Breaking News

ಇವರು ಸದನದಲ್ಲಿ ಮಾತಾಡೋಕೆ ನಿಂತರೆ ಸಿಎಂ ಯಡಿಯೂರಪ್ಪ ‌ಕೂಡ ಸುಮ್ಮನಾಗ್ತಾರೆ -ಶಾಸಕರನ್ನು ಕೊಂಡಾಡಿದ ಶ್ರೀರಾಮುಲು

Spread the love

ಹಾಸನ: ರಾಜಕೀಯದಲ್ಲಿ ಆ ಜಾತಿ ಈ ಜಾತಿ ಎಂದು ಹೇಳುತ್ತೇವೆ. ಆದ್ರೆ ಮಕ್ಕಳಲ್ಲಿ ಸರ್ವಧರ್ಮತ್ವವನ್ನ ಶಿಕ್ಷಕರು ಬೆಳೆಸುತ್ತಾರೆ ಎಂದು ರಾಮನಹಳ್ಳಿ ಇಂದಿರಾ ಗಾಂಧಿ ವಸತಿ ಶಾಲೆ ಉದ್ಘಾಟನೆ ವೇಳೆ ಸಚಿವ ಶ್ರೀರಾಮುಲು ಮಾತನಾಡಿದರು. ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಮನಹಳ್ಳಿಯಲ್ಲಿ ಸಚಿವ ಶ್ರೀರಾಮುಲು ವಸತಿ ಶಾಲೆ ಉದ್ಘಾಟನೆ ಮಾಡಿದರು.

ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಸದನದಲ್ಲಿ ಮಾತನಾಡುತ್ತ ನಿಂತರೆ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಸುಮ್ಮನಾಗ್ತಾರೆ ಎಂದು ಶ್ರೀರಾಮುಲು ಹೇಳಿದರು. ರೈತರ ವಿಚಾರ, ನೀರಾವರಿ ವಿಚಾರದಲ್ಲಿ ಇವರು ಮುಂದಿರುತ್ತಾರೆ ಎಂದು ಶಾಸಕ ಶಿವಲಿಂಗೇಗೌಡರನ್ನ ಸಚಿವ ಬಿ.ಶ್ರೀರಾಮುಲು ಹಾಡಿ ಹೊಗಳಿದರು.

ಶಿವಲಿಂಗೇಗೌಡ

ಶಿವಲಿಂಗೇಗೌಡರು ಹಿಂದೆ ಕೈಕಟ್ಟಿ ನಿಂತುಕೊಂಡ್ರೇ ಅವರು ಸಾಕಷ್ಟು ವಿಷಯ ಮಾತಾನಾಡುತ್ತಾರೆ. ಕೆಲವರು ಸುಮ್ಮನೇ ಚಟಕ್ಕೆ ಏನೇನೊ ಮಾತನಾಡುತ್ತಾರೆ. ಆದ್ರೆ ಅವರ ಮಾತು ಯಾರಿಗೂ ಅರ್ಥ ಆಗೋದಿಲ್ಲ. ಆದರೆ, ಶಿವಲಿಂಗೇಗೌಡರು ಎಲ್ಲರಿಗೂ ಅರ್ಥ ಆಗೋ ರೀತಿಯಲ್ಲಿ ಅಧ್ಯಯನ ಮಾಡಿಕೊಂಡು ಬಂದು ಮಾತಾಡ್ತಾರೆ. ಅವರು ಎಷ್ಟೆಲ್ಲಾ ಓದಿಕೊಂಡು ಬಂದು ಮಾತಾಡ್ತಾರೆ ಎಂದು ನಮಗೆ ಅನ್ನಿಸುತ್ತೆ ಎಂದು ಶಾಸಕರ ಜನಪರ ಕಾಳಜಿಯನ್ನು ಸಚಿವ ಶ್ರೀರಾಮುಲು ಕೊಂಡಾಡಿದರು.

‘ಶ್ರೀರಾಮುಲುಗೆ ರಾಜ್ಯ ರಾಜಕೀಯದಲ್ಲಿ ಉನ್ನತ ಭವಿಷ್ಯ ಇದೆ’
ರಾಜಕಾರಣದಲ್ಲಿ ಸರಳತೆ ಇರಬೇಕು, ತಾಳ್ಮೆ ಇರಬೇಕು. ಶ್ರೀರಾಮುಲುಗೆ ಈ ಎಲ್ಲಾ ಗುಣಗಳಿವೆ. ಶ್ರೀರಾಮುಲುಗೆ ರಾಜ್ಯ ರಾಜಕೀಯದಲ್ಲಿ ಉನ್ನತ ಭವಿಷ್ಯವಿದೆ. ಇದನ್ನ ನಾನು ಸದನದಲ್ಲೂ ಹೇಳಿದ್ದೆ, ಈಗಲೂ ಹೇಳ್ತೀನಿ ಎಂದು ಸಚಿವ ಶ್ರೀರಾಮುಲುರನ್ನ ಶಾಸಕ ಶಿವಲಿಂಗೇಗೌಡ ಹಾಡಿ ಹೊಗಳಿದರು.

ಶ್ರೀರಾಮುಲು ಅರೋಗ್ಯ ಸಚಿವರಾಗಿದ್ದಾಗ ಒಳ್ಳೇ ಕೆಲಸ ಮಾಡಿದ್ದರು. ಈಗ ಅವರಿಗೆ ಹೇಳಿ ಮಾಡಿಸಿದಂಥ ಸಮಾಜ ಕಲ್ಯಾಣ ಇಲಾಖೆ ಸಿಕ್ಕಿದೆ. ಅವರು ಅಲ್ಲಿಯೂ ಒಳ್ಳೇ ಕೆಲಸ ಮಾಡುತ್ತಾರೆ ಎಂದು ವೇದಿಕೆಯಲ್ಲಿ ಮಾತನಾಡುವ ವೇಳೆ ಸಮಾಜ ಕಲ್ಯಾಣ ಸಚಿವರನ್ನ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕೊಂಡಾಡಿದರು.


Spread the love

About Laxminews 24x7

Check Also

ಬೆಂಗಳೂರಲ್ಲಿ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು

Spread the loveಬೆಂಗಳೂರು: ಇಲ್ಲಿನ ಗೊರಗುಂಟೆಪಾಳ್ಯದ ಟಿಎಂಟಿ ಜಂಕ್ಷನ್ ಬಳಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ