Breaking News
Home / ರಾಜ್ಯ / ಯಾವ ಪುರುಷಾರ್ಥಕ್ಕೆ ಸರ್ಕಾರ ಬೀಳಿಸಿದ್ವೋ ಅನ್ನಿಸ್ತಿದೆ, ಈ ಅಡ್ಜಸ್ಟ್​ಮೆಂಟ್​ ಸರ್ಕಾರದಲ್ಲಿ ಹೆಚ್​ಡಿಕೆ, ಸಿದ್ದು ಮೋಸದ ಪಾಲಿದೆ: ಹೆಚ್​.ವಿಶ್ವನಾಥ್

ಯಾವ ಪುರುಷಾರ್ಥಕ್ಕೆ ಸರ್ಕಾರ ಬೀಳಿಸಿದ್ವೋ ಅನ್ನಿಸ್ತಿದೆ, ಈ ಅಡ್ಜಸ್ಟ್​ಮೆಂಟ್​ ಸರ್ಕಾರದಲ್ಲಿ ಹೆಚ್​ಡಿಕೆ, ಸಿದ್ದು ಮೋಸದ ಪಾಲಿದೆ: ಹೆಚ್​.ವಿಶ್ವನಾಥ್

Spread the love

ಮೈಸೂರು: ರಾಜ್ಯದಲ್ಲಿರೋದು ಬಿಜೆಪಿ ಸರ್ಕಾರ ಅಲ್ಲ. ಅದು ನ್ಯಾಷನಲ್ ಸರ್ಕಾರ. ಸಿದ್ದರಾಮಯ್ಯರನ್ನ ಕುಮಾರಸ್ವಾಮಿ ರಕ್ಷಣೆ ಮಾಡ್ತಾರೆ, ಕುಮಾರಸ್ವಾಮಿರವನ್ನ ಸಿದ್ದರಾಮಯ್ಯ ರಕ್ಷಣೆ ಮಾಡ್ತಾರೆ, ಇಬ್ಬರೂ ಸೇರಿ ಯಡಿಯೂರಪ್ಪರನ್ನ ರಕ್ಷಿಸುತ್ತಿದ್ದಾರೆ. ಇದು ಒಬ್ಬೊರಿಗೊಬ್ಬರು ಅಡ್ಜಸ್ಟ್​ಮೆಂಟ್ ರಾಜಕಾರಣ. ಇದರಲ್ಲಿ ಯಡಿಯೂರಪ್ಪ ನ್ಯಾಷನಲ್ ಗೌರ್ನ್​ಮೆಂಟ್ ಚೀಫ್ ಮಿನಿಸ್ಟರ್. ಅವರು ಬುದ್ದಿ ಚಾತುರ್ಯದಿಂದ ಎಲ್ಲರನ್ನು ಅಡ್ಜಸ್ಟ್​ ಮಾಡಿಕೊಂಡಿದ್ದಾರೆ. ಅವರವರ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಈ ರೀತಿ ಅಡ್ಜಸ್ಟ್​ಮೆಂಟ್ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಎಂಎಲ್‌ಸಿ, ಹಳ್ಳಿಹಕ್ಕಿ ಹೆಚ್.ವಿಶ್ವನಾಥ್​ ತಮ್ಮ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ಇವರದ್ದೆಲ್ಲಾ ಅಡ್ಜಸ್ಟ್​ಮೆಂಟ್ ರಾಜಕಾರಣ. ಭ್ರಷ್ಟಾಚಾರದಲ್ಲೂ ಅಷ್ಟೇ ಈಗಿನ ಸಿಡಿಯಲ್ಲೂ ಅಷ್ಟೇ. ಸಿದ್ದರಾಮಯ್ಯ ಅವರ ಅರ್ಕಾವತಿ ಪ್ರಕರಣ ಮುಚ್ಚಿ ಹಾಕುವುದಕ್ಕೆ, ಕುಮಾರಸ್ವಾಮಿ ಪೋನ್ ಕದ್ದಾಲಿಕೆ ಮುಚ್ಚಿಕೊಳ್ಳಲು ಅಡ್ಜಸ್ಟ್​ಮೆಂಟ್​ ನಡೆದಿದೆ. ನಾವು ಯಾವ ಪುರುಷಾರ್ಥಕ್ಕೆ ದಂಗೆ ಎದ್ದು ಸರ್ಕಾರ ಬೀಳಿಸಿದೆವೋ ಅಂತ ಈಗ ಅನ್ನಿಸುತ್ತಿದೆ ಎನ್ನುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇತ್ತ ಸಿದ್ದರಾಮಯ್ಯ ಅವರ ‘ಭ್ರಷ್ಟಾಚಾರಕ್ಕೆ ಲಸಿಕೆ ಯಾವಾಗ?’ ಎಂಬ ಟ್ವೀಟ್​ಗೆ ತಿರುಗೇಟು ನೀಡಿರುವ ಹೆಚ್.ವಿಶ್ವನಾಥ್​, ಇದ್ದ ಲೋಕಾಯುಕ್ತ ಎಂಬ ಲಸಿಕೆಯನ್ನು ನಾಶ ಮಾಡಿದವರು ಯಾರು ಸಿದ್ದರಾಮಯ್ಯ? ನಿಮ್ಮ ಅರ್ಕಾವತಿ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಲೋಕಾಯುಕ್ತದ ಬಾಗಿಲು ಹಾಕಿದ್ರಿ. ಜನರನ್ನು ಏನು ದಡ್ಡರು ಎಂದುಕೊಂಡಿದ್ದೀರಾ ಎಂದು ಕಿಡಿಕಾರಿದ್ದಾರೆ.

ಅಲ್ಲದೇ ಕಾಂಗ್ರೆಸ್​ನ ಸಿದ್ದರಾಮಯ್ಯ ಮತ್ತು ತಂಡದವರನ್ನು ಬ್ರಿಟೀಷರಿಗೆ ಹೋಲಿಸಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಬ್ರಿಟಿಷರು ಹೇಗೆ ಭಾರತಕ್ಕೆ ಬಂದು ಭಾರತಿಯರನ್ನೇ ಓಡಾಡಿಸಿದ್ರೋ ಹಾಗೆಯೇ ಸಿದ್ದರಾಮಯ್ಯ ಮತ್ತು ಗ್ಯಾಂಗ್ ಮೂಲ ಕಾಂಗ್ರೆಸಿಗರನ್ನು ಓಡಾಡಿಸುತ್ತಿದೆ. ವಲಸಿಗರೆಲ್ಲ ಸೇರಿ ಮೂಲ ಕಾಂಗ್ರೆಸಿಗರನ್ನ ಮುಗಿಸುತ್ತಿದ್ದಾರೆ. ರೋಷನ್ ಬೇಗ್ ಆದಿಯಾಗಿ ಅಲ್ಪಸಂಖ್ಯಾತರನ್ನು ತುಳಿದರು. ಸಿದ್ದರಾಮಯ್ಯರನ್ನ ಯಾರು ಪ್ರಶ್ನೆ ಮಾಡುವಂತಿಲ್ಲ. ಮೈಸೂರು ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ನೋಡಿದರೆ ಇವರು ಕಾಂಗ್ರೆಸನ್ನೇ ಮುಗಿಸುವಂತೆ ಕಾಣುತ್ತಿದೆ ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ.


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ