Breaking News

ಬೆಳಗಾವಿಯಲ್ಲಿ ಧಾರಾಕಾರ ಮಳೆ: ರಸ್ತೆ, ಅಂಗಡಿಗಳಿಗೆ ನುಗ್ಗಿದ ಚರಂಡಿ ನೀರು; ತರಕಾರಿ, ಹಣ್ಣುಗಳು ನೀರುಪಾಲು

Spread the love

ಬೆಳಗಾವಿಯಲ್ಲಿ ಸಂಜೆ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ರಸ್ತೆ, ಅಂಗಡಿಗಳು, ಮಾರ್ಕೆಟ್, ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸಂಪೂರ್ಣ ಪೋರ್ಟ್ ರೋಡ್ ನೀರಿನಿಂದ ತುಂಬಿಕೊಂಡಿರುವುದರಿಂದ ರವಿವಾರ ಪೇಟೆ ಬೆಲ್ಲದ ಮಾರ್ಕೆಟ್ ಹಾಗೂ ಕಾಂದಾ ಮಾರುಕಟ್ಟೆ ನದಿಯಂತಾಗಿದೆ.

ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು, ಹೂಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ವ್ಯಾಪಾರಸ್ಥರು ಪರದಾಡುವಂತಾಯಿತು. ಕೆಲ ನಿವಾಸಿಗಳು ಕಸಗಳನ್ನು ತಂದು ಘಟಾರಕ್ಕೆ ಸುರಿಯುವುದರಿಂದ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಗೆ ನುಗ್ಗಿದ್ದು, ಚರಂಡಿ ನೀರು ರಸ್ತೆ, ಅಂಗಡಿಗಳಿಗೆ ನುಗ್ಗುತ್ತಿವೆ. ಮಹಾನಗರ ಪಾಲಿಕೆಯಿಂದ ಪ್ರತಿ ಮನೆ ಮನೆಗೆ ಕಸದ ಗಾಡಿಗಳು ಹೋದರು ಕೂಡ ನಿವಾಸಿಗಳು ಸರಿಯಾಗಿ ಕಸವನ್ನು ಕಸದ ವಾಹನಗಳಿಗೆ ನೀಡುವುದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಕಸಗಳನ್ನು ಖಾಲಿ ಜಾಗದಲ್ಲಿ, ರಸ್ತೆ ಬದಿ ಚರಂಡಿಗೆ ಸುರಿಯುತ್ತಿರುವುರಿಂದ ಚರಂಡಿಗಳು ಕಟ್ಟಿಕೊಂಡು ಮಳೆನೀರು ಸರಾಗವಾಗಿ ಹೋಗದೇ ಮನೆಗಳಿಗೆ ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿವೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ