ಶ್ರೀ ಕ್ಷೇತ್ರ ಕೋಟುರ ಪರಮಾನಂದ ದೇವಸ್ಥಾನದ ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಯುವ ನಾಯಕ ಸಂತೋಷ ಜಾರಕಿಹೊಳಿ ಅವರು ಭಾಗಿ.
ಯರಗಟ್ಟಿ : ಕೋಟೂರು ಶಿವಾಪೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಕೋಟುರ ಪರಮಾನಂದ ದೇವಸ್ಥಾನದ ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಯುವ ನಾಯಕ ಸಂತೋಷ ಜಾರಕಿಹೊಳಿ ಅವರು ಭಾಗವಹಿಸಿದ್ದರು.
ಸೋಮವಾರ ದಿನಾಂಕ 19-02-2024 ರಂದು ಜರುಗಿದ ಕಾರ್ಯಕ್ರಮದಲ್ಲಿ ಯುವ ನಾಯಕ ಹಾಗೂ ಸೌಭಾಗ್ಯ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರಿಗೆ ಊರಿನ ಮುಖಂಡರು ಸತ್ಕಾರ ಮಾಡಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಸಿದ್ಧ ಶಿವಯೋಗಿ ಸ್ವಾಮೀಜಿ ಹಾಗೂ ಶ್ರೀ ಮ.ನಿ.ಪ್ರ.ಸ್ವ ಚನ್ನವೀರ ದೇವರು ಸ್ವಾಮೀಜಿ ಮತ್ತು ಊರಿನ ಮುಖಂಡರು ರೈತರು ಯುವಕರು ಉಪಸ್ಥಿತರಿದ್ದರು.