Breaking News

ಕಬ್ಬು ದರ ಸಂಘರ್ಷ| ಸತತ 13 ಗಂಟೆಗಳ ಸಭೆ ಬಳಿಕ ತಾತ್ಕಾಲಿಕ ಸಂಧಾನ – ಅಂತಿಮ ನಿರ್ಧಾರಕ್ಕೆ 2 ದಿನಗಳ ಗಡುವು

Spread the love

ಬೆಳಗಾವಿ: ಕರ್ನಾಟಕದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸತತ 13 ಗಂಟೆಗಳ ಸುದೀರ್ಘ ಸಭೆ ತಾತ್ಕಾಲಿಕವಾಗಿ ಮುಕ್ತಾಯಗೊಂಡಿದೆ. ಸರ್ಕಾರಕ್ಕೆ ಪ್ರೋತ್ಸಾಹ ಧನದ ನೇರ ಹೊರೆಯಿಂದ ಸದ್ಯಕ್ಕೆ ರಿಲೀಫ್ ಸಿಕ್ಕಿದ್ದರೂ, ಅಂತಿಮ ಒಪ್ಪಂದಕ್ಕೆ ಬರಲು ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರು ಎರಡು ದಿನಗಳ ಕಾಲಾವಕಾಶ ಪಡೆದಿದ್ದಾರೆ.

ಸಕ್ಕರೆ ಎಂಎಸ್‌ಪಿ (ಕನಿಷ್ಠ ಮಾರಾಟ ಬೆಲೆ) ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮಧ್ಯಸ್ಥಿಕೆ ಕೋರಲು ಮತ್ತು ದರ ಏರಿಕೆಗೆ ಕೇಂದ್ರದ ಮೇಲೆ ಒತ್ತಡ ಹೇರಲು ಸಭೆಯಲ್ಲಿ ನಿರ್ಧರಿಸಲಾಗಿದೆ. ದರ ನಿಗದಿ ಪ್ರಕ್ರಿಯೆ ಸಂಪೂರ್ಣ ಇತ್ಯರ್ಥವಾಗುವವರೆಗೂ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸದಿರಲು ಮಾಲೀಕರು ಮತ್ತು ರೈತರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.

ಇನ್ನೂ ಎರಡು ದಿನಗಳ ಬಳಿಕ ಬೆಳಗಾವಿಯಲ್ಲಿ ಸರ್ಕಾರದ ಪ್ರತಿನಿಧಿಗಳ ಸಮ್ಮುಖದಲ್ಲಿ ಮತ್ತೊಂದು ಮಹತ್ವದ ನಿರ್ಣಾಯಕ ಸಭೆ ನಡೆಯಲಿದೆ. ಸದ್ಯ ಸಭೆಯ ವಿವರಗಳನ್ನು ರೈತ ಮುಖಂಡರು ಪ್ರತಿಭಟನಾ ನಿರತ ಬೆಳೆಗಾರರಿಗೆ ಮನವರಿಕೆ ಮಾಡಿಕೊಡಲಿದ್ದು, ಎರಡು ದಿನಗಳ ಬಳಿಕ ಬೆಳಗಾವಿಯಲ್ಲಿ ನಡೆಯಲಿರುವ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಮಾಲೀಕರು ಹೇಳಿದ್ದೇನು?
ಸಕ್ಕರೆ ಮಾರಾಟ ದರ ಪ್ರತಿ ಕೆಜಿಗೆ 45 ರೂ. ನಿಗದಿಯಾದರೆ ಪ್ರತಿ ಟನ್ ಕಬ್ಬಿಗೆ 3,500 ರೂ. ನೀಡಲು ಒಪ್ಪಿಗೆ. ಸಕ್ಕರೆ ದರ 48 ರೂ. ತಲುಪಿದರೆ ಪ್ರತಿ ಟನ್‌ಗೆ 3,800 ರೂ ನೀಡಲು ಸಮ್ಮತಿ ನೀಡಿದ್ದಾರೆ.

ರೈತರ ಬೇಡಿಕೆ ಏನು?
ಸಕ್ಕರೆ ದರವನ್ನು ಪ್ರತಿ ಕೆಜಿಗೆ 50 ರೂ.ಗೆ ಹೆಚ್ಚಿಸಿ, ತಮಗೆ ಪ್ರತಿ ಟನ್‌ಗೆ 4,000 ರೂ. (1,000 ರೂ. ಪ್ರೋತ್ಸಾಹ ಧನ ಸೇರಿ) ನಿಗದಿಪಡಿಸಲೇಬೇಕು ಎಂದು ರೈತ ಮುಖಂಡರು ಪಟ್ಟು ಹಿಡಿದಿದ್ದಾರೆ.

ಸುಖಾಂತ್ಯ ಕಂಡಿಲ್ಲ
ಸಿಎಂ ಡಿಕೆ ಶಿವಕುಮಾರ್‌ ಜೊತೆಗಿನ ಸಭೆಯ ಬಳಿಕ ಮಾತನಾಡಿದ ರೈತ ಮುಖಂಡ ಚೂನಪ್ಪ ಪೂಜೇರಿ, “ದರ ನಿಗದಿಗೆ ಮಾಲೀಕರು ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ. ಕಾರ್ಖಾನೆಯವರು 3,500 ರೂ. ನೀಡಲು ಮುಂದೆ ಬಂದಿದ್ದರೂ, ನಮಗೆ 4,000 ರೂ. ಸಿಗುವವರೆಗೂ ನಾವು ಹಿಂದೆ ಸರಿಯುವುದಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಕ್ಷಣ ಸಭೆ ಕರೆದು ಸಕ್ಕರೆ ದರ ಕೆಜಿಗೆ 50 ರೂ. ಮಾಡುವ ಬಗ್ಗೆ ಸ್ಪಷ್ಟತೆ ನೀಡಬೇಕು. ಅಲ್ಲಿಯವರೆಗೂ ಗುರ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ. ಇಡೀ ದಿನ ಸಿಎಂ ಅವರು ಸಮಯ ಕೊಟ್ಟಿದ್ದಕ್ಕೆ ಧನ್ಯವಾದ ಹೇಳುತ್ತೇವೆ” ಎಂದಿದ್ದಾರೆ.


Spread the love

About Laxminews 24x7

Check Also

ಪ್ರಿಯತಮೆ ದೂರವಾದ್ಲು ಅಂತಾ ರೊಚ್ಚಿಗೆದ್ದ ಪಾಗಲ್ ಪ್ರೇಮಿ – ಲವರ್ ಬಾವನ ಬೈಕ್‌ಗೆ ಬೆಂಕಿ ಹಚ್ಚಿ ವಿಕೃತಿ!

Spread the loveಬೆಂಗಳೂರು: ಸೋಷಿಯಲ್ ಮಿಡೀಯಾದಲ್ಲಿ ಶುರುವಾದ ಪರಿಚಯ ಪ್ರೀತಿಗೆ ತಿರುಗಿತ್ತು. ಆದರೆ ಆ ಪ್ರೀತಿಗೆ ಹೆಚ್ಚು ದಿನ ಬಾಳಲಿಲ್ಲ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ