Breaking News

ಚೀಟಿ ವ್ಯವಹಾರದಲ್ಲಿ ವಂಚನೆ; ಕೇಸ್‌ನಿಂದ ಕೈಬಿಡಲು 5 ಲಕ್ಷಕ್ಕೆ ಡೀಲ್ ಮಾಡಿದ್ದ ಇನ್‌ಸ್ಪೆಕ್ಟರ್ ‘ಲೋಕಾ’ ಬಲೆಗೆ

Spread the love

ಬೆಂಗಳೂರು: ಪ್ರಕರಣವೊಂದರಿಂದ ಕೈಬಿಡಲು 5 ಲಕ್ಷಕ್ಕೆ ಬೇಡಿಕೆಯಿಟ್ಟು, ಹಣ ಪಡೆಯುವಾಗ ಕೆ.ಪಿ. ಅಗ್ರಹಾರ ಠಾಣೆ  ಇನ್‌ಸ್ಪೆಕ್ಟರ್‌ವೊಬ್ಬರು ಲೋಕಾಯುಕ್ತ  ಬಲೆಗೆ ಬಿದ್ದಿದ್ದಾರೆ.

ಇನ್‌ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್‌ಗೆ ಒಳಗಾದವರು. ಟ್ರ್ಯಾಪ್‌ಗೂ ಮುನ್ನ ಆರೋಪಿಗಳ ಬಂಧನಕ್ಕೆ ತೆರಳಿದ್ದ ಇನ್ಸ್ಪೆಕ್ಟರ್, ಚೀಟಿ ವ್ಯವಹಾರದಲ್ಲಿ ವಂಚನೆ ಸಂಬಂಧ ಬಂಧನ ಕಾರ್ಯಾಚರಣೆ ನಡೆಸಿದ್ದರು. ಪ್ಲಾಟ್‌ನಲ್ಲಿ ಆರೋಪಿಗಳು ಪ್ರತಿರೋಧ ತೋರಿದ್ದರು. ಪೊಲೀಸರು ಮನೆಗೆ ಬರುವ ಸಿಸಿಟಿವಿ ಹಾಗೂ ವೀಡಿಯೋ ಮಾಡಿದ್ದರು. ‘ನೋಟಿಸ್ ಕೊಡದೇ ಬಂದಿದ್ದೀರಾ, ನಾವು ಲಾಯರ್ ಬಳಿ ಮಾತನಾಡುತ್ತೇವೆ’ ಎಂದು ಆರೋಪಿಗಳು ಪಟ್ಟುಹಿಡಿದಿದ್ದರು. ಪೊಲೀಸರು ಬಳಿಕ ಹೊಯ್ಸಳ ಕರೆಯಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದರು.

ಸ್ಟೇಷನ್‌ಗೆ ಹೋದ ಮೇಲೆ ಡೀಲ್ ಮಾಡಿದ್ದರು. ಕೇಸ್‌ನಿಂದ ಕೈ ಬಿಡಲು ಐದು ಲಕ್ಷ ನೀಡುವಂತೆ ಹೇಳಿದ್ದರು. ಮೊದಲು ಒಂದು ಲಕ್ಷ ಹಣ ತರಿಸಿಕೊಂಡಿದ್ದರು. ನಂತರ ನಾಲ್ಕು ಲಕ್ಷ ಹಣ ತರುವಂತೆ ಸೂಚನೆ ನೀಡಿದ್ದರು. ನಾಲ್ಕು ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಇನ್ಸ್ಪೆಕ್ಟರ್ ಬಿದ್ದಿದ್ದಾರೆ. ಮೈಸೂರು ರಸ್ತೆ ಸಿಎಆರ್ ಗ್ರೌಂಡ್ ಬಳಿ ಇನ್‌ಸ್ಪೆಕ್ಟರ್ ಟ್ರ‍್ಯಾಪ್ ಆಗಿದ್ದಾರೆ.

ಇನ್‌ಸ್ಪೆಕ್ಟರ್ ಗೋವಿಂದರಾಜು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರ ಬಂಧನ ಕಾರ್ಯಾಚರಣೆಯ ಸಿಸಿಟಿವಿ ವಿಡಿಯೋ, ಮೊಬೈಲ್ ದೃಶ್ಯಾವಳಿ ಲಭ್ಯವಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ