Breaking News
Home / ಜಿಲ್ಲೆ / ನಾಲಿಗೆಯ ಮೇಲೆ ನಿಲ್ಲುವಂಥ ನಾಯಕ ಎಂದರೆ ಸಿಎಂ ಯಡಿಯೂರಪ್ಪನವರು ಮಾಜಿ ಶಾಸಕ ಹೆಚ್ ವಿಶ್ವನಾಥ್

ನಾಲಿಗೆಯ ಮೇಲೆ ನಿಲ್ಲುವಂಥ ನಾಯಕ ಎಂದರೆ ಸಿಎಂ ಯಡಿಯೂರಪ್ಪನವರು ಮಾಜಿ ಶಾಸಕ ಹೆಚ್ ವಿಶ್ವನಾಥ್

Spread the love

ಮೈಸೂರು: ನಾಲಿಗೆಯ ಮೇಲೆ ನಿಲ್ಲುವಂಥ ನಾಯಕ ಎಂದರೆ ಸಿಎಂ ಯಡಿಯೂರಪ್ಪನವರು. ಅವರು ನಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಶಾಸಕ ಹೆಚ್ ವಿಶ್ವನಾಥ್ ತಿಳಿಸಿದ್ದಾರೆ.

ಮೈಸೂರಿನ ಸುತ್ತೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ನಮಗೆ ಮಾತುಕೊಟ್ಟಿದ್ದಾರೆ. ಅವರು ಕೊಟ್ಟ ಮಾತು ಉಳಿಸಿಕೊಳ್ಳಲಿ. ಹಾಗಾಗಿ ನಮಗೆ ಸಚಿವಸ್ಥಾನ ನೀಡಿ ಎಂದು ಕೇಳುತ್ತಿದ್ದೇವೆ ಎಂದರು.

ಉಪಚುನಾವಣೆಯಲ್ಲಿ ಸ್ಪರ್ಧಿಸಬೇಡಿ ಎಂದು ಬಿಜೆಪಿ ನಾಯಕರು ನಮಗೆ ಹೇಳಿದ್ದು ನಿಜ. ಆದರೆ ಕ್ಷೇತ್ರವನ್ನು ಬಿಟ್ಟು ಕೊಡಲು ಸಾಧ್ಯವೇ? ನಾನು ಪಕ್ಷ ಸಂಘಟಿಸಿ ಹುಣಸೂರಿನಲ್ಲಿ 52 ಸಾವಿರ ವೋಟು ಗೆದ್ದಿದ್ದೇನೆ. ಈ ಮೂಲಕ ಪಕ್ಷಕ್ಕೆ ಒಂದು ಬಲ ತಂದುಕೊಟ್ಟಿದ್ದೇನೆ. ಅಂದು ಚುನಾವಣೆಯಲ್ಲಿ ಸ್ಪರ್ಧಿಸಬೇಡ ಎಂದು ಹೇಳಿದ್ದು ಸತ್ಯ. ಆದರೆ ಸೋತರೆ ಸಚಿವ ಸ್ಥಾನ ಕೊಡೋದು ಕಷ್ಟ ಎಂದು ಹೇಳಿರಲಿಲ್ಲ. ಅವತ್ತು ಸಚಿವ ಸ್ಥಾನದ ಬಗ್ಗೆ ಚರ್ಚೆ ಆಗಿರಲಿಲ್ಲ ಎಂದರು.

ಈ ಹಿಂದೆ ಎಸ್.ಟಿ ಸೋಮಶೇಖರ್ ಅವರು ಮೈಸೂರಿಗೆ ಬಂದಾಗ ನಮ್ಮ ನಾಯಕ ಹೆಚ್ ವಿಶ್ವನಾಥ್ ಎಂದಿದ್ದರು. ಈಗ ನಾವು ಒಟ್ಟಿಗೆ ಇಲ್ಲ ಎಂದರೆ ಹೇಗೆ. ಸೋಮಶೇಖರ್ ಹೇಳಿದರೆಂದು ನಾವು ಒಟ್ಟಿಗೆ ಸೇರಬಾರದೆಂದು ಇಲ್ಲ ಗೆಲುವು-ಸೋಲು ಬೇರೆ ವಿಚಾರ ಒದಕಿನಾ ಪ್ರೆಶ್ನೆ ಬರಲ್ಲ. ನಾವೆಲ್ಲರೂ ಈಗಲೂ ಒಟ್ಟಿಗೆ ಇದ್ದೇವೆ ಎನ್ನುವ ಮೂಲಕ ತಿರುಗೇಟು ನೀಡಿದರು.

ಇತ್ತೀಚೆಗಷ್ಟೇ ಮಾತನಾಡಿದ್ದ ಶಾಸಕ ಎಸ್.ಟಿ ಸೋಮಾಶೇಖರ್, ನಾವು ಬಿಜೆಪಿಗೆ ಸೇರಿದ್ದ ಸಂದರ್ಭದಲ್ಲಿ ಅವರಿಗೆ ಮಾಹಿತಿ ಇತ್ತು. ಯಾವ ಕ್ಷೇತ್ರದಲ್ಲಿ ಯಾರು ಮುನ್ನಡೆಯಲ್ಲಿರುತ್ತಾರೆ. ಯಾರು ಹಿನ್ನಡೆಯಲ್ಲಿರುತ್ತಾರೆ ಎಂಬುದು ನಾಯಕರಿಗೆ ಗೊತ್ತಿತ್ತು. ಹೀಗಾಗಿ ವಿಶ್ವನಾಥ್ ಹಾಗೂ ಎಂಟಿಬಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಬಿಜೆಪಿ ನಾಯಕರು ಮನವಿ ಮಾಡಿದ್ದರು. ಆದರೂ ಅವರು ಉಪಚುನಾವಣೆಲ್ಲಿ ಸ್ಪರ್ಧಿಸಿದ್ದರು ಎಂದು ಹೇಳಿಕೆ ನಿಡಿದ್ದರು ಅಲ್ಲದೇ ಬಿಜೆಪಿಗೆ ಸೇರುವ ಮೊದಲು ನಾವು 17 ಜನ ಒಗ್ಗಟ್ಟಾಗಿದ್ದೆವು. ಸಭೆ ಮಾಡುತ್ತಿದ್ದೆವು. ಈಗ ನಾವು ಬಿಜೆಪಿಗೆ ಸೇರಿಯಾದ ಮೇಲೆ ನಮ್ಮ ಗುಂಪು ಯಾವುದೇ ಪ್ರತ್ಯೇಕ ಸಭೆ ಮಾಡಿಲ್ಲ. ಈಗ ನಾವೆಲ್ಲರೂ ಬಿಜೆಪಿಯವರು ಎಂದಿದ್ದರು.


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ