Breaking News
Home / ಜಿಲ್ಲೆ / ಚಾಮರಾಜ ನಗರ / “ಬಡ ಕುಟುಂಬಗಳಿಗೆ ಮಾದಪ್ಪನ ದಾಸೋಹದಿಂದ ಅಕ್ಕಿ, ಮಾಸ್ಕ್ ವಿತರಣೆ”

“ಬಡ ಕುಟುಂಬಗಳಿಗೆ ಮಾದಪ್ಪನ ದಾಸೋಹದಿಂದ ಅಕ್ಕಿ, ಮಾಸ್ಕ್ ವಿತರಣೆ”

Spread the love

ಚಾಮರಾಜನಗರ: ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಮಹದೇಶ್ವರಬೆಟ್ಟದ ವ್ಯಾಪ್ತಿಯ ಬಡ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪಡಿತರ ವಿತರಣೆ ಮಾಡಿದರು.

ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ದಾಸೋಹ ನಡೆಯದ ಕಾರಣ ಅಲ್ಲಿ ದಾಸ್ತಾನು ಆಗಿರುವ ಸುಮಾರು 89 ಟನ್ ಅಕ್ಕಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಲಹೆಯಂತೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಸುಮಾರು 6,500 ಬಡ ಕುಟುಂಬಗಳಿಗೆ ತಲಾ 5 ಕೆ.ಜಿ.ಅಕ್ಕಿಯನ್ನು ಸಚಿವ ಎಸ್.ಸುರೇಶ್ ಕುಮಾರ್ ವಿತರಿಸಿದರು.

ಲಾಕ್‍ಡೌನ್ ನಿಂದ ಕೆಲಸವಿಲ್ಲದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಜನರಿಗೆ ಅನುಕೂಲವಾಗಲೆಂದು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಗೋಪಿನಾಥಂ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಹಾಗೂ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಸುಮಾರು 6,500 ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ಮಾಸ್ಕ್ ವಿತರಿಸಿದ್ದಾರೆ. ಈ ಮೂಲಕ ಬಡ ಜನತೆಗೆ ನೆರವಾಗಿದ್ದಾರೆ.


Spread the love

About Laxminews 24x7

Check Also

ಕಾವೇರಿ’ದ ಬಂದ್: ಸ್ಯಾಂಡಲ್​ವುಡ್​ ನಟ-ನಟಿಯರಿಂದ ಪ್ರತಿಭಟನೆ.

Spread the love ಬೆಂಗಳೂರು: ರಾಜ್ಯದೆಲ್ಲೆಡೆ ವಿವಿಧ ಸಂಘಟನೆಗಳಿಂದ ಕಾವೇರಿ ನೀರಿಗಾಗಿ ನಡೆಯುತ್ತಿರುವ ಬಂದ್​ಗೆ ಚಿತ್ರರಂಗ ಕೂಡ ಬೆಂಬಲ ನೀಡಿದೆ. ಕಾವೇರಿಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ