Breaking News

ಮೂವರು ಸೋಂಕಿತರಿಗೆ   ಶೀತ, ಕೆಮ್ಮು ಜ್ವರದಂತಹ ಲಕ್ಷಣ ಇಲ್ಲದಿದ್ರು ಸಹ ವರದಿ ಪಾಸಿಟಿವ್:

Spread the love

ಬೆಳಗಾವಿ:  ಬೆಳಗಾವಿಯಲ್ಲಿ ನಿನ್ನೆ ಮೂವರಿಗೆ  ಕೊರೊನಾ ಸೋಂಕು ತಗಲಿರುವುದು ದೃಢವಾಗಿದ್ದು, ಆ ಮೂಲಕ ಸೋಂಕಿತರ  ಸಂಖ್ಯೆ 10 ಕ್ಕೆ ಏರಿಕೆಯಾಗಿದೆ.  ನಿನ್ನೆ ಕಂಡು ಬಂದ ಮೂವರು ಸೋಂಕಿತರಿಗೆ   ಶೀತ, ಕೆಮ್ಮು ಜ್ವರದಂತಹ ಲಕ್ಷಣ ಇಲ್ಲದಿದ್ರು ಸಹ ವರದಿ ಪಾಸಿಟಿವ್ ಬಂದಿದ್ದು,  ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ತಲೆ ಬಿಸಿಯಾಗಿದೆ.

ಕೇಸ್ ನಂಬರ್ 128ಕ್ಕೆ ಮಾತ್ರ ಕೊರೊನಾ ಸೋಂಕಿನ ಲಕ್ಷಣ ಇತ್ತು. ಆದ್ರೆ ಹೊಸದಾಗಿ ಪತ್ತೆಯಾದ ಪ್ರಕರಣಗಳಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಪತ್ತೆಯಾಗಿಲ್ಲ. ಜೊತೆಗೆ ತಂದೆ, ತಾಯಿ, ಸಹೋದರನಿಗೂ ಕೊರೊನಾ ಸೋಂಕು ಲಕ್ಷಣ ಇಲ್ಲದಿದ್ರೂ ಸೋಂಕು ಪತ್ತೆಯಾಗಿದ್ದು ಹೇಗೆ ಅಂತ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಆಶ್ಚರ್ಯವಾಗಿದೆ.

ಕೊರೊನಾ ಸೋಂಕಿತರಿಗಿರುವ ಅರ್ಧದಷ್ಟು ಲಕ್ಷಣಗಳು ಈ ಹೊಸಬರಿಗೆ ಕಾಣುತ್ತಿರಲಿಲ್ಲ. ಆದರೂ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಹೇಗೆ ಎಂದು ಆರೋಗ್ಯ ಇಲಾಖೆ ಚಿಂತೆಯಲ್ಲಿದೆ.

 ಹೊಸದಾಗಿ ಪತ್ತೆಯಾದ ಮೂರು ಪ್ರಕರಣ ಕುರಿತು ಪ್ರಾಥಮಿಕ, ಮಾಧ್ಯಮಿಕ ಸಂಪರ್ಕದಲ್ಲಿದ್ದವರ‌ ಮಾಹಿತಿ, ಟ್ರಾಕ್ ಹಿಸ್ಟರಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ