Breaking News

ರಾಜ್ಯದ ರೆಡ್ ಝೋನ್ ,ಆರೆಂಜ್ ಝೋನ್,ಗ್ರೀನ್ ಝೋನ್ ಗಳ ಪರಿಷ್ಕೃತ ಪಟ್ಟಿ……..

Spread the love

ಬೆಂಗಳೂರು : ಮಾರಕ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ‌ಏತನ್ಮಧ್ಯೆ, ಕೇಂದ್ರ ಆರೋಗ್ಯ ಇಲಾಖೆ ಇಂದು ದೇಶದ ರೆಡ್, ಆರೆಂಜ್, ಗ್ರೀನ್ ಝೋನ್ ಗಳ ಪರಿಷ್ಕೃತ ಪಟ್ಟಿಯನ್ನು ರಿಲೀಸ್ ಮಾಡಿದೆ.

ಈ ಪೈಕಿ 130 ಜಿಲ್ಲೆಗಳು ರೆಡ್ ಜೋನ್ ನಲ್ಲಿವೆ.ರಾಜ್ಯದ‌ ಮೂರು ಜಿಲ್ಲೆಗಳು ರೆಡ್ ಝೋನ್‌ನಲ್ಲಿವೆ. ಸೋಂಕಿನ ತೀವ್ರತೆ ಹೆಚ್ಚಾಗಿರುವ ಜಿಲ್ಲೆಗಳನ್ನು ರೆಡ್ ಜೋನ್ ಗೆ ಸೇರಿಸಿದ್ದು, ಬೆರಳೆಣಿಕೆ ಪ್ರಕರಣಗಳಿರುವ ಜಿಲ್ಲೆಗಳು ಆರೆಂಜ್ ಪಟ್ಟಿಯಲ್ಲಿವೆ.

ಕಳೆದ 15 ದಿನಗಳಿಂದ ಒಂದೂ ಪ್ರಕರಣ ದಾಖಲಾಗದೇ ಇರುವವ ಜಿಲ್ಲೆಗಳನ್ನು ಗ್ರೀನ್ ಜೋನ್​ಗೆ ಸೇರಿಸಲಾಗಿದೆ.

ಈ ಪರಿಷ್ಕೃತ ಪಟ್ಟಿಯಲ್ಲಿ ಉತ್ತರ ಪ್ರದೇಶದಲ್ಲಿ 19 ಜಿಲ್ಲೆಗಳು ರೆಡ್ ಝೋನ್ ನಲ್ಲಿದ್ದು, ಮಹಾರಾಷ್ಟ್ರದಲ್ಲಿ 14 ಹಾಗೂ ದೆಹಲಿಯಲ್ಲಿ 11 ಕೆಂಪು ವಲಯದಲ್ಲಿವೆ.

ಇನ್ನು ದೇಶದ ಬೆಂಗಳೂರು, ಮುಂಬೈ, ಚನ್ನೈ,ಕೋಲ್ಕತ್ತಾ, ಹೈದರಾಬಾದ್, ಅಹ್ಮದಾಬಾದ್ ಸೇರಿದಂತೆ ಇತರೇ ಮೆಟ್ರೋಪಾಲಿಟನ್ ನಗರಗಳು ರೆಡ್ ಜೋನ್ ನಲ್ಲಿವೆ.

ರಾಜ್ಯದ ರೆಡ್ ಜೋನ್ ಜಿಲ್ಲೆಗಳು

ಬೆಂಗಳೂರು
ಬೆಂಗಳೂರು ಗ್ರಾಮಾಂತರ
ಮೈಸೂರು

ಆರೆಂಜ್ ಜೋನ್ ಜಿಲ್ಲೆಗಳು :
ಬೆಳಗಾವಿ
ವಿಜಯಪುರ
ಕಲಬುರ್ಗಿ
ಬಾಗಲಕೋಟೆ                                          
ಮಂಡ್ಯ
ಬಳ್ಳಾರಿ
ಧಾರವಾಡ
ದಕ್ಷಿಣ ಕನ್ನಡ
ಬೀದರ್
ಚಿಕ್ಕಬಳ್ಳಾಪುರ
ಗದಗ
ಉತ್ತರ ಕನ್ನಡ
ತುಮಕೂರು

ಗ್ರೀನ್ ಜೋನ್ ಜಿಲ್ಲೆಗಳು :
ದಾವಣಗೆರೆ
ಉಡುಪಿ
ಚಾಮರಾಜನಗರ
ಚಿಕ್ಕಮಗಳೂರು
ಚಿತ್ರದುರ್ಗ
ಹಾಸನ
ಹಾವೇರಿ
ಕೊಡಗು
ಕೋಲಾರ
ಕೊಪ್ಪಳ
ರಾಯಚೂರು
ಶಿವಮೊಗ್ಗ
ರಾಮನಗರ
ಯಾದಗಿರಿ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ