ಬಾರ್ ಅಂಗಡಿಗೆ ಕನ್ನ ಹಾಕಲು ಬಂದ ಪೆಗ್ ಹಾಕಿ, ನಿದ್ರೆಗೆ ಜಾರುವ ಮೂಲಕ ಪೊಲೀಸರ ಅತಿಥಿ
Laxminews 24x7
ಏಪ್ರಿಲ್ 16, 2020
ಜಿಲ್ಲೆ, ಬೆಂಗಳೂರು, ರಾಜ್ಯ, ಹಾಸನ
298 Views
ಬೆಂಗಳೂರು: ಬಾರ್ ಅಂಗಡಿಗೆ ಕನ್ನ ಹಾಕಲು ಬಂದ ರೌಡಿ ಶೀಟರ್ ನೊಬ್ಬ ಮನಸ್ಸು ತಡೆಯಲಾರದೆ ಪೆಗ್ ಮೇಲೆ ಪೆಗ್ ಹಾಕಿ, ನಿದ್ರೆಗೆ ಜಾರುವ ಮೂಲಕ ಪೊಲೀಸರ ಅತಿಥಿಯಾಗಿದ್ದಾನೆ.
ಹಾಸನದ ಸಂತೆಪೇಟೆಯಲ್ಲಿರುವ ಪ್ರಿಯದರ್ಶಿನಿ ಬಾರ್ ಗೆ ಕನ್ನ ಹಾಕಲು ಬಂದ ಇಲ್ಲಿನ ವಲ್ಲಭಾಯಿ ರಸ್ತೆಯ ರೌಡಿ ಶೀಟರ್ ರೋಹಿತ್ ಅಲಿಯಾಸ್ ಕೋಕಿ ಎರಡು ಬಾಕ್ಸ್ ಎಣ್ಣೆ ಪ್ಯಾಕ್ ಮಾಡಿದ್ದಾನೆ. ಬಳಿಕ ಮನಸ್ಸು ತಡೆಯಲಾರದೆ ಬಾರ್ ನಲ್ಲಿಯೇ ಕುಳಿತು ಕುಡಿಯಲು ಆರಂಭಿಸಿದ್ದಾನೆ. ಪೆಗ್ ಮೇಲೆ ಪೆಗ್ ಹಾಕುತ್ತಲೇ ತಾನು ಬಂದಿರುವ ಕೆಲಸವನ್ನು ಮರೆತು ನಿದ್ದೆಗೆ ಜಾರಿದ್ದಾನೆ.
ಲಾಕ್ ಡೌನ್ ಹಿನ್ನೆಲೆ ಮದ್ಯದಂಗಡಿಗಳು ಬಂದಾಗಿವೆ. ಇದರಿಂದ ಕಂಗಾಲಾದ ರೌಡಿ ಶೀಟರ್ ರೋಹಿತ್ ಅಂಗಡಿಯ ಮೇಲ್ಛಾವಣಿ ತೆಗೆದು ಒಳಗೆ ಹೋಗಿದ್ದಾನೆ. ಎಣ್ಣೆ ಕಳ್ಳತನ ಮಾಡಲು ಬಾಕ್ಸ್ ಸಿದ್ದಗೊಳಿಸಿದ್ದಾನೆ. ಆದರೆ ಎಣ್ಣೆ ಪ್ರೀತಿ ಮನಸೆಳೆದ ಕಾರಣವೇನೋ ಅಲ್ಲಿಯೇ ಕುಳಿತು ಎಣ್ಣೆ ಹಾಕಲು ಪ್ರಾರಂಭಿಸಿದ್ದಾನೆ. ಕೊನೆಗೆ ಎಣ್ಣೆ ಅಮಲು ನಿದ್ದೆಗೆ ಜಾರುವಂತೆ ಮಾಡಿದೆ.
ಬೆಳಿಗ್ಗೆ ಅಂಗಡಿಗೆ ಮಾಲೀಕ ಬಂದು ಪರಿಶೀಲನೆ ನಡೆಸುವ ವೇಳೆ ಕುಡುಕ ಸಿಕ್ಕಿ ಬಿದ್ದಿದ್ದಾನೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.