Breaking News

ರಾಜ್ಯದಲ್ಲಿ ಬರ ಘೋಷಿಸಿ, 10 ಸಾವಿರ ಕೋಟಿ ಪ್ಯಾಕೇಜ್ ನೀಡಿ: ರವಿಕುಮಾರ್ ಆಗ್ರಹ

Spread the love

ಬೆಂಗಳೂರು: ರಾಜ್ಯ ಸರ್ಕಾರ ಕೂಡಲೇ ಬರ ಘೋಷಣೆ ಮಾಡಬೇಕು. 10 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್ ಸರ್ಕಾರವನ್ನ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಮುಂಗಾರು ಮಳೆ ಕಳೆದುಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ದನಕರುಗಳಿಗೆ ಕುಡಿಯಲು ನೀರಿಲ್ಲ. ರೈತರು ಕಂಗಾಲಾಗಿ ಗುಳೆ ಹೋಗುತ್ತಿದ್ದಾರೆ. ರೈತರ ಪರವಾಗಿ ಒಂದು ನಿರ್ಧಾರ ಮಾಡಿಲ್ಲ ಈ ಸರ್ಕಾರ. ಕರ್ನಾಟಕ ರಾಜ್ಯದಲ್ಲಿ ಬರ ಇದೆ ಅಂತ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಯಾಕೆ ಬರ ಘೋಷಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಬರ ಇದೆ ಅಂತ ಸಿಎಂ ಹಾಗೂ ಸಚಿವರೆಲ್ಲ ಹೇಳುತ್ತಿದ್ದಾರೆ. ಆದರೆ ಘೋಷಣೆ ಯಾಕಿಲ್ಲ? ಕೂಡಲೇ ಬರಕ್ಕೆ ತುತ್ತಾಗಿರುವ ರಾಜ್ಯ ಅಂತ ಘೋಷಣೆ ಮಾಡಬೇಕು. ಎಕರೆಗೆ ರೈತರಿಗೆ 50 ಸಾವಿರ ರೂ. ಕೊಡಬೇಕು. ರೈತರು ಮೂರು ಸಾರಿ ಬಿತ್ತನೆ ಮಾಡಿದ್ದಾರೆ. ಅವರ ಗೊಬ್ಬರ ಕೂಲಿ ಹಾಗೂ ಬಿತ್ತನೆ ಖರ್ಚು ಏನು? ಎರಡೂವರೆ ತಿಂಗಳು ರೈತರು ಕಂಗಾಲಾಗಿದ್ದಾರೆ. ಆದರಿಂದ ರೈತನಿಗೆ 50 ಸಾವಿರ ಕೊಡಬೇಕು. ರಾಜ್ಯದಾದ್ಯಂತ ಇರುವ ರೈತರಿಗಾಗಿ 10 ಸಾವಿರ ಕೋಟಿ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ