Breaking News

ಸಿದ್ದರಾಮಯ್ಯ ನೀವೊಬ್ಬರೇ ಗಂಡಸರಾ? :ವಿಶ್ವನಾಥ್‌

Spread the love

ಮೈಸೂರು: ಸಿದ್ದರಾಮಯ್ಯ ನೀವೊಬ್ಬರೇ ಗಂಡಸರಾ? ನಿಮ್ಮನ್ನು ಯಾವ ಪ್ರಮುಖ ನಾಯಕರು ಅಂತ ಕರೆಯುತ್ತಿದ್ದಾರೆ, ಸಿದ್ದರಾಮಯ್ಯ ಕಾಂಗ್ರೆಸ್‌ ಪಾಲಿನ ಭಸ್ಮಾರ ಅಂತ ಬಿಜೆಪಿ ಹೆಚ್‌.ವಿಶ್ವನಾಥ್‌ ಪ್ರಶ್ನೆ ಮಾಡಿದ್ದಾರೆ.

ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾತನಾಡಿದ್ದಾರೆ, ಇದೇ ವೇಳೆ ಅವರು ಮಾತನಾಡಿ, ಸಿದ್ದರಾಮಯ್ಯ ಕಾಂಗ್ರೆಸ್‌ ಮುಗಿಸಿ ಹೊರಡುತ್ತಾರೆ ಅಂತ ಹೇಳಿದರು.

ಅವರ ಬೆಂಬಗಲಿಗರು ಮಾತ್ರ ಅವರನ್ನು ನಾಯಕರು ಕರೆಯುತ್ತಿದ್ದಾರೆ ಅಂತ ಹೇಳಿದರು.

ಇನ್ನೂ ಗ್ಯಾಸ್‌ ಲೈನ್‌ ಗೆ ಸಂಬಂಧಪಟ್ಟಂತೆ ಮಾತನಾಡಿ, ಇದು ಕೇಂದ್ರ ಸರ್ಕಾರ ಯೋಜನೆಯಾಗಿದ್ದು, ಅದಕ್ಕೆ ಶಾಸಕರು ಯಾಕೆ ವಿರೋಧ ಮಾಡುತ್ತಿದ್ದಾರೆ ಅಂತ ಪ್ರಶ್ನೆ ಮಾಡಿದರು. ಜನ ಹಿತಕ್ಕಾಗಿ ಕೇಂದ್ರ ಸರ್ಕಾರದ ಈ ಯೋಜನೆಯನ್ನು ಮೈಸೂರಿನಲ್ಲಿ ಜಾರಿಗೊಳಿಸಬೇಕು ಅಂತ ಹೇಳಿದರು. ಇನ್ನೂ ಗುಂಡಿ ಬೀಳುವ ಕಾರಣಕ್ಕೆ ಇದನ್ನು ವಿರೋಧಿಸುವುದು ಸಲ್ಲದು ಅಂತ ಹೇಳಿದರು. ಈ ಹಿಂದೆ ಕೂಡ ನಗರದಲ್ಲಿ ಗುಂಡಿ ತೆಗೆದು ಇಲ್ವಾ ಅಂತ ಶಾಸಕ ನಾಗೇಂದ್ರರನ್ನು ಪ್ರಶ್ನೆ ಮಾಡಿದರು. ಈ ಯೋಜನೆ ಜಾರಿಗೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು ಅಂಥ ಹೇಳಿದರು.


Spread the love

About Laxminews 24x7

Check Also

ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಬೇಸತ್ತ ಜನ; ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ

Spread the loveಗದಗ: ಮೂಲ ಸೌಲಭ್ಯಗಳ ಕೊರತೆಯಿಂದ ಬೇಸತ್ತ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿ ಎದುರೇ ಚರಂಡಿಯ ಕಸ ಸುರಿದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ