ಬೆಂಗಳೂರು: ರಾಜ್ಯದ 217 ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ. ಈ ಹೊತ್ತಿನಲ್ಲಿ ಕೇಂದ್ರದ ಬರ ಅಧ್ಯಯನ ತಂಡ ರಾಜ್ಯದಲ್ಲಿ ಬರ ಅಧ್ಯಯನ ನಡೆಸುತ್ತಿದೆ.ಯಾದಗಿರಿ, ಚಿತ್ರದುರ್ಗ, ಹಾಸನ, ರಾಯಚೂರು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯದ ಅಧಿಕಾರಿಗಳು ಬರ ಅಧ್ಯಯನ ನಡೆಸಿದ್ರು. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಹಳ್ಳಿ ಗ್ರಾಮದಲ್ಲಿ ಹತ್ತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳ ಹಾನಿ ಕುರಿತು ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಸಕ್ಕರ, ಹೊಸಕೆರೆ, ಚಳ್ಳಕೆರೆ ತಾಲೂಕಿನ ಚಿಕ್ಕಚಲ್ಲೂರು, ದೊಡ್ಡೇರಿ ಗ್ರಾಮಗಳಲ್ಲಿ ಬೆಳೆ ಪರಿಶೀಲನೆ ನಡೆಸಿದ್ದಾರೆ.
ಹಾಸನದ ಅರಸೀಕೆರೆ ಹಾಗೂ ಹೊಳೆನರಸೀಪುರ ತಾಲೂಕಿನಲ್ಲಿ ಕೇಂದ್ರದ ತಂಡಕ್ಕೆ ಡಿಸಿ ಲತಾಕುಮಾರಿ ಬರ ಪರಿಸ್ಥಿತಿ ವಿವರಿಸಿದ್ರು. ಅದರಂತೆ ರಾಯಚೂರಿನ ದೇವದುರ್ಗದಲ್ಲಿ ಕೇಂದ್ರ ತಂಡ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಬೆಳೆಹಾನಿ ವೀಕ್ಷಿಸಿದ್ರು.
ಇನ್ನೂ ಬರದ ಜೊತೆಗೆ ಬಿಸಿಲಿನ ಅಬ್ಬರ ಜೋರಾಗಿದೆ. ವಾಡಿಕೆಗಿಂತ 2ರಿಂದ 6ರಷ್ಟು ತಾಪಮಾನ ಏರಿಕೆಯಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದಾರೆ. ಹೊರರೋಗಿ ವಿಭಾಗದಲ್ಲಿ ಮಕ್ಕಳು, ವೃದ್ಧರ ಸಂಖ್ಯೆ ಹೆಚ್ಚಾಗಿದೆ.
ನಗರ – ವಾಡಿಕೆ – ಪ್ರಸ್ತುತ – ವ್ಯತ್ಯಾಸ
ಕಾರವಾರ – 31 ಡಿಗ್ರಿ – 34 ಡಿಗ್ರಿ 3.3
ಹೊನ್ನಾವರ – 30 ಡಿಗ್ರಿ – 33 ಡಿಗ್ರಿ 3
ಕಲಬುರಗಿ – 32 ಡಿಗ್ರಿ – 35 ಡಿಗ್ರಿ 3
ಬೀದರ್ – 31 ಡಿಗ್ರಿ – 34 ಡಿಗ್ರಿ 3
ಧಾರವಾಡ – 29 ಡಿಗ್ರಿ – 33 ಡಿಗ್ರಿ 4
ಹಾವೇರಿ – 29 ಡಿಗ್ರಿ – 35 ಡಿಗ್ರಿ 6
ಬೆಂಗಳೂರು – 28 ಡಿಗ್ರಿ – 30 ಡಿಗ್ರಿ 2
ಚಿತ್ರದುರ್ಗ – 39 ಡಿಗ್ರಿ – 33 ಡಿಗ್ರಿ 4
ಮೈಸೂರು – 29 ಡಿಗ್ರಿ – 32 ಡಿಗ್ರಿ 3
Laxmi News 24×7