Breaking News

ಹುಬ್ಬಳ್ಳಿ| ಮನೆ ಮನೆಯಲ್ಲೂ ಹಿಟ್ಟಿನ ಗಿರಣಿ…

Spread the love

ಹುಬ್ಬಳ್ಳಿ: ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಗೋಧಿ, ಜೋಳವನ್ನು ಗಿರಣಿಗೆ ಹಾಕಿಸಿಕೊಂಡು ಬರುವುದು ಸಾಕಾಗಿದ್ದರೆ, ನಿಮಗಾಗಿಯೇ ಬಂದಿದೆ ಹೊಸದೊಂದು ಪೋರ್ಟೆಬಲ್ ಗಿರಣಿ. ಇದು ಧಾರವಾಡದ ಕೃಷಿ ಮೇಳದಲ್ಲಿನ ಒಂದು ಆಕರ್ಷಣೆ.

ಪ್ರತಿ ಬಾರಿ ಗಿರಣಿಗೆ ಕಾಳು ಒಯ್ದು ಕೊಡುವುದು, ಅಲ್ಲಿ ಕಾಯುವುದು ಇಂಥ ಜಂಜಾಟಗಳಿಂದ ತಪ್ಪಿಸಲು ಮನೆಯಲ್ಲೇ ಎಲ್ಲ ರೀತಿಯ ಕಾಳುಗಳನ್ನು ಹಿಟ್ಟು ಮಾಡಲು ‘ಗ್ರೈಂಡ್‌ಮಾ’ ಕಂಪನಿಯು ಸಂಪೂರ್ಣ ಸ್ವಯಂ ಚಾಲಿತ ‘ಹೈಟೆಕ್’ ಯಂತ್ರವೊಂದನ್ನು ಪ‍ರಿಚಯಿಸಿದೆ.

 

ಇದು ನಿಮ್ಮ ಮನೆಯ ಏರ್ ಕೂಲರ್ ಅಥವಾ ಡಿಶ್ ವಾಷರ್‌ಗೆ ಬೇಕಾಗುವಷ್ಟು ಜಾಗವನ್ನು ಮಾತ್ರ ಆಕ್ರಮಿಸುತ್ತದೆ. ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕದಲ್ಲೇ ಕಾಳುಗಳನ್ನು ರುಬ್ಬುತ್ತದೆ. ಒಂದು ಎಚ್‌.ಪಿ. ಯಂತ್ರವು ಗಂಟೆಗೆ 10 ಕೆ.ಜಿ. ಮತ್ತು ಎರಡು ಎಚ್‌.ಪಿ. ಯಂತ್ರವು ಗಂಟೆಗೆ 20 ಕೆ.ಜಿ. ಕಾಳುಗಳನ್ನು ಹಿಟ್ಟು ಮಾಡುತ್ತದೆ.ಸಾಮಾನ್ಯವಾಗಿ ಗಿರಣಿಯಲ್ಲಿ ಒಂದು ಕೆ.ಜಿ. ಜೋಳ, ಗೋಧಿಯನ್ನು ಹಿಟ್ಟು ಮಾಡಿಸಲು ₹5ರಿಂದ ₹6 ತಗುಲುತ್ತದೆ. ಆದರೆ, ಒಂದು ಕೆ.ಜಿ. ಹಿಟ್ಟು ರುಬ್ಬಲು ತಗುಲುವುದು ಕೇವಲ 35 ಪೈಸೆ ವೆಚ್ಚವಾಗುತ್ತದೆ ಎಂಬುದೇ ಈ ಯಂತ್ರದ ವಿಶೇಷ. ಹೋಟೆಲ್‌ಗಳಿಗೆ ಈ ಯಂತ್ರ ಹೇಳಿ ಮಾಡಿಸಿದಂತಿದೆ.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ