Breaking News

ಕೆಎಲ್ಇ ಸಂಸ್ಥೆಯ ಶಾಲೆಗೆ ಕೆ.ಎಫ್ ಪಾಟೀಲರ ಹೆಸರು ನಾಮಕರಣ

Spread the love

ಬೆಳಗಾವಿ:
ಶಿಕ್ಷಣ, ಸಂಸ್ಕೃತಿ, ಸಮಾಜಸೇವೆ,ರಾಜಕೀಯ ಈ ಎಲ್ಲ ನೆಲೆಗಳಲ್ಲಿ ಬಹು ಮೌಲಿಕವಾದ ಸೇವೆ ನೀಡಿ ಅಮರರಾದವರು ಕೆ.ಎಫ್ ಪಾಟೀಲರ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ,ಗ್ರಾಹಕ ವ್ಯವಹಾರ,ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸಚಿವ ಪ್ರಹ್ಲಾದ ಜೋಷಿ ಬಣ್ಣಿಸಿದರು.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಕೆಎಲ್‌ಇ ಸಂಸ್ಥೆಯ ಸಿಬಿಎಸ್‌ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಲೆಗೆ ಕೆ.ಎಫ್ ಪಾಟೀಲ ಹೆಸರು ನಾಮಕರಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಜನಾನುರಾದ ಕೆ.ಎಫ್ ಪಾಟೀಲರು ೧೯೦೫ರಲ್ಲಿ ಜನಿಸಿದ್ದರು.ಇವರು ಶಾಸಕ,ಸಚಿವರಾಗಿ ರಾಜಕೀಯದಲ್ಲಿ ಸಾಕಷ್ಟು ಬೆಳೆದಿದ್ದರು. ಅಪ್ಪಟ ಗಾಂಧಿವಾದಿಗಳಾಗಿದ್ದ ಇವರು ರಾಜಕೀಯ ತ್ಯಜಿಸಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ಸ್ಥಾಪಿಸಿದರು. ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ, ಅವರ ಸಾಮಾಜಿಕ ಸೇವೆ ಬಹುಮುಖವಾಗಿತ್ತು .ಮಕ್ಕಳಲ್ಲಿ ಉತ್ತಮ ಮೌಲ್ಯಗಳು ಮತ್ತು ಸಂಸ್ಕಾರಗಳನ್ನು ಬೆಳೆಸುವ ಅಗತ್ಯತೆಯಿದೆ ಎಂದು ಹೇಳಿದರು.
ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ಕೆ.ಎಫ್.ಪಾಟೀಲರ ಸಮಾಜಮುಖಿ ಸೇವೆ ಹಾಗೂ ದಾನಶೀಲತೆಯ ಮೂಲಕ ಅವರು ಪಡೆದ ಜನಮಾನ್ಯತೆಯನ್ನು ಸ್ಮರಿಸಿದರು. ಸಮರ್ಪಿತ ಸೇವೆ ಮತ್ತು ಉದಾರತೆಯ ಮೂಲಕ ಅನೇಕರಿಗೆ ಪ್ರೇರಣೆಯಾಗಿದ್ದ ಮಹಾನ್ ನಾಯಕರೆಂದು ಅವರು ಕೊಂಡಾಡಿದರು.
ಕಾಹೇರ್ ಬೆಳಗಾವಿ ಹಾಗೂ ಹುಬ್ಬಳ್ಳಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಪ್ರಭಾಕರ ಕೋರೆ ಮಾತನಾಡಿ, ಮುಂಬೈಕರ್ನಾಟಕ ಭಾಗದಲ್ಲಿ ಶಿಕ್ಷಣದ ಬೆಳವಣಿಗೆಗೆ ಅನೇಕ ದಾನಿಗಳ ಕೊಡುಗೆ ಅಪಾರವಾಗಿದೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಸಿದ್ದಪ್ಪ ಕಂಬಳಿ ಹಾಗೂ ದಾನಿ ಕೆ.ಎಫ್.ಪಾಟೀಲರು ಒಬ್ಬರಾಗಿದ್ದರೆ, ಬಡಜನರ ಉದ್ಧಾರಕ್ಕಾಗಿ ಹಾಗೂ ರಾಣೆಬೆನ್ನೂರಿನಲ್ಲಿ ಶಾಲೆ-ಸಂಸ್ಥೆಗಳನ್ನು ಸ್ಥಾಪಿಸಿದ ಅವರ ನಿಸ್ವಾರ್ಥ ಸೇವೆಯನ್ನು ಇಂದಿನ ಪೀಳಿಗೆ ಸ್ಮರಿಸಬೇಕು ಎಂದು ಹೇಳಿದರು.
ಕೆ.ಎಫ್.ಪಾಟೀಲರ ಹೆಸರು ಬೆಂಗಳೂರಿನ ಭಾಗದಲ್ಲಿಯೂ ಅಜರಾಮರವಾಗಿ ಉಳಿಯಬೇಕೆಂಬ ಸದ್ದುದೇಶದಿಂದಲೇ ಕೆಎಲ್‌ಇ ಸಂಸ್ಥೆಯು ಅವರ ಹೆಸರು ಶಾಲೆಗೆ ನಾಮಕರಣ ಮಾಡಲಾಗಿದೆ ಎಂದರು.
 ಕೆ.ಎಫ್. ಪಾಟೀಲರ ಪುತ್ರಿ ಹಾಗೂ ಚಲನಚಿತ್ರ ನಿರ್ಮಾಪಕಿ ಅರುಣರಾಜೆ ಪಾಟೀಲ ಮಾತನಾಡಿ ತಂದೆಯವರು ಮೌಲ್ಯಾಧಾರಿತ ಶಿಕ್ಷಣ,ಸಂಸ್ಕೃತಿ ಮತ್ತು ಸಿದ್ಧಾಂತಗಳಿಗೆ ಆದ್ಯತೆ ನೀಡಿದವರು.ತಂದೆಯ ಹೆಸರೊಂದು ಪ್ರತಿಷ್ಠಿತ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾಗಿರುವುದು ಸಂತೋಷ ತಂದಿದೆ. ಕೇವಲ ಸಂಸ್ಥೆಗಳನ್ನು ಸ್ಥಾಪಿಸುವುದಲ್ಲ, ಅವುಗಳನ್ನು ಉಳಿಸಿ ಬೆಳೆಸಿದ ಕೆಎಲ್ಇ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ತಂದೆಯವರ ಹೆಸರಿನ ಶಾಲೆಗಳು ಯುವಪೀಳಿಗೆಗೆ ಪ್ರೇರಣೆಯಾಗಲಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಮಾತನಾಡಿದರು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ ಕೋರೆ,ಬೆಂಗಳೂರು ಗ್ರಾಮಾಂತರ ಜಿಲ್ಲಾಕಾರಿ ಯಶವಂತ್ ಗುರ್ಕಾ,ಶಾಲೆಯ ಪ್ರಾಚಾರ್ಯ ಶರ್ಮಿಸ್ತಾ ರಾಯ್,ಕೆಎಲ್‌ಇ ಉಪಾಧ್ಯಕ್ಷ ಬಸವರಾಜ ತಟವಟಿ ಇತರರಿದ್ದರು.

Spread the love

About Laxminews 24x7

Check Also

ಸಂತಾನಹರಣ ಚಿಕಿತ್ಸೆ ವೇಳೆ ಕರುಳು ಕಟ್ – ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವು: ಪತಿ ಆರೋಪ

Spread the loveಚಿಕ್ಕಬಳ್ಳಾಪುರ: ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಕರುಳು ಕತ್ತರಿಸಿ ವೈದ್ಯರ ಯಡವಟ್ಟು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ