Breaking News
Home / ರಾಜಕೀಯ / ವಯಸ್ಸಾದರೂ ಯಂಗ್ ಆಗಿ ಕಾಣಲು ಭಾಗ್ಯಶ್ರೀ ತಿಳಿಸಿದ ಈ ಆಹಾರ ಸೇವಿಸಿ.!

ವಯಸ್ಸಾದರೂ ಯಂಗ್ ಆಗಿ ಕಾಣಲು ಭಾಗ್ಯಶ್ರೀ ತಿಳಿಸಿದ ಈ ಆಹಾರ ಸೇವಿಸಿ.!

Spread the love

ನಮಗೆ ವಯಸ್ಸಾದಂತೆ ನಮ್ಮ ಚರ್ಮ ಕಡಿಮೆ ಕಾಲಜನ್ ಅನ್ನು ಉತ್ಪಾದನೆ ಮಾಡುತ್ತದೆ.

ಇದರಿಂದ ವಯಸ್ಸಾದಂತೆ ಚರ್ಮ ತೆಳ್ಳಗಾಗುತ್ತದೆ ಮತ್ತು ಸುಕ್ಕುಗಟ್ಟಿದಂತೆ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಹಾಗಾಗಿ ಬಾಲಿವುಡ್ ನಟಿ ಭಾಗ್ಯಶ್ರೀ ಅವರು ಕಾಲಜನ್ ಸಮೃದ್ಧವಾಗಿರುವ ಆಹಾರದ ಬಗ್ಗೆ ತಿಳಿಸಿದ್ದಾರೆ. ಇದನ್ನು ಸೇವಿಸಿದರೆ ಅವರಂತೆ ವಯಸ್ಸಾದ ಮೇಲೂ ಯಂಗ್ ಆಗಿ ಕಾಣಬಹುದಂತೆ.

ದೇಹದಲ್ಲಿ ಕಾಲಜನ್ ಉತ್ಪಾದನೆಯಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಸಾಕಷ್ಟು ವಿಟಮಿನ್ ಸಿ ಪಡೆಯುವುದು ಬಹಳ ಮುಖ್ಯ. ಕಿತ್ತಳೆ, ದ್ರಾಕ್ಷಿ, ನಿಂಬೆ ಮತ್ತು ಇತರ ಸಿಟ್ರಸ್ ಹಣ್ಣುಗಳಲ್ಲಿ ಈ ಪೋಷಕಾಂಶಗಳು ಸಮೃದ್ಧವಾಗಿವೆ.

ಗೋಡಂಬಿಯಲ್ಲಿ ಸತು ಮತ್ತು ತಾಮ್ರ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಕಾಲಜನ್ ಉತ್ಪಾದನೆಯ ಸಾಮಾರ್ಥ್ಯ ಹೆಚ್ಚಾಗುತ್ತದೆ.

ಟೊಮೆಟೊ ದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರಲ್ಲಿ ಕಾಲಜನ್ ಹೆಚ್ಚಿಸುವ ಪ್ರಮುಖ ಪೋಷಕಾಂಶಗಳಿವೆ. ಟೊಮೆಟೊದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲೈಕೋಪೀನ್ ಇದೆ. ಇದು ಚರ್ಮಕ್ಕೆ ಸಹಕಾರಿಯಾಗಿದೆ.

ಹಸಿರು ಸೊಪ್ಪುಗಳನ್ನು ಆಹಾರದಲ್ಲಿ ಸೇರಿಸುವುದು ಬಹಳ ಮುಖ್ಯ. ಇದು ಚರ್ಮಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಸೊಪ್ಪುಗಳಲ್ಲಿ ಆಯಂಟಿ ಆಕ್ಸಿಡೆಂಟ್ ಗಳಿವೆ. ಸೊಪ್ಪುಗಳಿರುವ ಪೋಷಕಾಂಶಗಳು ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಮೀನುಗಳ ಮೂಳೆಗಳು ಮತ್ತು ಅಸ್ಥಿರಜ್ಜುಗಳಲ್ಲಿ ಕಾಲಜನ್ ಕಂಡುಬರುತ್ತದೆ. ಇದು ಪ್ರೋಟೀನ್ ನಿಂದಾಗಿದ್ದು, ಇದು ಚರ್ಮ, ಕೀಲುಗಳು, ಮೂಳೆಗಳು, ಸ್ನಾಯುಗಳು, ರಕ್ತನಾಳಗಳು, ಒಸಡುಗಳು, ಕಣ್ಣುಗಳು, ಉಗುರುಗಳು, ಕೂದಲುಗಳನ್ನು ಬಲಪಡಿಸುತ್ತದೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ