Breaking News

ಯುದ್ಧದ ಮಧ್ಯೆಯೂ ಶೇ.7.7ಕ್ಕೆ ತಲುಪಿದ ಭಾರತದ ಜಿಡಿಪಿ

Spread the love

ನವದೆಹಲಿ: ಯುದ್ಧ ಹಾಗೂ ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕತೆಯ ಬೆಳವಣಿಗೆ ಕಳೆದ ವರ್ಷಕ್ಕಿಂತ ಉತ್ತಮ ರೀತಿಯಲ್ಲಿದೆ. ದೇಶದ 2026ರ ವಾರ್ಷಿಕ ಜಿಡಿಪಿ ಬೆಳವಣಿಗೆ ಶೇಕಡಾ 7.7ಕ್ಕೆ ತಲುಪಿದೆ.

ಕಳೆದ ವರ್ಷ ಜಿಡಿಪಿ ಪ್ರಮಾಣ ಶೇಕಡ 7.1ರಷ್ಟಿತ್ತು. ಯುದ್ಧ ಹಾಗೂ ಜಾಗತಿಕ ಅಸ್ಥಿರತೆಯ ನಡುವೆಯೂ ಭಾರತ ತನ್ನ ಆರ್ಥಿಕ ಚೈತನ್ಯವನ್ನು ಗಟ್ಟಿಯಾಗಿ ಉಳಿಸಿಕೊಂಡಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸುತ್ತಿವೆ. ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ 2026 ಜನವರಿಯಿಂದ ಮಾರ್ಚ್ವರೆಗೆ ಶೇಕಡ 7.8ರಷ್ಟು ಆರ್ಥಿಕ ಬೆಳವಣಿಗೆ ಕಂಡು ಬಂದಿದೆ ಎಂದು ತಿಳಿಸಿದೆ.

2022-23ರಲ್ಲಿ ಜಿಡಿಪಿಯನ್ನು 2026ಕ್ಕೆ 323.12 ಲಕ್ಷ ಕೋಟಿಗೆ ತಲುಪಿಸುವ ಗುರಿ ಹೊಂದಲಾಗಿತ್ತು. ನಾಮಿನಲ್ ಜಿಡಿಪಿ 2025ರಲ್ಲಿ 318.07 ಲಕ್ಷ ಕೋಟಿ ರೂಪಾಯಿ ಇದ್ದಿದ್ದು, 2026ರ ಸಾಲಲ್ಲಿ 8.9ರಷ್ಟು ಹಣದುಬ್ಬರದ ನಡುವೆಯೂ 346.36 ಲಕ್ಷ ಕೋಟಿಗೆ ಹೆಚ್ಚಾಗಿದೆ. ಇನ್ನು ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ ಅಂದ್ರೆ ಜಿವಿಎ (ಗ್ರಾಸ್ ವಾಲ್ಯೂ ಆಡೆಡ್) ಶೇ.7.9ರಷ್ಟು ಏರಿಕೆ ಕಂಡಿದೆ. ಇದು 2025ರಲ್ಲಿ ಶೇಕಡ 7.3 ರಷ್ಟಿತ್ತು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ