Breaking News

ಟ್ರೆಂಡ್‌ ಗೀಳಿಗೆ ಬಿದ್ದು ಟ್ರ್ಯಾಪ್‌ ಆಗ್ಬೇಡಿ – 80s ಫೋಟೊ ಟ್ರೆಂಡ್‌ ಬಗ್ಗೆ ಪೊಲೀಸರ ಎಚ್ಚರಿಕೆ!

Spread the love

ನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಟ್ರೆಂಡ್ ಆಗುತ್ತಿರುವ 80ರ ದಶಕದ ಫೋಟೋ ಎಡಿಟಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಾದನಾಯಕನಹಳ್ಳಿ ಪೊಲೀಸರು ಸೂಚಿಸಿದ್ದಾರೆ.

ಫೋಟೋ ಎಡಿಟಿಂಗ್ ಹೆಸರಿನಲ್ಲಿ ಸೈಬರ್ ವಂಚಕರು ಸಾರ್ವಜನಿಕರನ್ನ ವಂಚಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಜನಜಾಗೃತಿ ಮೂಡಿಸಿದ್ದಾರೆ.

80ರ ದಶಕದ ಫೋಟೋಗಳ ಮಾದರಿಯಲ್ಲಿ ತಮ್ಮ ಫೋಟೋಗಳನ್ನ ಎಡಿಟ್ ಮಾಡಿಸಿಕೊಳ್ಳಲು ಸಾರ್ವಜನಿಕರು ವಿವಿಧ ಆ್ಯಪ್‌ಗಳು ಹಾಗೂ ಆನ್‌ಲೈನ್‌ ಲಿಂಕ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ಅಪರಿಚಿತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯುವುದರಿಂದ ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ದಾಖಲೆಗಳ ವಿವರ ಕೇಳಬಹುದು
ಫೋಟೋ ಎಡಿಟಿಂಗ್ ಅಥವಾ ಹೊಸ ಮಾದರಿಯ ಫೋಟೋ ಸೃಷ್ಟಿಸುವ ನೆಪದಲ್ಲಿ ಕೆಲವರು ವೈಯಕ್ತಿಕ ಮಾಹಿತಿ ಹಾಗೂ ದಾಖಲೆಗಳ ವಿವರ ಕೇಳುವ ಸಾಧ್ಯತೆ ಇದೆ. ಪಾಸ್‌ವರ್ಡ್‌, ಬ್ಯಾಂಕ್‌ ಖಾತೆ ಸೇರಿದಂತೆ ಯಾವುದೇ ಸೂಕ್ಷ್ಮ ಮಾಹಿತಿಯನ್ನ ಅಪರಿಚಿತ ವ್ಯಕ್ತಿಗಳು ಅಥವಾ ಆ್ಯಪ್‌ಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ಅಪರಿಚಿತ ಆ್ಯಪ್‌ಗಳನ್ನ ಇನ್‌ಸ್ಟಾಲ್ ಮಾಡದಂತೆ ಹಾಗೂ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಯಾವುದೇ ಆನ್‌ಲೈನ್‌ ಸೇವೆ ಬಳಸುವ ಮುನ್ನ ಅದರ ವಿಶ್ವಾಸಾರ್ಹತೆ ಪರಿಶೀಲಿಸುವಂತೆ ಪೊಲೀಸರು ತಿಳಿವಳಿಕೆ ನೀಡಿದ್ದಾರೆ.

ಸೈಬರ್ ವಂಚಕರ ಹಾವಳಿ ಹೆಚ್ಚಾಗುವ ಸಾಧ್ಯತೆ
ಟ್ರೆಂಡಿಂಗ್ ವಿಷಯಗಳನ್ನು ಬಳಸಿಕೊಂಡು ಸೈಬರ್ ವಂಚಕರು ಜನರನ್ನು ಸೆಳೆಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸಬೇಕು. ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾದನಾಯಕನಹಳ್ಳಿ ಪೊಲೀಸರು ಪ್ರಕಟಣೆ ಹೊರಡಿಸುವ ಮೂಲಕ ಸಾರ್ವಜನಿಕರಲ್ಲಿ ಸೈಬರ್‌ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಟ್ರೆಂಡಿಂಗ್‌ ವಿಷಯ ಕಂಡುಬಂದರೂ ಅದರ ಹಿಂದೆ ಇರುವ ಲಿಂಕ್‌, ಆ್ಯಪ್‌ ಅಥವಾ ವ್ಯಕ್ತಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸದೆ ವೈಯಕ್ತಿಕ ಮಾಹಿತಿಯನ್ನು ನೀಡದಂತೆ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಪರಪುರುಷನೊಂದಿಗೆ ಲವ್ವಿಡವ್ವಿ – ಹಾಸಿಗೆ ಹಿಡಿದ ಪತಿ ಕೊಂದು ಹೃದಯಾಘಾತ ಅಂತ ನಾಟಕವಾಡಿದ್ದ ಹೈನಾತಿ

Spread the loveಬೆಂಗಳೂರು: ಪ್ರೀತಿ ಎಂಬುದು ಮಾಯೆ.. ಈ ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ, ಆದ್ರೆ ಕೆಲವೊಮ್ಮೆ ಪ್ರೀತಿಗೆ ಹೃದಯವೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ