ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ ದೇವೇಗೌಡ ಮಗನನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಮೈಸೂರಿನ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಶಾಸಕ ಜಿ.ಟಿ ದೇವೇಗೌಡ ಪತ್ನಿ ಲಲಿತಾ ಜಿ.ಟಿ ದೇವೇಗೌಡ ಅವರಿಗೆ ʻಸಹಕಾರ ಸೇವಾ ರತ್ನ’ ಪ್ರಶಸ್ತಿ ನೀಡಿದ್ದ ಬೆನ್ನಲ್ಲೇ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ಈ ವೇಳೆ ಭಾಷಣಕ್ಕೆ ನಿಂತ ಕೂಡಲೇ ಶಾಸಕ ಜಿ.ಟಿ ದೇವೇಗೌಡರು ಗಳಗಳನೆ ಅತ್ತರು. ಕಾರ್ಯಕ್ರಮದಲ್ಲಿ ಪುತ್ರ ಶಾಸಕ ಹರೀಶ್ ಗೌಡ ಹೊರತುಪಡಿಸಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ಭಾಗಿಯಾಗಿದ್ದರು.
ಕಳೆದ 2 ವರ್ಷಗಳಿಂದ ಜಿಟಿಡಿ ಮಗ ಶಾಸಕ ಜಿ.ಡಿ ಹರೀಶ್ ಗೌಡ ತಂದೆಯಿಂದ ದೂರವಾಗಿ ಪ್ರತ್ಯೇಕವಾಗಿ ಪತ್ನಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ತಾಯಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮದಲ್ಲೂ ಪುತ್ರ ಇಲ್ಲ ಎಂಬ ನೋವಿನಲ್ಲಿ ಜಿಟಿಡಿ ಕಣ್ಣೀರಿಟ್ಟರು.
Laxmi News 24×7