Breaking News

ಖಾನಾಪುರ: ಕೃಷಿ ಹೊಂಡದಲ್ಲಿ ಬಿದ್ದು ರೈತ ಸಾವು

Spread the love

ಖಾನಾಪುರ: ತಮ್ಮದೇ ಜಮೀನಿನ ಕೃಷಿ ಹೊಂಡದ ಬಳಿ ಬೆಳೆದಿದ್ದ ಕಳೆ ತೆಗೆಯುತ್ತಿದ್ದ ರೈತರೊಬ್ಬರು ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ.

ಇಲ್ಲಿನ ಕಕ್ಕೇರಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕಕ್ಕೇರಿ ಗ್ರಾಮದ ನಿವಾಸಿ ಮಲ್ಲಯ್ಯ ದುಂಡಯ್ಯ ಹಿರೇಮಠ (52) ಮೃತ ರೈತ. ಮಲ್ಲಯ್ಯ ತಮ್ಮ ಹೊಲದ ಕೃಷಿ ಹೊಂಡದ ಸುತ್ತಮುತ್ತ ಕಳೆ ತೆಗೆಯುವಾಗ ಕಾಲು ಜಾರಿ ಹೊಂಡದಲ್ಲಿ ಬಿದ್ದಿದ್ದಾರೆ.

ಅವರಿಗೆ ಈಜಲು ಬಾರದ್ದರಿಂದ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಕಾಂಗ್ರೆಸ್‌ನಿಂದ ಗೂಂಡಾಗಿರಿ – ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ಬಿಜೆಪಿ ನಿಯೋಗ

Spread the loveಬೆಂಗಳೂರು: ಕಾಂಗ್ರೆಸ್  ಕಚೇರಿ ಎದುರು ತಮ್ಮ ಮೇಲೆ ನಡೆದ ಹಲ್ಲೆ ಖಂಡಿಸಿ ಬಿಜೆಪಿ  ನಾಯಕರು ಬೆಂಗಳೂರು ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ