Breaking News
Home / ಜಿಲ್ಲೆ / ಜನತಾ ಕರ್ಫ್ಯೂ ವಿರೋಧಿಸಿ ಮನೆ ಹೊರಗೆ ಕೂತ ವಾಟಾಳ್

ಜನತಾ ಕರ್ಫ್ಯೂ ವಿರೋಧಿಸಿ ಮನೆ ಹೊರಗೆ ಕೂತ ವಾಟಾಳ್

Spread the love

ಬೆಂಗಳೂರು: ಇಡೀ ವಿಶ್ವವೇ ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸಕ್ಕೆ ಆತಂಕಕ್ಕೊಳಗಾಗಿದೆ. ಇತ್ತ ಭಾರತದಲ್ಲೂ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಕಡಿವಾಣ ದೇಶಾದ್ಯಂತ ‘ಜತನಾ ಕರ್ಫ್ಯೂ’ ಜಾರಿಯಾಗಿದೆ. ಇದಕ್ಕೇ ರಾಜ್ಯದ ಜನತೆ ಕೂಡ ಸಾಥ್ ಕೊಟ್ಟಿದ್ದಾರೆ. ಆದ್ರೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ

ತಮ್ಮ ಮನೆ ಗೇಟ್ ಮುಂದೆ ಖುರ್ಚಿ ಹಾಕಿಕೊಂಡು ಕುಳಿತು, ನಾನು ಮನೆ ಒಳಗೆ ಇರಲ್ಲ ಹೊರಗೆ ಇರ್ತಿನಿ ಎಂದು ಮುಖಕ್ಕೆ ಮಾಸ್ಕ್ ಧರಿಸಿ ವಾಟಾಳ್ ಕುಳಿತ್ತಿದ್ದಾರೆ. ಇದನ್ನು ನೋಡಿದ ದಾರಿ ಹೋಕರೊಬ್ಬರು ಜನತಾ ಕರ್ಫ್ಯೂ ಮಹತ್ವವನ್ನು ತಿಳಿಸಿ ವಾಟಾಳ್ ನಾಗರಾಜ್‍ಗೆ ಬುದ್ದಿ ಹೇಳಿದ್ದಾರೆ. ಈ ವೇಳೆ ತಮಗೆ ಬುದ್ಧಿ ಹೇಳಿದ ವ್ಯಕ್ತಿಗೆ ವಾಟಾಳ್ ನಾಗರಾಜ್ ವಾಪಾಸ್ ಬುದ್ದಿ ಹೇಳಿ ಕಳುಹಿಸಿದ್ದಾರೆ

ಜನತಾ ಕರ್ಫ್ಯೂಗೆ ಮನೆ ಹೊರಗಡೆ ಇದ್ದೇ ಸಪೋರ್ಟ್ ಮಾಡುತ್ತೇನೆ. ಮನೆ ಒಳಗೆ ಇರಲ್ಲ, ಹೊರಗೆ ಇರುತ್ತೇನೆ. ಇಗಲೂ ಮನೆ ಹೊರಗಿದ್ದೇನೆ. ಕೆಲವೇ ಕ್ಷಣಗಳಲ್ಲಿ ನಾನು ಬೀದಿಗೆ ಹೋಗುತ್ತೇನೆ. ಈ ಕರ್ಫ್ಯೂ ಬೇಕಿರಲಿಲ್ಲ ಬದಲಿಗೆ ಸ್ವಚ್ಛತಾ ದಿನ ಮಾಡಬೇಕಿತ್ತು. ಹೀಗೆ ಕರ್ಫ್ಯೂ ಘೋಷಿಸಿ ಜನರಲ್ಲಿ ಭಯದ ವಾತಾವರಣ ಮೂಡಿಸಲಾಗ್ತಿದೆ ಎಂದು ವಾಟಾಳ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ


Spread the love

About Laxminews 24x7

Check Also

ಅದಾನಿ ಮ್ಯಾನೇಜರ್‌ ಮಾತ್ರ, ದುಡ್ಡೆಲ್ಲಾ ಪ್ರಧಾನಿ ನರೇಂದ್ರ ಮೋದಿಯದ್ದು: ಕೇಜ್ರಿವಾಲ್

Spread the love ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ