Breaking News

ಕ್ರೈಂ, ಥ್ರಿಲ್ಲರ್ ಸಿನಿಮಾದಂತೆ ರೋಚಕವಾಗಿ ಕಂಡುಬಂದ ಲೂಟಿಕೋರರು ವರ್ಸಸ್ ರಕ್ಷಕರು ಟಾಸ್ಕ್

Spread the love

ಬಿಗ್‌ಬಾಸ್‌ನಲ್ಲಿ ಈ ವಾರ ಲೂಟಿಕೋರರು ವರ್ಸಸ್ ರಕ್ಷಕರು ಟಾಸ್ಕ್ ಭಾರೀ ಹೈಲೈಟ್ ಆಗಿದೆ. ನಾಮಿನೇಟ್ ಆಗಿ ಜೈಲಲ್ಲಿರೋ ಸ್ಪರ್ಧಿಗಳೇ ಲೂಟಿಕೋರರಾಗಿದ್ದರು. ಈ ಪೈಕಿ ಓರ್ವ ಪುರುಷ ಸ್ಪರ್ಧಿ ತಾಂಡವ್ ಸೇರಿದಂತೆ ಇನ್ನುಳಿದ ಎಲ್ಲಾ ಸ್ಪರ್ಧಿಗಳು ಮಹಿಳೆಯರೇ ಆಗಿದ್ದರು. ಸೌಂದರ್ಯ, ಆಸಿಯಾ, ಲಕ್ಷ್ಮಿ, ಕುಮಾರಿ ಹಾಗೂ ಸೋನಿಕಾ ಲೂಟಿಕೋರರ ಗ್ಯಾಂಗ್‌ನಲ್ಲಿ ಆಟವಾಡಿದ್ದರು. ಅತ್ಯಂತ ಕಷ್ಟವಾಗಿದ್ದ ಟಾಸ್ಕ್‌ನ್ನು ಚಾಣಾಕ್ಷತನದಿಂದ ಲೂಟಿಕೋರರ ಗ್ಯಾಂಗ್ ಲೂಟಿ ಮಾಡಿ ಆಡಿಯನ್ಸ್‌ಗೆ ಭರ್ಜರಿ ಮಜ ಕೊಟ್ಟಿದೆ.

ವಜ್ರ ಕದಿಯುವ ಪ್ಲ್ಯಾನ್‌ನಲ್ಲಿ ಲಕ್ಷ್ಮಿ, ಆಸಿಯಾ ಮತ್ತು ಸೌಂದರ್ಯ ತಮ್ಮ ಚಾಣಾಕ್ಷತನವನ್ನು ತೋರಿಸಿದರೆ, ತಾಂಡವ್ ಸೆಕ್ಯುರಿಟಿ ತಂಡವನ್ನು ತನ್ನ ಮಾತಿನ ಮೂಲಕ ಮ್ಯಾನಿಪುಲೇಟ್ ಮಾಡುವ ಮೂಲಕ ಸಕ್ಸಸ್ ಆದ್ರು. ಡೈಮಂಡ್ ಕಾಣೆಯಾಗಿರುವುದು ಸೆಕ್ಯುರಿಟಿ ತಂಡಕ್ಕೆ ತಿಳಿದ ನಂತರವೂ, ಲೂಟಿಕೋರರು ಗಮನವನ್ನು ತಮ್ಮ ಮೇಲಿಂದ ಬೇರೆಡೆಗೆ ತಿರುಗಿಸಿ ಸೌಂದರ್ಯ ಡೈಮಂಡ್‌ನ್ನು ಭದ್ರವಾಗಿ ಕ್ರೀಮ್‌ಬಾಕ್ಸ್‌ನಲ್ಲಿ ಮುಚ್ಚಿಟ್ಟಿದ್ದರು.

ಮುಖ್ಯವಾಗಿ ಕಿರೀಟವನ್ನು ಬದಲಾಯಿಸುವುದು ಸುಲಭವಾಗಿರಲಿಲ್ಲ. ಸರಿಯಾದ ಸಮಯ ನೋಡಿಕೊಂಡು ಸೆಕ್ಯುರಿಟಿಗಳ ಗಮನ ಬೇರೆಡೆ ಸೆಳೆದು ಆ ಕ್ಷಣಕ್ಕೆ ಕಿರೀಟ ಬದಲಿಸಿದ್ದು ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ಅಲ್ಲಿ ಸೌಂದರ್ಯ ಚುರುಕುತನ, ತಾಂಡವ್ ರಾಮ್ ಜೊತೆಗಿನ ಕೋಆರ್ಡಿನೇಷನ್ ಸಖತ್ ವರ್ಕೌಟ್ ಆಗಿದೆ. ವೇಗದ ಆಟವಾಡಿದ ಸ್ಪರ್ಧಿಗಳಿಗೆ ಈ ಬಾರಿ ಕಿಚ್ಚನ ಚಪ್ಪಾಳೆ ಫಿಕ್ಸ್ ಎಂಬ ಮಾತು ಕೇಳಿಬಂದಿದೆ. ಹೀಗೆ ಘಟಾನುಘಟಿ ಸ್ಪರ್ಧಿಗಳನ್ನೇ ತಮ್ಮ ಮೈಂಡ್‌ಗೇಮ್‌ನಿಂದ ಮಣಿಸಿ ಲೂಟಿಕೋರರು ಸಕ್ಸಸ್‌ಫುಲ್ ಆಗಿ ಲೂಟಿ ಮಾಡಿದ್ದಾರೆ. ಈ ಎಪಿಸೋಡ್ ಕ್ರೈಂ ಥ್ರಿಲ್ಲರ್ ಸ್ಟೋರಿಯಂತೆ ಮಜಾ ಕೊಟ್ಟಿದೆ ಎಂದು ಆಡಿಯನ್ಸ್ ಸೋಶಿಯಲ್ ಮೀಡಿಯಾ ಮೂಲಕ ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಹಿಂದಿನ ಇಡೀ ಟಾಸ್ಕ್‌ನಲ್ಲಿ ಲೂಟಿಕೋರರು ಹಾಗೂ ರಕ್ಷಕರು ಟಾಸ್ಕ್ ಶೋ ಟಾಪರ್ ಆಗಿದೆ ಅಂದ್ರೂ ತಪ್ಪಾಗಲ್ಲ.


Spread the love

About Laxminews 24x7

Check Also

ಜಂಬೂ ಸವಾರಿಗೆ ಪುಷ್ಪಾರ್ಚನೆ – ಪ್ರೋಟೋಕಾಲ್‌ನಲ್ಲಿ ಸಿಎಂ ಪತ್ನಿ ಹೆಸರು ಇರಲಿಲ್ಲ: ಸಚಿವ ಯತೀಂದ್ರ

Spread the loveಮೈಸೂರು: ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್  ಅವರು ಮೊದಲ ಬಾರಿಗೆ ಜಂಜೂಸವಾರಿಗೆ ಪುಷ್ಪಾರ್ಚನೆ ಮಾಡಿದ್ದು, ದಸರಾ  ಕೂಡ ಯಶಸ್ವಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ