Breaking News

ದಾವಣಗೆರೆಯಲ್ಲಿ ಪೊಗರು ಆಡಿಯೋ ಲಾಂಚ್: ಪೊಗರು ಶಿವನಿಗೆ ಜೊತೆಯಾದ ಟಗರು..!

Spread the love

ದೊಡ್ಡ ಮಟ್ಟದಲ್ಲಿ ಹವಾ ಎಬ್ಬಿಸಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಬೆಣ್ಣೆದೋಸೆ ನಗರಿ ದಾವಣಗೆರೆಯಲ್ಲಿ ಅದ್ದೂರಿಯಾಗಿ ನಡೆಯಿತು. ಕಿಕ್ಕಿರಿದು ತುಂಬಿದ್ದ ಸಾವಿರಾರು ಮಂದಿ ಅಭಿಮಾನಿಗಳ ನಡುವೆ ಚಿತ್ರತಂಡ ಆಡಿಯೋ ಲಾಂಚ್ ಮಾಡಲಾಯಿತು. ಪೊಗರು  ಚಿತ್ರದ ಹಾಡು ಕೇಳಿದ  ಧ್ರುವ ಸರ್ಜಾ ಅಭಿಮಾನಿಗಳು ಭರ್ಜರಿ ಸ್ಟೆಪ್​ ಹಾಕಿದ್ದು ವಿಶೇಷ. ನಗರದ ಹೈಸ್ಕೂಲ್ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಧ್ರುವ  ಅವರನ್ನು ಕಂಡು ಹುಚ್ಚೆದ್ದು ಖುಷಿಯಿಂದ ಕೂಗಾಡುತ್ತಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೆರೆದಿದ್ದ ಧ್ರುವ ಸರ್ಜಾ ಅಭಿಮಾನಿಗಳು ಕೇಕೆ ಶಿಳ್ಳೆ ಹಾಕಿ, ಕುಣಿದು ಕುಪ್ಪಳಿಸಿದ್ರು. ನಂದ ಕಿಶೋರ್​ ನಿರ್ದೇಶನದ ಈ ಸಿನಿಮಾ ಇದೇ ತಿಂಗಳು 19ಕ್ಕೆ ರಿಲೀಸ್ ಆಗಲಿದೆ. 

ನಿನ್ನೆ ಸಂಜೆ ದಾವಣಗೆರೆಯಲ್ಲಿ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಚಿತ್ರತಂಡದ ಜೊತೆಗೆ ಧ್ರುವ ಸರ್ಜಾ ಅವರ ಕುಟುಂಬ ಹಾಗೂ ಅರ್ಜುನ್​ ಸರ್ಜಾ ಸಹ ಭಾಗಿಯಾಗಿದ್ದರು. ಗಾಯಕ ಚಂದನ್ ಶೆಟ್ಟಿ ಕಾರ್ಯಕ್ರಮದಲ್ಲಿ ಚಿತ್ರದ ಕರಾಬು ಬಾಸು ಕರಾಬು ಹಾಡು ಹಾಡುತ್ತಿದ್ದಂತೆಯೇ ನೆರೆದಿದ್ದ ಅಭಿಮಾನಿಗಳು ಭರ್ಜರಿ ಸ್ಟೆಪ್ಸ್ ​ಹಾಕಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ