Breaking News

ಶಾಲಾ ಮಕ್ಕಳಿಗೆ ಉಪಾಹಾರ ಯೋಜನೆ ವಿಸ್ತರಿಸಿದ ಸಿಎಂ ವಿಜಯ್‌

Spread the love

ಚೆನ್ನೈ: ಶಾಲಾ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ಬೆಳಗಿನ ಉಪಾಹಾರ (ಬ್ರೇಕ್‌ಫಾಸ್ಟ್) ಯೋಜನೆಯನ್ನು 6ರಿಂದ 8ನೇ ತರಗತಿ ವರೆಗೆ ತಮಿಳುನಾಡು ) ಸರ್ಕಾರ ವಿಸ್ತರಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಮಂಗಳವಾರ ಚೆನ್ನೈನ ತಿರುವನ್ಮಿಯೂರ್‌ನ ಗಾಂಧಿ ಗ್ರಾಮದಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ವಿಸ್ತರಿತ ‘ಪೆರುಂತಲೈವರ್ ಕಾಮರಾಜರ್ ಉಚಿತ ಉಪಹಾರ ಯೋಜನೆ’ಗೆ  ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಉಪಾಹಾರ ಬಡಿಸಿದ ಸಿಎಂ ವಿಜಯ್‌, ಬಳಿಕ ಮಕ್ಕಳ ಜೊತೆ ತಾವೂ ಕುಳಿತು ಪೊಂಗಲ್‌ ಸವಿದರು.

6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೂ ಉಪಾಹಾರ ಯೋಜನೆ ವಿಸ್ತರಣೆ ಮಾಡಲಾಗಿದೆ. ಇದರಿಂದ 15.30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. 15,454 ಸರ್ಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಯೋಜನೆ ಅನ್ವಯವಾಗಲಿದೆ.

ಯೋಜನೆ ವಿಸ್ತರಣೆಗೆ 217.63 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲಾಗಿದೆ. ಉಪಾಹಾರ ಯೋಜನೆಗೆ ಒಟ್ಟು 724 ಕೋಟಿ ಅನುದಾನ ಮೀಸಲಿಡಲಾಗಿದೆ. ವಿದ್ಯಾರ್ಥಿಗಳ ಪೌಷ್ಠಿಕತೆ ಸುಧಾರಿಸುವುದು ಯೋಜನೆಯ ಉದ್ದೇಶವಾಗಿದೆ. ಉಪಾಹಾರ ಯೋಜನೆ ಉದ್ಘಾಟನೆ ಬಳಿಕ ತರಗತಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ವಿಜಯ್ ಸಂವಾದ ನಡೆಸಿದರು.

ಚೆಂಗಲ್‌ಪಟ್ಟು ಮತ್ತು ತಿರುಪ್ಪೂರ್ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯಾದ್ಯಂತ ವಿಸ್ತೃತ ಕಾರ್ಯಕ್ರಮದ ಅನುಷ್ಠಾನವು ಮಂಗಳವಾರದಿಂದ ಆರಂಭವಾಗಲಿದೆ. ಈ ಎರಡು ಜಿಲ್ಲೆಗಳಲ್ಲಿ ಮುಂಬರುವ ವಿಧಾನಸಭಾ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯಿಂದಾಗಿ ಅನುಷ್ಠಾನವನ್ನು ಮುಂದೂಡಲಾಗಿದೆ.

ಹಿಂದೆ ಇದನ್ನು ‘ಮುಖ್ಯಮಂತ್ರಿಯವರ ಉಪಹಾರ ಯೋಜನೆ’ ಎಂದು ಕರೆಯಲಾಗಿತ್ತು. ಈ ಯೋಜನೆಯನ್ನು ಶಾಲಾ ಶಿಕ್ಷಣದ ವ್ಯಾಪ್ತಿಯಲ್ಲಿ ವಿಸ್ತರಿಸುವಲ್ಲಿ ಹಾಗೂ ರಾಜ್ಯದ ಶಾಲಾ ಮಧ್ಯಾಹ್ನದ ಊಟದ ಕಾರ್ಯಕ್ರಮಗಳನ್ನು ಬಲಪಡಿಸುವಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ.ಕಾಮರಾಜ್ ಮಹತ್ವದ ಪಾತ್ರ ವಹಿಸಿದ್ದು. ಅವರ ಗೌರವಾರ್ಥವಾಗಿ ‘ಪೆರುಂತಲೈವರ್ ಕಾಮರಾಜರ್ ಉಚಿತ ಉಪಾಹಾರ ಯೋಜನೆ’ ಎಂದು ಮರುನಾಮಕರಣ ಮಾಡಲಾಗಿದೆ.


Spread the love

About Laxminews 24x7

Check Also

ಲೇಡಿ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ – ಕ್ಷಮೆಯಾಚಿಸಿದ ಶಾಸಕ ಸುರೇಶ್‌ಗೌಡ ಪುತ್ರಿ

Spread the loveಮಂಡ್ಯ: ಲೇಡಿ ಪಿಎಸ್‌ಐಗೆ  ಕಪಾಳಮೋಕ್ಷ ಪ್ರಕರಣ ಸಂಬಂಧ ಶಾಸಕ ಸುರೇಶ್‌ಗೌಡ  ಪುತ್ರಿ ಐಶ್ವರ್ಯ ಪಿಎಸ್‌ಐ ಸವಿತಾ ಪಾಟೀಲ್‌ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ