Breaking News

ನಟ, ನಿರ್ದೇಶಕ ಓಂಪ್ರಕಾಶ್ ರಾವ್ ವಿರುದ್ಧ 3.85 ಕೋಟಿ ವಂಚನೆ ಆರೋಪ – ದೂರು ದಾಖಲು

Spread the love

ಬೆಂಗಳೂರು: ಖ್ಯಾತ ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ ವಿರುದ್ಧ ವಂಚನೆ, ಕಿರುಕುಳ ಹಾಗೂ ಬೆದರಿಕೆ ಆರೋಪದಡಿ ದೂರು ದಾಖಲಾಗಿದೆ.

ʻಫೀನಿಕ್ಸ್’ ಸಿನಿಮಾ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಒಟ್ಟು 3 ಕೋಟಿ 85 ಲಕ್ಷ ಹಣ ಪಡೆದು, ಹಣ ವಾಪಸ್ ನೀಡದೇ ವಂಚಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ವಾಸುದೇವರೆಡ್ಡಿ, ಭಾಸ್ಕರ್ ಶೆಟ್ಟಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಅನ್ವಯ, ʻಫೀನಿಕ್ಸ್’ ಸಿನಿಮಾ ನಿರ್ಮಾಣದ ಉದ್ದೇಶಕ್ಕಾಗಿ ಆರೋಪಿಗಳು ದೂರುದಾರರಿಂದ ಹಂತ-ಹಂತವಾಗಿ ಹಣ ಪಡೆದಿದ್ದಾರೆ. ಬಳಿಕ ಹಣವನ್ನ ವಾಪಸ್ ನೀಡದೇ ಮೋಸ ಮಾಡಿದ್ದಾರೆ. ಹಣ ವಾಪಸ್ ಕೇಳಲು ಮನೆಗೆ ತೆರಳಿದ್ದ ಸಂದರ್ಭದಲ್ಲಿ ದೂರುದಾರರಿಗೆ ಬೆದರಿಕೆ ಕೂಡ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಈ ಪ್ರಕರಣದಲ್ಲಿ ಓಂಪ್ರಕಾಶ್ ರಾವ್ ಅವರ ಪತ್ನಿ ಡೆನ್ನಿಸಾ ಪ್ರಕಾಶ್ ಅವರ ವಿರುದ್ಧವೂ ದೂರು ನೀಡಲಾಗಿದೆ.


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ