Breaking News

ದೇವೇಗೌಡರನ್ನು ನೋಡ್ತಿದ್ದಂತೆ ಕೈಮುಗಿದು ಹೇಗೀದ್ದೀರಿ ಸರ್ ಎಂದ್ರು ಸಿದ್ಧರಾಮಯ್ಯ: 6 ವರ್ಷಗಳ ನಂತ್ರ ಗುರು -ಶಿಷ್ಯರ ಭೇಟಿ

Spread the love

ಬೆಂಗಳೂರು: ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿಯಾದ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಗ್ಯ ವಿಚಾರಿಸಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ, ದೇವೇಗೌಡರನ್ನು ನೋಡುತ್ತಿದ್ದಂತೆ ಕೈಮುಗಿದು ಹೇಗಿದ್ದೀರಿ ಸರ್ ಎಂದು ಆರೋಗ್ಯ ವಿಚಾರಿಸಿದ್ದಾರೆ.

 

ವಿಧಾನಮಂಡಲ ಕಲಾಪ ಮುಗಿದ ನಂತರ ಸಿದ್ದರಾಮಯ್ಯ ಅವರು ಶಾಸಕರಾದ ಜಮೀರ್ ಅಹಮದ್, ಭೈರತಿ ಸುರೇಶ್ ಮೊದಲಾದವರ ಜೊತೆಗೆ ದೇವೇಗೌಡರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.

ಆರು ವರ್ಷಗಳ ನಂತರ ಸಿದ್ದರಾಮಯ್ಯ, ದೇವೇಗೌಡರು ಭೇಟಿಯಾಗಿದ್ದಾರೆ. ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನೀರಾವರಿ ವಿಚಾರವಾಗಿ ಸಮಾಲೋಚನೆ ನಡೆಸಲು ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲ್ ಜೊತೆಗೆ ಭೇಟಿಯಾಗಿದ್ದರು. ಮತ್ತೆ ದೇವೇಗೌಡರನ್ನು ಭೇಟಿಯಾಗಿರಲಿಲ್ಲ. ಈಗ ಅನಾರೋಗ್ಯದ ಕಾರಣ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ