Breaking News

ಅಟ್ಟಾಡಿಸಿ ಜೀಪ್ ಹರಿಸಿ ಕೊಲೆ

Spread the love

ವಿಜಯಪುರ: ಕೊಟ್ಟ ಹಣ ವಾಪಸ್​ ಕೇಳಿದ್ದಕ್ಕೆ ಮಹಿಳೆಯೊಬ್ಬಳ ಮೇಲೆ ಜೀಪ್​ ಹರಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದಿದೆ.

ಶೋಭಾ ಸೋಮನಿಂಗ ಮೊಗದರೆ (45) ಕೊಲೆಯಾದ ಮಹಿಳೆ. ಸಾಗರ ಖತಾರ ಮತ್ತು ಮಾರುತಿ ಥೋರತ ಕೊಲೆ ಮಾಡಿದ ಆರೋಪಿಗಳು.

ಕಬ್ಬು ಕಟಾವು ಮಾಡಲು ಒಂದು ತಂಡವನ್ನು ಕರೆತರುತ್ತೇವೆ ಎಂದು ಕೊಲೆಯಾದ ಮಹಿಳೆಯ ಪತಿ ಸೋಮನಿಂಗನಿಂದ ಆರೋಪಿಗಳು 45 ಲಕ್ಷ ರೂ. ಹಣ ಪಡೆದಿದ್ದರು.

ಆರೋಪಿ ಮಾರುತಿ ಥೋರತ ಆರೋಪಿ ಸಾಗರ ಖತಾರಹಣ ಪಡೆದ ಬಳಿವೂ ಆರೋಪಿಗಳ ಕಬ್ಬು ಕಟಾವು ಮಾಡುವ ತಂಡವನ್ನು ಕಳುಹಿಸಿರಲಿಲ್ಲ. ಈ ವಿಚಾರಕ್ಕೆ ಹಣ ನೀಡಿದ ಸೋಮನಿಂಗನಿಗೂ ಹಾಗೂಇಬ್ಬರು ಆರೋಪಿಗಳಿಗೂ ವಾಗ್ವಾದ ಆಗಿತ್ತು. ಈ ವೇಳೆ ಕೊಟ್ಟ ಹಣ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಕುಪಿತಗೊಂಡ ಆರೋಪಿಗಳು ಸೋಮನಿಂಗ ಇಲ್ಲದ ಸಮಯದಲ್ಲಿ ತೋಟಕ್ಕೆ ಬಂದಿದ್ದರು. ಈ ವೇಳೆ ಜೀಪ್‌ನಿಂದ ಬೆನ್ನಟ್ಟಿ, ಅಟ್ಟಾಡಿಸಿ ಜೀಪ್ ಹರಿಸಿ ಸೋಮನಿಂಗನ ಪತ್ನಿ ಶೋಭಾಳನ್ನು ಕೊಲೆ ಮಾಡಿದ್ದಾರೆ.

ರೆ


Spread the love

About Laxminews 24x7

Check Also

ಮದ್ವೆಗೆ ನಿರಾಕರಿಸಿದ್ದಕ್ಕೆ ಬೈಕ್ ತಡೆದಿದ್ದ ಪ್ರೇಯಸಿ – ಹ್ಯಾಂಡಲ್‌ಗೆ ಜೋತುಬೀಳಿಸಿಕೊಂಡೇ ರಸ್ತೆಯಲ್ಲಿ ಎಳೆದೊಯ್ದ ಪ್ರಿಯಕರ

Spread the loveಪಾಟ್ನಾ: ಮದುವೆಗೆ ನಿರಾಕರಿಸಿದ್ದಕ್ಕೆ ಬೈಕ್ ತಡೆದು ನಿಂತಿದ್ದ ಪ್ರೇಯಸಿಯನ್ನು ಹ್ಯಾಂಡಲ್‌ಗೆ ಜೋತುಬೀಳಿಸಿಕೊಂಡೇ ಪ್ರಿಯಕರ ರಸ್ತೆಯಲ್ಲೇ ಎಳೆದಾಡಿದ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ