Breaking News
Home / ರಾಜಕೀಯ / 8 ಗ್ರಾಮಗಳ ಕೆರೆ ತುಂಬಿಸುವ ಕಾಮಗಾರಿ ಶೀಘ್ರ ಪೂರ್ಣ

8 ಗ್ರಾಮಗಳ ಕೆರೆ ತುಂಬಿಸುವ ಕಾಮಗಾರಿ ಶೀಘ್ರ ಪೂರ್ಣ

Spread the love

ಗಳಿ: ‘ಅಥಣಿ ತಾಲ್ಲೂಕಿನ ಪೂರ್ವ ಭಾಗದ ಅಡಹಳ್ಳಿ, ಅಡಹಳ್ಳಟ್ಟಿ, ಕೋಹಳ್ಳಿ, ರಾಮತೀರ್ಥ ಸೇರಿದಂತೆ 8 ಗ್ರಾಮಗಳ ಕೆರೆ ತುಂಬಿಸುವ ಎರಡನೆಯ ₹95 ಕೋಟಿ ವೆಚ್ಚದ ಪ್ರಕ್ರಿಯೆ ಮುಗಿದಿದೆ. ಕಾಮಗಾರಿ ಕಾರ್ಯ ಈಗ ಪ್ರಾರಂಭವಾಗಲಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

 

ಸಮೀಪದ ಅಡಹಳ್ಳಟ್ಟಿ ಗ್ರಾಮದ ತಾಂವಶಿ ತೋಟದಲ್ಲಿ ಕೆರೆ ತುಂಬುವ ನೀರಾವರಿ ಯೋಜನೆಯ ಪೈಪ್‌ಲೈನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕರಿಮಸೂತಿ ಏತನೀರಾವರಿ ಕಾಲುವೆಯಿಂದ ವಂಚಿತವಾದ ಹಳ್ಳಿಗಳ ಭೂ ಪ್ರದೇಶಕ್ಕೆ ಸುಮಾರು ₹142 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸಲು ಪ್ರಥಮ ಹಂತದಲ್ಲಿ ₹49 ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಕಾಮಗಾರಿ ಮುಕ್ತಾಯ ಹಂತದಲ್ಲಿದೆ, 2ನೇ ಹಂತದ ಕಾಮಗಾರಿಗೆ ಆದಷ್ಟು ಬೇಗ ಪ್ರಾರಂಭಿಸಿ ಈ ಭಾಗ ಬರುವ ದಿನಗಳಲ್ಲಿ ಹಸಿರಾಗಲು ಕಾಲ ಸನ್ನಿಹಿತವಾಗಿದೆ’ ಎಂದರು.

ಅಡಹಳ್ಳಟ್ಟಿ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ತಾಂವಶಿ ಮಾತನಾಡಿ, ‘ಲಕ್ಷ್ಮಣ ಸವದಿ ಅವರು ವಿಧಾನ ಪರಿಷತ್‌ ಸದಸ್ಯರಾಗಿದ್ದರೂ ರಾಜ್ಯದಲ್ಲಿಯೇ ಅತಿ ಹೆಚ್ಚು ಅನುದಾನ ತಂದಿದ್ದಾರೆ’ ಎಂದರು.

ಸಿ.ಎಸ್.ನೇಮಗೌಡ, ರಮೇಶ ಗಾಣಿಗೇರ, ಸಿದರಾಯ ನಾಯಿಕ, ಚಿಕ್ಕನೀರಾವರಿ ಇಲಾಖೆ ಅಧಿಕಾರಿ ಎಸ್.ಎಸ್. ಮಾಕಾಣಿ, ಘಟಿವಾಳಪ್ಪ ಗುಡ್ಡಾಪುರ, ನೂರ್‌ ಅಹ್ಮದ್‌ ಡೊಂಗರಗಾಂವ ಹಲವರು ಇದ್ದರು.


Spread the love

About Laxminews 24x7

Check Also

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

Spread the love ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಮೇಲೆ ಭಾರತಕ್ಕೆ ಕಪ್ಪುಚುಕ್ಕೆಯಾಗಿರುವ ಪಾಕ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ