Breaking News

ನಾನು ರೈತನ ಮಗ, ಕೃಷಿ ಅಧ್ಯಯನಕ್ಕೆ ವಿದೇಶ ಪ್ರವಾಸಕ್ಕೆ ಹೋಗ್ತಿದ್ದೇನೆ: ತಮ್ಮಯ್ಯ

Spread the love

ಚಿಕ್ಕಮಗಳೂರು: ನಾನೊಬ್ಬ ರೈತನ ಮಗನಾಗಿದ್ದು ಕೃಷಿ ಅಧ್ಯಯನಕ್ಕಾಗಿ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದು ಚಿಕ್ಕಮಗಳೂರು ಶಾಸಕ ಹೆಚ್‌.ಡಿ  ತಮ್ಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ನಾನು ಒಬ್ಬ ರೈತರ ಮಗ. ಒಬ್ಬ ಕೃಷಿಕ ಈಗ ಶಾಸಕನಾಗಿದ್ದೇನೆ. ಕೃಷಿ ವಿಚಾರ ತಿಳಿಯಲು ವಿದೇಶ ಪ್ರವಾಸಕ್ಕೆ ಹೋಗಿತ್ತಿದ್ದೇನೆ  ಎಂದು ತಿಳಿಸಿದ್ದಾರೆ.
ಮೊದಲಿನಿಂದಲೂ ನಾನು ವಿದೇಶಕ್ಕೆ ಹೋಗಿ ಬರುತ್ತಿದ್ದೇನೆ. ಬೇರೆ ಬೇರೆ ದೇಶಗಳಲ್ಲಿ ಕೃಷಿ ಹೇಗಿದೆ ಎಂದು ನೋಡಬೇಕು. ಹಾಗಾಗಿ ಪ್ರವಾಸಕ್ಕೆ ಹೋಗ್ತಾ ಇದಿನಿ. ಸಿದ್ದರಾಮಯ್ಯ ಆಪ್ತರು ಅಂತ ಏನಿಲ್ಲ, ನಾನು ಕುಟುಂಬ ಸಮೇತರಾಗಿ ಹೋಗುತ್ತಿದ್ದೇವೆ ಎಂದಿದ್ದಾರೆ.

ನಾನು ನನ್ನ ಖಾತೆಯಿಂದ ಟೂರ್ & ಟ್ರಾವೆಲ್ಸ್‌ಗೆ ಹಣ ವರ್ಗಾವಣೆ ಮಾಡಿದ್ದೇನೆ. ಹಾಗಾಗಿ ಇದು ನನ್ನ ಸ್ವಂತ ಖರ್ಚಿನಲ್ಲಿ ಹೋಗ್ತಾ ಇರೋದು. ನಾನು ಕುಟುಂಬ ಸಮೇತರಾಗಿ ಹೋಗ್ತಾ ಇದು. ಯಾರು ಬರ್ತಾರೋ ನೋಡೋಣ ಎಂದಿದ್ದಾರೆ.


Spread the love

About Laxminews 24x7

Check Also

ಸ್ನೇಹಿತನ ಮದುವೆಗೆ ಬಂದಿದ್ದ ಯುವಕ ಭದ್ರಾ ನದಿಯಲ್ಲಿ ಮುಳುಗಿ ಸಾವು

Spread the loveಚಿಕ್ಕಮಗಳೂರು: ಸ್ನೇಹಿತನ ಮದುವೆಗೆ ಬಂದಿದ್ದ ಯುವಕನೊಬ್ಬ ಭದ್ರಾ ನದಿಯಲ್ಲಿ  ಮುಳುಗಿ ಸಾವನ್ನಪ್ಪಿದ ಘಟನೆ ಎನ್.ಆರ್.ಪುರ  ತಾಲೂಕಿನ ಬನ್ನೂರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ