Breaking News

ಸರ್ಕಾರದ ಸೂಚನೆಗೂ ಡೋಂಟ್‌ ಕೇರ್‌: ನಿರಾಣಿ ಶುಗರ್ಸ್ ಸೇರಿ 13 ಸಕ್ಕರೆ ಕಾರ್ಖಾನೆಗಳಿಂದ ಬಿಲ್ ಬಾಕಿ

Spread the love

ಬೆಂಗಳೂರು: ರೈತರ ಬಾಕಿ ಬಿಲ್ ಪಾವತಿಸುವಂತೆ ಸರ್ಕಾರ ಡೆಡ್ ಲೈನ್ ನೀಡಿದರೂ, ಇನ್ನೂ 13 ಸಕ್ಕರೆ ಕಾರ್ಖಾನೆಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ರೈತರಿಗೆ ಬಿಲ್ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳ ಪೈಕಿ ಸಚಿವ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ಕಾರ್ಖಾನೆ ಕೂಡ ಸೇರಿದೆ.

ಕಬ್ಬು ಬೆಳೆಗಾರರಿಗೆ ಸಾಮಾನ್ಯವಾಗಿ ಸಕ್ಕರೆ ಕಾರ್ಖಾನೆಗಳು ಪ್ರತಿ ವರ್ಷ ಕೋಟ್ಯಂತರ ರೂ. ಬಿಲ್ ಬಾಕಿ ಉಳಿಸಿಕೊಂಡಿರುತ್ತವೆ. ರೈತರು ಈ ಬಗ್ಗೆ ಹೋರಾಟ ಮಾಡುತ್ತಲೇ ಇರುತ್ತವೆ. ಈ ಬಾರಿಯೂ ಅಂದರೆ ಜು.1, 2021 ರಿಂದ ಜೂ.30, 2022ರವರೆಗಿನ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗಳು ಸಾವಿರಾರು ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದವು. ಬಳಿಕ ಸರ್ಕಾರ ಮಧ್ಯೆ ಪ್ರವೇಶಿಸಿ ಸಕ್ಕರೆ ಕಾರ್ಖಾನೆಗಳ ಜತೆ ಸಭೆ ನಡೆಸಿ, ಬಾಕಿ ಬಿಲ್ ಪಾವತಿಸುವಂತೆ ಖಡಕ್ ಸೂಚನೆ ನೀಡಿತ್ತು.

ಜೂನ್​​ ತಿಂಗಳಿನಲ್ಲಿ ಬಿಲ್ ಪಾವತಿಸುವಂತೆ ಗಡುವು ನೀಡಿತ್ತು. ಇದರ ಪರಿಣಾಮವಾಗಿ ಬಹುತೇಕ ಸಕ್ಕರೆ ಕಾರ್ಖಾನೆಗಳು ಬಾಕಿ ಬಿಲ್ ಅನ್ನು ರೈತರಿಗೆ ಪಾವತಿಸಿವೆ. ಆದರೆ, ಸರ್ಕಾರದ ಖಡಕ್ ಸೂಚನೆಗೂ ಕ್ಯಾರೆ ಎನ್ನದ ಕೆಲ ಸಕ್ಕರೆ ಕಾರ್ಖಾನೆಗಳು ಜುಲೈ ತಿಂಗಳು ಮುಗಿದರೂ ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿಸಿಲ್ಲ.

ಯಾವೆಲ್ಲಾ ಕಾರ್ಖಾನೆಗಳಿಂದ ಬಿಲ್ ಬಾಕಿ?:

  • ನಿರಾಣಿ ಶುಗರ್ಸ್, ಬಾಗಲಕೋಟೆ- 9.98 ಕೋಟಿ ರೂ.
  • ಮಲಪ್ರಭಾ ಎಸ್​​.ಎಸ್.ಕೆ, ಬೆಳಗಾವಿ- 6.95 ಕೋಟಿ ರೂ.
  • ಜಮಖಂಡಿ ಶುಗರ್ಸ್- 7.95 ಕೋಟಿ ರೂ.
  • ಶ್ರೀ ಸಾಯಿ ಪ್ರಿಯ ಶುಗರ್ಸ್- 4.25 ಕೋಟಿ ರೂ.
  • ಬೀದರ್ ಎಸ್​​.ಎಸ್.ಕೆ- 9.62 ಕೋಟಿ ರೂ.
  • ಇಂಡಿಯನ್ ಶುಗರ್ಸ್- 3.06 ಕೋಟಿ ರೂ.
  • ಜಮಖಂಡಿ ಶುಗರ್ಸ್, ವಿಜಯಪುರ- 1.06 ಕೋಟಿ ರೂ.
  • ನಂದಿ ಎಸ್​​.ಎಸ್.ಕೆ, ವಿಜಯಪುರ- 13.38 ಕೋಟಿ ರೂ.
  • ಶ್ರೀ ಬಸವೇಶ್ವರ ಶುಗರ್ಸ್, ವಿಜಯಪುರ- 19.57 ಕೋಟಿ ರೂ.
  • ಉಗಾರ್ ಶುಗರ್ಸ್, ಕಲಬುರಗಿ- 12.12 ಕೋಟಿ ರೂ.
  • ಉಗಾರ್ ಶುಗರ್ಸ್, ಬೆಳಗಾವಿ- 33.06 ಕೋಟಿ ರೂ.
  • ಕೋರ್ ಗ್ರೀನ್ ಶುಗರ್ಸ್, ಯಾದಗಿರಿ- 1.87 ಕೋಟಿ ರೂ.
  • ಜೆಮ್ ಶುಗರ್ಸ್, ಬೆಳಗಾವಿ- 7.08 ಕೋಟಿ ರೂ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ