ಗೋಕಾಕ: ಗ್ರಾಮಗಳ ಅಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಯ ಆಶೋತ್ತರಗಳು ಪೂರ್ಣವಾಗ ಬೇಕಾದರೆ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಹಕಾರ ಅತ್ಯಾವಶ್ಯಕವಾಗಿದೆ. ನೂತನ ತಾಲೂಕು ಪಂಚಾಯತಗಳಲ್ಲಿ ಸಾಮಥ್ರ್ಯ ಸೌಧ ನಿರ್ಮಾಣಕ್ಕೆ 45 ಲಕ್ಷ ರೂ.ಗಳು ಮಂಜೂರಿಸಲಾಗುವದು ಎಂದು ಮೈಸೂರಿನ ಎಸ್.ಐ.ಆರ್.ಡಿ ತರಭೇತಿ ಸಂಯೋಜಕ ಸಿ.ವಿಜಯಕುಮಾರ ಹೇಳಿದರು.
ಅವರು ನಗರದ ಸಾಮಥ್ರ್ಯ ಸೌಧ, ತಾಪಂ ಕಛೇರಿಗಳಲ್ಲಿ ಜರುಗಿದ ಜನಪ್ರತಿನಿಧಿಗಳ ಸ್ಯಾಟಕಾಮ್ ತರಭೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಸ್ಥಳ ಪರಿಶೀಲನೆ ಮಾಡಿದರು. ಜನಪ್ರತಿನಿಧಿಗಳು ಅಗತ್ಯ ಅನುದಾನದಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥಿತ ರೀತಿಯಲ್ಲಿ ಜನೋಪಯೋಗಿ ಕಾರ್ಯಗಳನ್ನು ಮಾಡಬೇಕು.ಜನರ ಸಹಭಾಗಿತ್ವದಲ್ಲಿ ಕ್ರಮಗಳನ್ನು ಪೂರ್ಣಗೋಳಿಸಬೇಕು. ಗೋಕಾಕದಲ್ಲಿ ಅಳವಡಿಸಿಕೊಂಡಿರುವ ಸೋಲಾರ ಶಕ್ತಿ ಯಿಂದ ಪುನರ ಬಳಕೆಯಿಂದಾಗಿ ಸಾಕಷ್ಟು ಉಳಿತಾಯವಾಗುವದು. ಇಂತಹ ಕಾರ್ಯ ಮೆಚ್ಚುವಂತಹದು ಇತರೆ ತಾಲೂಕುಗಳಿಗೆ ಅಳವಡಿಸಿಕೊಳ್ಳಲು ಸೂಚಿಸಿದರು. ಶೀಘ್ರದಲ್ಲಿಯೇ ನೂತನ ಮೂಡಲಗಿ ತಾಲೂಕು ಪಂಚಾಯತಿಗೆ 45 ಲಕ್ಷ ರೂ.ಗಳ ಸಾಮಥ್ರ್ಯ ಸೌಧ ನಿರ್ಮಿಸಲಾಗುವದು. ಅಗತ್ಯ ಸ್ಥಳ ಪರಿಶೀಲನೆ ಕಾರ್ಯ ನಡೆದಿದೆ ಎಂದು ನುಡಿದರು.
ಗೋಕಾಕ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಮಾತನಾಡಿ, ಮೂಡಲಗಿ ಮತ್ತು ಗೋಕಾಕ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳು ಸುವ್ಯವಸ್ಥಿತ ರೀತಿಯಲ್ಲಿ ಜನಪ್ರತಿನಿಧಿಗಳು ಸ್ಥಳೀಯ ಹಿರಿಯರ ಸಹಕಾರದಿಂದ ಅಭಿವೃದ್ಧಿಯತ್ತ ಸಾಗುತ್ತಿವೆ. ಸ್ಥಳೀಯ ಸಚಿವರಾದ ರಮೇಶ ಜಾರಕಿಹೊಳಿ, ಕೆ.ಎಮ್.ಎಫ್ ಅಧ್ಯಕ್ಷರು ಅರಭಾಂವಿ ಶಾಸಕರ ನಿರಂತರ ಪ್ರಯತ್ನದಿಂದಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆಯಿಂದ ಆಗುತ್ತಿವೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಾಗಾರದಲ್ಲಿ ಸಹಾಯಕ ನಿರ್ಧೇಶಕ ಎಸ್.ಎಚ್ ದೇಸಾಯಿ, ವಿಷಯ ನಿರ್ವಾಹಕರಾದ ಎಸ್.ಬಿ ಅಥಣಿ, ನಂದೆಪ್ಪ ಲಮಾಣಿ, ಎಸ್.ಯರ್.ಡಿ ಸಂಪನ್ಮೂಲ ವ್ಯಕ್ತಿ ಬಿ.ಎಚ್ ಭಜಮತ್ರಿ, ಅರ್.ಎಸ್ ಹೊಸಮನಿ, ಉಮೇಶ ವಗ್ಗರ, ದಸರಥ ಕಲಾಲ ಹಾಗೂ ಗ್ರಾ.ಪಂ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು.
Tags development Gokak politicians
Check Also
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
Spread the love ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ. ಚಂದ್ರಚೂಡ್(Dhananjaya Yeshwant Chandrachud) ಅವರು ಶುಕ್ರವಾರ(ನ8) ಸುಪ್ರೀಂ ಕೋರ್ಟ್‌ಗೆ ಭಾವನಾತ್ಮಕ …