Breaking News

ನಗ್ನ ವಿಡಿಯೋ ಚಿತ್ರೀಕರಿಸಿ ನರ್ಸ್ ಗೆ ಬೆದರಿಕೆ ಹಾಕುತ್ತಿದ್ದ ವೈದ್ಯನ ವಿರುದ್ಧ ಕೇಸ್

Spread the love

ರಾಮ್ ಪುರ: ಸಹೋದ್ಯೋಗಿ ನರ್ಸ್ ನ ನಗ್ನ ಚಿತ್ರೀಕರಣ ಮಾಡಿ ಲೈಂಗಿಕ ಕ್ರಿಯೆ ನಡೆಸುವುದಕ್ಕೆ ಒತ್ತಾಯಿಸಿ ಬೆದರಿಕೆ ಹಾಕುತ್ತಿದ್ದ ಸರ್ಕಾರಿ ವೈದ್ಯನ ವಿರುದ್ಧ ಪ್ರಕರಣ ದಾಖಲಾದ ಘಟನೆ ಉತ್ತರ ಪ್ರದೇಶದ ರಾಮ್ ಪುರದಲ್ಲಿ ನಡೆದಿದೆ.

ರಾಮ್ ಪುರ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂತ್ರಸ್ತೆ ಸಹಾಯಕ ನರ್ಸ್ ಹಾಗೂ ಹೆರಿಗೆ ಮಾಡಿಸುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತನಗೆ ವೈದ್ಯರು ಬೆದರಿಕೆ ಹಾಕುತ್ತಿರುವುದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಿಹೆಚ್ ಸಿ ವೈದ್ಯರು ನಾನು ಸ್ನಾನ ಮಾಡುತ್ತಿದ್ದ ವಿಡಿಯೋ ಚಿತ್ರೀಕರಿಸಿ ಅದನ್ನು ನನ್ನ ಪತಿಗೆ ತೋರಿಸಿದ್ದರು ಪರಿಣಾಮ ನನಗೆ ಆತ ವಿಚ್ಛೇದನ ನೀಡಿದ್ದ. ವೈದ್ಯರೂ ನನಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

ಮಿಲಾಕ್ ನ ಸರ್ಕಲ್ ಅಧಿಕಾರಿ ಓಂಕಾರ್ ನಾಥ್ ಶರ್ಮಾ ಈ ಬಗ್ಗೆ ಮಾತನಾಡಿದ್ದು, ಮೇಲ್ನೋಟಕ್ಕೆ ಮಹಿಳೆ ವೈದ್ಯರೊಂದಿಗೆ ವಿವಾಹೇತರ ಅಕ್ರಮ ಸಂಬಂಧ ಹೊಂದಿದ್ದರು ಎಂದು ತೋರುತ್ತದೆ” ಎಂದು ಹೇಳಿದ್ದಾರೆ.

ಈಗ ಆಕೆ ವೈದ್ಯರ ವಿರುದ್ಧ ಬೆದರಿಕೆ ಹಾಗೂ ಅತ್ಯಾಚಾರದ ಆರೋಪ ಮಾದುತ್ತಿದ್ದಾರೆ. ಆರೋಪ ಎದುರಿಸುತ್ತಿರುವ 45 ವರ್ಷದ ವೈದ್ಯರೂ ವಿವಾಹಿತರಾಗಿದ್ದಾರೆ. ಐಪಿಸಿ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ) ಹಾಗೂ 506 (ಕ್ರಿಮಿನಲ್ ಬೆದರಿಕೆ) ಅಡಿಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಆರೋಪಿಯ ಪತ್ನಿಯೂ ವೈದ್ಯರಾಗಿದ್ದು, ದಂಪತಿ ಶಾಬಾದ್ ನ ಸಿಹೆಚ್ ಸಿ ಯಿಂದ ಮೊರಾದಾಬಾದ್ ಜಿಲ್ಲಾಸ್ಪತ್ರೆಗೆ ವರ್ಗಾವಣೆ ಪಡೆದಿದ್ದಾರೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ