Breaking News

ಕೇಂದ್ರದಿಂದ 50,000 ರೂ. ಬರ ಪರಿಹಾರ ಕೊಡಬೇಕು – ಎಂಎಲ್‌ಸಿ ಶಿವಕುಮಾರ್‌ ಆಗ್ರಹ

Spread the love

ಬೆಂಗಳೂರು: ಬರದಿಂದ ಕೃಷಿ, ಕೂಲಿ ಮಾಡೋರಿಗೆ ಸಮಸ್ಯೆ ಆಗಿದೆ. ಕಬ್ಬು ಬೆಳೆ ಇಳುವರಿ ಕಡಿಮೆ ಆಗಿದ್ದು, ಅದಕ್ಕೆ ಪರಿಹಾರ ಕೊಡಬೇಕು. ಎನ್‌ಡಿಆರ್‌ಎಫ್‌ ನಿಯಮದಲ್ಲಿ ಬದಲಾವಣೆ ಮಾಡಬೇಕು. ಕೇಂದ್ರ ಸರ್ಕಾರದಿಂದ 50 ಸಾವಿರ ರೂ. ಬರ ಪರಿಹಾರ ಕೊಡಬೇಕು ಎಂದು ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಶಿವಕುಮಾರ್‌ ಒತ್ತಾಯಿಸಿದರು.

ವಿಧಾನ ಪರಿಷತ್‌ನಲ್ಲಿ ಇಂದು ಚರ್ಚೆ ನಡೆಸಿದ ಕಾಂಗ್ರೆಸ್‌ ಸದಸ್ಯ ಶಿವಕುಮಾರ್, ಬರ ಪರಿಸ್ಥಿತಿ ವೇಳೆ ರಾ‌ಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸಿದರು. ಜೊತೆಗೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದರು. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಬಂದಿದೆ. ರೈತರು ಕೆಟ್ಟ ಪರಿಸ್ಥಿತಿಗೆ ಸಿಲುಕಿದ್ದಾರೆ. ಕರ್ನಾಟಕದ ರೈತರು ಸಮಸ್ಯೆ ಸಿಲುಕಿದ್ದಾರೆ. ಕೇಂದ್ರ ಎನ್‌ಡಿಆರ್‌ಎಫ್‌ ಈ ನಿಯಮವನ್ನ ಪರಿಷ್ಕರಣೆ ಮಾಡಬೇಕು. ಉಪಗ್ರಹ ಆಧರಿತ ವೆರಿಫಿಕೇಶನ್ ಪರಿಗಣಿಸಬಾರದು. ಹೀಗಾಗಿ ಫೀಲ್ಡ್ ವಿಸಿಟ್ ಮಾಡಿ ವರದಿ ಪಡೆಯಬೇಕು ಎಂದು ಮನವಿ ಮಾಡಿದ್ರು.

ರಾಜ್ಯದಲ್ಲಿ ಕುಡಿಯೋ ನೀರಿಗೂ ಸಮಸ್ಯೆ ಆಗಿದೆ. ಟ್ಯಾಂಕರ್ ನಲ್ಲಿ ನೀರು ಕೊಡೋ ಸ್ಥಿತಿ ಬಂದಿದೆ. ಕೋರ್ಟ್‌ ಸೂಚನೆ ಅಂತ ತಮಿಳುನಾಡಿಗೆ ಕೇಳಿದ ಹಾಗೆ ನಾವು ನೀರು ಬಿಟ್ಟಿದ್ದೇವೆ. ಸಮಸ್ಯೆ ಹೀಗೆ ಆದ್ರೆ ನಮಗೂ ನೀರು ಸಿಗಲ್ಲ, ರೈತರಿಗೆ ಸಹಾಯ ಮಾಡಬೇಕು. ಆದ್ದರಿಂದ ವಿಬಿಜಿ ರಾಮ್ ಜಿ ಅಡಿ ಕೆಲಸ ಡಬಲ್ ಮಾಡಲು ಕೇಂದ್ರಕ್ಕೆ ಮನವಿ ಮಾಡಬೇಕು ಎಂದು ತಿಳಿಸಿದರು.

ದಿಢೀರ್ ಉತ್ತರ ಕೊಡಿ ಅಂದ್ರೆ ಆಗಲ್ಲ: ಯತೀಂದ್ರ
ಸಿಎಂ ಮಾತನಾಡಿದ ಬಳಿಕ ಆರ್ಥಿಕ ಇಲಾಖೆ ಪತ್ರದ ವಿಚಾರ ಚರ್ಚೆಗೆ ಬಿಜೆಪಿ ಸದಸ್ಯರು ಆಗ್ರಹಿಸಿದರು. ವಿಪಕ್ಷಗಳ ಆಗ್ರಹಕ್ಕೆ ಸಭಾ ನಾಯಕ ಯತೀಂದ್ರ ಪ್ರತಿಕ್ರಿಯೆ ನೀಡಿದರು. ಸಿಎಂ ಗಮನಕ್ಕೆ ವಿಚಾರ ತರುತ್ತೇವೆ. ಅವರಿಂದ ಉತ್ತರ ಕೊಡಿಸುತ್ತೇವೆ. ಅವರು ಬಂದ ಬಳಿಕ ಉತ್ತರ ಕೊಡಿಸೋಣ. ಈಗ ವಿಷಯ ಬೇರೆಯದ್ದಕ್ಕೆ ಸದನ ಕರೆದಿದ್ದೇವೆ. ಹೀಗೆ ದಿಢೀರ್ ಅಂತ ಉತ್ತರ ಕೊಡಿ ಅಂದ್ರೆ ಆಗಲ್ಲ. ಸಿಎಂ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

ಯತೀಂದ್ರ ಮಾತಿಗೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇನ್ನೊಂದೇ ದಿನ ಸದನ ಇರೋದು, ಆ ನಡುವೆಯೇ ಸಿಎಂ ಉತ್ತರ ಕೊಡಬೇಕು. ಅವರು ಬಂದು ಉತ್ತರ ಕೊಡುವಷ್ಟರಲ್ಲಿ ಸದನ ಮುಗಿದು ಹೋದ್ರೆ ಹೇಗೆ ಎಂದು ಪ್ರಶ್ನೆ ಮಾಡಿದರು. ವಿಪಕ್ಷದ ಮಾತಿಗೆ ಆಡಳಿತ ಪಕ್ಷದ ಸದಸ್ಯರ ಆಕ್ಷೇಪ ವ್ಯಕ್ತವಾಯಿತು.

50,000 ರೂ. ಬರ ಪರಿಹಾರಕ್ಕೆ ಆಗ್ರಹ
ಬರದಿಂದ ಕೃಷಿ ಕೂಲಿ ಮಾಡೋರಿಗೆ ಸಮಸ್ಯೆ ಆಗಿದೆ. ಹೀಗಾಗಿ ಎಸ್‌.ಎಂ ಕೃಷ್ಣ ಅವರು ಸಿಎಂ ಆಗಿದ್ದಾಗ 10 ಸಾವಿರ ಪರಿಹಾರ ನೀಡಿದ್ದರು. ಅದೇ ರೀತಿ ಲ್ಯಾಡ್ ಲೆಸ್ ಲೇಬರ್ ಗಳಿಗೆ (ಕೃಷಿ ಕೂಲಿ ಮಾಡೋರಿಗೆ) 20 ಸಾವಿರ ಸಹಾಯ ಧನ ಸರ್ಕಾರ ನೀಡಬೇಕು. ಕಬ್ಬು ಬೆಳೆ ಇಳುವರಿ ಕಡಿಮೆ ಆಗಿದೆ. ಅದಕ್ಕೆ ಪರಿಹಾರ ಕೊಡಬೇಕು. ಎನ್‌ಡಿಆರ್‌ಎಫ್‌ ನಿಯಮ ಬದಲಾವಣೆ ಮಾಡಬೇಕು. ಕೇಂದ್ರ ಸರ್ಕಾರದಿಂದ 50 ಸಾವಿರ ಪರಿಹಾರ ಬರಕ್ಕೆ ಕೊಡಬೇಕು. ಮೋದಿ ಬಂದ ಮೇಲೆ 1 ಮೂಟೆಗೆ 1,000 ರೂ. ಯೂರಿಯಾ ಬೆಲೆ ಜಾಸ್ತಿ ಆಗಿದೆ. ಕಿಸಾನ್ ಸಮ್ಮಾನ್ ಯೋಜನೆ ಅಡಿ ಕೊಡ್ತಾ ಇರೋ 6 ಸಾವಿರ ಸಾಕಾಗ್ತಿಲ್ಲ. ನಮ್ಮಿಂದ ತೆರಿಗೆ ಜಾಸ್ತಿ ಹೋಗ್ತಿದೆ. ನಮಗೆ ಜಾಸ್ತಿ ಪರಿಹಾರ ಕೊಡಬೇಕು. 2014 ರಿಂದ ಇಲ್ಲಿವರೆಗೂ ಕೇಂದ್ರ ಸರ್ಕಾರ ನಾವು ಕೇಳಿದಷ್ಟು ಪರಿಹಾರ ಎನ್‌ಡಿಆರ್‌ಎಫ್‌ ನಿಂದ ಕೊಟ್ಟೇ ಇಲ್ಲ. ಕರ್ನಾಟಕಕ್ಕೆ 2 ವರ್ಷ ಬಿಟ್ಟರೆ ಬೇರೆ ಸಮಯದಲ್ಲಿ ಎನ್‌ಡಿಆರ್‌ಎಫ್‌ ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತಾರತಮ್ಯ ಮಾಡ್ತಿದೆ. ಗುಜರಾತ್ ಗೆ ಅಡ್ವಾನ್ಸ್ ಹಣ ಕೊಡ್ತಾರೆ. ಅದೇ ರೀತಿ ಕರ್ನಾಟಕಕ್ಕೂ ಅಡ್ವಾನ್ಸ್ ಹಣ ಕೊಡಬೇಕು. ಅಲ್ಲದೇ ರಾಜ್ಯದ ಹತ್ತಿ ಬೆಳೆಗಾರರು ಸಂಕಷ್ಟಕ್ಕೆ ಸುಲುಕಿದ್ದಾರೆ, ಅವರಿಗೆ ಸಹಾಯ ನೀಡಬೇಕು. ಅನುಗ್ರಹ ಯೋಜನೆ ಅಡಿ ಹಸು, ಕುರಿ, ಮೇಕೆ ಸತ್ತರೆ ಬಿಡುಗಡೆ ಆಗಬೇಕಿದ್ದ ಅನುದಾನ 1 ವರ್ಷಗಳಿಂದ ಬಿಡುಗಡೆ ಮಾಡಿಲ್ಲ. ಕೂಡಲೇ ಅನುಗ್ರಹ ಅನುದಾನ ಬಿಡುಗಡೆ ಮಾಡಬೇಕು. ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಸಹಕಾರ ಕೊಡಬೇಕು ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ಹೈಕೋರ್ಟ್‌ನ ಎಸ್‌ಐಟಿ ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾದ ಸರ್ಕಾರ

Spread the loveಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ  ರಚಿಸಿ ಧಾರವಾಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ