸೀಯತೆಗೆ ಪ್ರಭಾವಿತರಾಗಿದ್ದರು.

1985ರಲ್ಲಿ ಗೋಕಾಕದ ಜೆಎಸ್‌ಎಸ್ ಪದವಿ ಕಾಲೇಜುದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿ, ಕೆಲವು ವರ್ಷ ಪ್ರಾಚಾರ್ಯರಾಗಿ 2016ರಲ್ಲಿ ನಿವೃತ್ತರಾಗಿದ್ದಾರೆ.

ಜಾನಪದ, ವಚನಸಾಹಿತ್ಯ, ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ಸಂಪಾದನೆ ಹೀಗೆ 60ಕ್ಕೂ ಅಧಿಕ ಮೌಲಿಕ ಗ್ರಂಥಗಳನ್ನು ಬರೆದಿದ್ದಾರೆ. ‘ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು- ಒಂದು ಅಧ್ಯಯನ’ ವಚನ ಸಾಹಿತ್ಯವನ್ನು ಜಾನಪದ ಹಿನ್ನೆಲೆಯಲ್ಲಿ ಉನ್ನತ ಸಂಶೋಧನೆಗೆ ಒಳಪಡಿಸಿದ ಮೊದಲ ಪಿಎಚ್.ಡಿ. ಗ್ರಂಥ’ ಎಂದು ಸಂಶೋಧಕ ವೀರಣ್ಣ ರಾಜೂರ ಅವರ ಮನದಾದಳ ಅನಿಸಿಕೆ.


Spread the love

About Laxminews 24x7

Check Also

ವನ್ಯಜೀವಿಗಳ ದಾಹ ತೀರಿಸುವ ಕೃತಕ ನೀರಿನ ತೊಟ್ಟಿಗಳು

Spread the loveಹಾನಗಲ್: ಕಡು ಬೇಸಿಗೆ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಸಿದೆ. ಕಾಡಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ಸಂಕಷ್ಟ ಅರಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ