ಬೆಂಗಳೂರು: ನೈಸ್ ವಿರುದ್ಧ ಜೆಡಿಎಸ್ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದೆ. ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರೋ ಜೆಡಿಎಸ್ “ನಥಿಂಗ್ ನೈಸ್” ವೆಬ್‌ಸೈಟ್ ಬಿಡುಗಡೆ ಮಾಡಿದೆ. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವೆಬ್‌ಸೈಟ್ ಬಿಡುಗಡೆ ಮಾಡಿದರು.
ಈ ವೆಬ್‌ಸೈಟ್‌ನಲ್ಲಿ ನೈಸ್ ಯೋಜನೆಯ ಸಂಪೂರ್ಣ ವಿವರ, ಟೋಲ್ ಯಾಕೆ ಕಟ್ಟಬಾರದು? ಹೈಕೋರ್ಟ್ ಆದೇಶ ಏನು? ಎಂಬುದು ಸೇರಿ ನೈಸ್ ಅಕ್ರಮದ ಸಂಪೂರ್ಣ ದಾಖಲಾತಿಗಳು ಇರಲಿವೆ. ಈ ಮೂಲಕ ಜನರಲ್ಲಿ ಜಾಗೃತಿ ಅಭಿಯಾನ ಮಾಡಲು ಜೆಡಿಎಸ್ ಮುಂದಾಗಿದೆ.
ವೆಬ್‌ಸೈಟ್ ಬಿಡುಗಡೆ ಬಳಿಕ ಮಾತಾನಾಡಿದ ನಿಖಿಲ್ ಕುಮಾರಸ್ವಾಮಿ, ನೈಸ್ ಸಂಸ್ಥೆಯಿಂದ 26 ವರ್ಷಗಳಿಂದ ಹಗರಣ ಆಗಿದೆ. ಸಾರ್ವಜನಿಕ ಹೆಸರಿನಲ್ಲಿ ನೈಸ್ ಅಭಿವೃದ್ಧಿಪಡಿಸಿಲ್ಲ, ರೈತರಿಗೆ ಪರಿಹಾರ ಸಿಕ್ಕಿಲ್ಲ. ಜನರ ಭೂಮಿ ಪಡೆದು ಅಭಿವೃದ್ಧಿ ಮಾಡಿಲ್ಲ. ನೈಸ್ ರಸ್ತೆಯಲ್ಲಿ ಓಡಾಡೋರಿಗೆ ಸಮಸ್ಯೆ ಆಗ್ತಿದೆ ಎಂದು ಕಿಡಿಕಾರಿದ್ದಾರೆ.
1997ರಲ್ಲಿ ಫ್ರೇಮ್ ವರ್ಕ್ ಅಗ್ರಿಮೆಂಟ್ ಆಗುತ್ತದೆ. ಆದ್ರೆ ಫ್ರೇಮ್ ವರ್ಕ್ ಅಗ್ರಿಮೆಂಟ್ ಉಲ್ಲಂಘನೆ ಆಗಿದೆ. 5 ಟೌನ್ ಶಿಪ್ ಕೂಡ ಅಗಬೇಕಿತ್ತು. ಈ ಯೋಜನೆ ಇನ್ನು ಸಂಪೂರ್ಣವೇ ಆಗಿಲ್ಲ. 111 KM ರಸ್ತೆ ಯೋಜನೆ ಪೂರ್ಣ ಆಗಿಲ್ಲ. 5km ಮಾತ್ರ ರಸ್ತೆ ಆಗಿದೆ. 23 ವರ್ಷ ಆದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ. 65-70% ರೈತರು ಬೀದಿಯಲ್ಲಿ ಇದ್ದಾರೆ. ಜಯಚಂದ್ರ ಜಂಟಿ ಸದನ ಸಮಿತಿ ವರದಿಯಲ್ಲಿ 22 ಷರತ್ತುಗಳ ಪೈಕಿ 16 ಷರತ್ತು ಉಲ್ಲಂಘನೆ ಆಗಿದೆ ಅಂತ ವರದಿ ಇದೆ. ಜುಲೈನಲ್ಲಿ ಹೈಕೋರ್ಟ್ ಭೂಮಿ ಕಳೆದುಕೊಂಡ ರೈತರಿಗೆ ಜಮೀನು ವಾಪಸ್ ಕೊಡಲು ಆದೇಶ ಮಾಡಿದೆ. ಸರ್ಕಾರ ಮೌನವಾಗಿ ಇರಬಾರದು, ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ಈ ಸರ್ಕಾರ ರಿಯಲ್ ಎಸ್ಟೇಟ್ ಪರ ಇದೆ. ಹೊಸ ಸಿಎಂ ಅವರು ರಿಯಲ್ ಎಸ್ಟೇಟ್ ಫೋರಂನ CEO ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಸರ್ಕಾರ ನೈಸ್ ಯೋಜನೆ ಟೇಕ್ ಓವರ್ ಮಾಡಬೇಕು. ಇಂದಿನಿಂದ ಅಭಿಯಾನ ಶುರು ಮಾಡ್ತೀವಿ. ರೈತರ ಭೂಮಿ ವಾಪಸ್ ಕೊಡಿಸುವ ಕೆಲಸ ಮಾಡ್ತೀವಿ. ಪರಿಹಾರ ಹಣ ಕೊಡಬೇಕು. ಹಣ ಕೊಟ್ಟರೆ ಬಡ್ಡಿ ಸಮೇತ ಕೊಡಬೇಕು. ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಕಿಡಿಕಾರಿದ್ದಾರೆ.
ಸಿಎಂ ಡಿಕೆಶಿ ನಾಗೇಂದ್ರ ರಾಜೀನಾಮೆ ಕೊಡಿಸೋ ಮೂಡ್‌ನಲ್ಲಿದ್ದಾರೆ:
ನಾಗೇಂದ್ರ ರಾಜಕೀಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರು ನಿನ್ನೆ ದೆಹಲಿಯಲ್ಲಿ ಮಾತಾಡಿದ್ರು. ಅವರ ಮಾತಿನ ದಾಟಿ ನೋಡಿದ್ರೆ ರಾಜೀನಾಮೆ ಕೊಡಿಸುವ ಮೂಡ್‌ನಲ್ಲಿ ಇದ್ದಾರೆ. ವಾಲ್ಮೀಕಿ ಹಗರಣದ ಬಗ್ಗೆ ಬಿಜೆಪಿ-ಜೆಡಿಎಸ್ ಸದನದಲ್ಲಿ ಒಟ್ಟಾಗಿ ಹೋರಾಟ ಮಾಡಿದ್ವಿ. ಬರ ಬಗ್ಗೆ ಚರ್ಚೆ ಮಾಡೋಕೆ ಸರ್ಕಾರ ಅವಕಾಶ ಮಾಡಿಕೊಡಬೇಕಿತ್ತು. ಆರೋಪ ಇರೋರಿಗೆ ಯಾಕೆ ಮತ್ತೆ ಮಂತ್ರಿ ಮಾಡಿದ್ರಿ? ಬೇರೆ ಸಮರ್ಥರು ಇರಲಿಲ್ಲವಾ? ಕುಮಾರಸ್ವಾಮಿ ಹಿಂದೆ ಹೇಳಿದಾಗೆ ಪೇಮೆಂಟ್ ಕೋಟಾ, ಮ್ಯಾನೇಜ್ಮೆಂಟ್ ಕೋಟಾ ಈಗ ಗೊತ್ತಾಗ್ತಿದೆ. ಈಗ ಇದರ ಬಗ್ಗೆ ಚರ್ಚೆಗಳು ಬರ್ತಿದೆ ಎಂದು ತಿಳಿಸಿದ್ದಾರೆ.
Laxmi News 24×7