Breaking News

ನನ್ನ ಮಗಳನ್ನ ಜೀವಂತವಾಗಿ ನೋಡ್ತೀನಿ ಅಂದ್ಕೊಂಡಿರಲಿಲ್ಲ ನಮ್ಮ ದೇಶದಲ್ಲೇ ಕಡಿಮೆ ಫೀಸ್ ಇದಿದ್ದರೆ ಮಗಳನ್ನ ಉಕ್ರೇನ್‍ಗೆ ಕಳುಹಿಸಿ ಓದಿಸೋ ಅಗತ್ಯ ಬರುತ್ತಿರಲಿಲ್ಲ

Spread the love

ಬೆಂಗಳೂರು: ಮಗಳನ್ನ ಜೀವಂತವಾಗಿ ನೋಡ್ತೀನಿ ಅಂತ ನಾನು ಅಂದುಕೊಂಡಿರಲಿಲ್ಲ. ಮಗಳು ಪ್ರತಿಬಾರಿಯೂ ಕರೆ ಮಾಡಿದಾಗ ‘ಲವ್ ಯೂ ಪಪ್ಪಾ’ ಅಂದಾಗ ಆಗ್ತಿದ್ದ ನೋವು ಯಾರಿಗೂ ಹೇಳೋದಕ್ಕೆ ಆಗಲ್ಲ ಎಂದು ಹೇಳುತ್ತಾ ವೈಟ್ ಫೀಲ್ಡ್ ಮೂಲದ ವಿದ್ಯಾರ್ಥಿನಿ ಇಶಾ ತಂದೆ ಭಾವುಕರಾದರು.

ನನ್ನ ಮಗಳು ತುಂಬಾ ಕಷ್ಟದಿಂದ ಖಾರ್ಕಿವ್ ನಿಂದ ಬಂದಿದ್ದಾಳೆ. ಅಲ್ಲಿ ಅವಳಿಗೆ ತುಂಬಾ ಕಷ್ಟವಾಗಿದೆ. ಮಗಳು ನೆಟ್‍ವರ್ಕ್ ಸಿಕ್ಕಿದ ಕೂಡಲೇ ಕರೆ ಮಾಡುತ್ತಿದ್ದಳು. 7 ದಿನ ನಿದ್ದೆಯಿಲ್ಲದೇ ಮಗಳಿಗಾಗಿ ಕಾಯುತ್ತಿದ್ದೆವು ಎಂದು ಕಣ್ಣೀರಾಕಿದರು. 

ನಮ್ಮ ದೇಶದಲ್ಲೇ ಕಡಿಮೆ ಫೀಸ್ ಇದಿದ್ದರೆ ಮಗಳನ್ನ ಉಕ್ರೇನ್‍ಗೆ ಕಳುಹಿಸಿ ಓದಿಸೋ ಅಗತ್ಯ ಬರುತ್ತಿರಲಿಲ್ಲ ಅಂತಾ ತಂದೆ ಹೇಳಿದರು. ಇತ್ತ ಮಗಳು ಅಲ್ಲಿದ್ದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾಳೆ. ಅಲ್ಲಿ ತುಂಬಾ ಕಷ್ಟದ ಪರಿಸ್ಥಿತಿ ಇತ್ತು. ಖಾರ್ಕಿವ್ ನಿಂದ 8 ಕಿಲೋ ನಡೆದುಕೊಂಡು ಬಂದು ರೈಲು ಹತ್ತಿ ಹೇಗೋ ಬಾರ್ಡರ್ ಗೆ ರಿಚ್ ಆಗಿ ಸೇಫ್ ಆಗಿ ಭಾರತಕ್ಕೆ ಬಂದಿದ್ದೇನೆ. ನಮ್ಮ ಖಾರ್ಕಿವ್ ನಿಂದ ಬಾರ್ಡರ್ ಗೆ ಬರೋ ಜರ್ನಿ ಬಹಳ ಕಷ್ಟದಿಂದ ಕೂಡಿತ್ತು. ನಮಗೆ ಟ್ರೈನ್ ಹತ್ತಲು ಸಹ ಬಿಡಲಿಲ್ಲ, ಹೇಗೋ ಸಾಧನೆ ಮಾಡಿ ಬಂದಿದ್ದೇನೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ