ಬೆಳಗಾವಿ ಮಹಾನಗರ ಪಾಲಿಕೆ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಕಚೇರಿ ಕೊಠಡಿಗಳನ್ನು ಮಹಾಪೌರ ಪ್ರೀತಿ ಕಾಮಕರ, ಹಾಗೂ ಉಪಮಹಾಪೌರ್ ಹನುಮಂತ ಕೊಂಗಾಲಿ, ಉದ್ಘಾಟಿಸಿದರು,
ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳ ಕಚೇರಿಯ ಕೊಠಡಿಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜು ಭಾತಕಾಂಡೆ, ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸಾರಿಕಾ ಪಾಟೀಲ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೇಯಸ್ ನಕಾಡಿ, ಕಂದಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಮೇಶ್ ಮಾಯಿಳ್ಳಾಗೋಳ, ಕಚೇರಿ ಕೊಠಡಿಗಳನ್ನು ಪೂಜೆ ನೆರವೇರಿಸಿ ಪದಗ್ರಹಣ ಮಾಡಿದರು.
ಬೆಳಗಾವಿ ಮಹಾನಗರ ಪಾಲಿಕೆ 4 ಸ್ಥಾಯಿ ಸಮಿತಿಗಳ ಪ್ರತಿ ಸಮಿತಿಗಳಲ್ಲಿ ಏಳು ಜನ ಸದಸ್ಯರುಗಳಿದ್ದು ಅದರಲ್ಲಿ ಆಡಳಿತ ಪಕ್ಷದ ಸದಸ್ಯರುಗಳು
ಐದು ಸದಸ್ಯರುಗಳು ಹಾಗೂ ವಿರೋಧ ಪಕ್ಷದ ಎರಡು ಸಮಾವೇಶವಿದೆ ಮಹಾನಗರ ಪಾಲಿಕೆ ಸದಸ್ಯರುಗಳು ಸಂದರ್ಭದಲ್ಲಿ ತಮ್ಮ ಬೆಂಬಲಿಗರು ಹಾಗೂ ಮಹಾನಗರ ಪಾಲಿಕೆಯ ಹಿರಿಯ
ಸಿಬ್ಬಂದಿಗಳು ಉಪಸ್ಥಿತರಿದ್ದರು
Laxmi News 24×7