Breaking News

ಸುಳ್ಳು ಆರೋಪಗಳಿಗೆ ಹೆದರಲ್ಲ, ಎಲ್ಲದಕ್ಕೂ ರೆಡಿಯಾಗಿ ಬಂದಿದ್ದೇವೆ – ಕುಮಾರಸ್ವಾಮಿ ಲಂಚದ ಆರೋಪಕ್ಕೆ ಡಿಸಿ ತಿರುಗೇಟು

Spread the love

ಹಾಸನ: ಹೆಚ್‌.ಡಿ ಕುಮಾರಸ್ವಾಮಿ ಅವರ ಆರೋಪ ಎಲ್ಲವೂ ಸಂಪೂರ್ಣ ಸುಳ್ಳು. ಡೇ 1 ನಿಂದಲೂ ನನ್ನನ್ನ ಟಾರ್ಗೆಟ್‌ ಮಾಡಿದ್ದಾರೆ. ನಾವ್‌ ಇದಕ್ಕೆಲ್ಲ ಹೆದರಲ್ಲ, ಎಲ್ಲದಕ್ಕೂ ರೆಡಿ ಆಗಿನೇ ಬಂದಿರ್ತೀವಿ. ಅದಕ್ಕೆ ಟ್ರೈನಿಂಗ್‌ ಕೂಡ ಆಗಿರುತ್ತೆ ಎಂದು ಹಾಸನ ಡಿಸಿ ಕೆ.ಎಸ್‌ ಲತಾಕುಮಾರಿ  ಖಡಕ್‌ ಉತ್ತರ ಕೊಟ್ಟಿದ್ದಾರೆ.

ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಹಾಗೂ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಲಂಚದ ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಅನೇಕ ವಿಚಾರಗಳನ್ನ ಪ್ರಸ್ತಾಪಿಸಿದ್ದಾರೆ.

ಡೇ 1 ನಿಂದ ನನ್ನನ್ನ ಟಾರ್ಗೆಟ್‌ ಮಾಡಿದ್ದಾರೆ
ನನ್ನನ್ನ ಟಾರ್ಗೆಟ್‌ ಮಾಡಿದ್ದಾರೆ, ಡೇ 1 ನಿಂದ (ಕರ್ತವ್ಯದ ಮೊದಲ ದಿನದಿಂದ) ಇದನ್ನ ಅನುಭವಿಸುತ್ತಲೇ ಬಂದಿದ್ದೇನೆ. ಇನ್ನೂ ಏನೇನು ಆರೋಪಗಳು ಬರುತ್ತವೆಯೋ ಗೊತ್ತಿಲ್ಲ. ಆದ್ರೆ ನಾವ್‌ ಇದಕ್ಕೆಲ್ಲ ಹೆದರಲ್ಲ, ಎಲ್ಲದಕ್ಕೂ ರೆಡಿ ಆಗಿನೇ ಬಂದಿರ್ತೀವಿ. ಅದಕ್ಕೆಲ್ಲ ನಮಗೆ ಟ್ರೈನಿಂಗ್‌ ಆಗಿರುತ್ತೆ. ಕುಮಾರಸ್ವಾಮಿ ಅವರ ಆರೋಪಗಳೆಲ್ಲವೂ ಸಂಪೂರ್ಣ ಸುಳ್ಳು, ಹೆಣ್ಣುಮಕ್ಕಳನ್ನ ತೇಜೋವಧೆ ಮಾಡುವ ಕೆಲಸ ಮಾಡಲಾಗ್ತಿದೆ. ಜನ ಇದನ್ನ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.

ಕೆಲಸ ಮಾಡೋದ್‌ ಬಿಟ್ಟು ಯಾಕೆ ಹೀಗೆ ಹಿಂಸೆ ಮಾಡ್ತಿದ್ದಾರೆ?
ಕುಮಾರಸ್ವಾಮಿ ಅವರದ್ದು ಸುಳ್ಳು ಆರೋಪ, ಈ ಬಗ್ಗೆ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ಕೊಟ್ಟಿದ್ದೇನೆ. ಎಫ್‌ಐಆರ್‌ ಕೂಡ ಮಾಡಿಸಿದ್ದೇನೆ. ಸುಳ್ಳು ಆರೋಪಗಳಿಗೆ ಏನ್‌ ಉತ್ತರ ಕೊಡೋಕಾಗುತ್ತೆ. ಅಲ್ಲದೇ ಈ ರೀತಿ ಹಿರಿಯರು ಸುಳ್ಳು ಆರೋಪ ಮಾಡಿದ್ರೆ, ಯಾವ ರೀತಿ ಕ್ರಮ ತಗೋಬೇಕು‌ ಅಂತಾ ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತರುತ್ತೇನೆ, ಅವರಿಗೆ ಪತ್ರ ಬರೆಯುತ್ತೇನೆ. ಜೊತೆಗೆ ಪಿಡಿಎಫ್‌ ಬಿಡುಗಡೆ ಯಾರು ಬಿಡುಗಡೆ ಮಾಡಿದ್ರು, ಅವರ ವಿರುದ್ಧ ಕ್ರಮ ತಗೋತೇವೆ. ಕೆಲಸ ಮಾಡೋದು ಬಿಟ್ಟುಬಿ ಯಾಕೆ ಹೀಗೆ ಅಧಿಕಾರಿಗಳಿಗೆ ಹಿಂಸೆ ಮಾಡ್ತಿದ್ದಾರೆ ಅಂತಾ ಪ್ರಶ್ನೆ ಮಾಡಿದ್ದಾರೆ.

ಹಾಸನ ಡಿಸಿ, ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ
ಇದಕ್ಕೂ ಮುನ್ನ ಹಾಸನದ ಶಾಸಕ ಹೆಚ್.ಪಿ ಸ್ವರೂಪ್‌ಪ್ರಕಾಶ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಹಾಗೂ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ ಮಾಡಿದ್ದರು. ಇದೇ ವೇಳೆ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಪ್ ಚಾಟ್ ರಿಲೀಸ್ ಮಾಡಿದ್ದರು.


Spread the love

About Laxminews 24x7

Check Also

12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ 65ರ ವೃದ್ಧ

Spread the loveಕಾರವಾರ: ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆಘಾತಕಾರಿ ಪ್ರಕರಣ ಮುಂಡಗೋಡು ತಾಲೂಕಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ