Breaking News

15 ದಿನದ ಹಿಂದಷ್ಟೇ ಉದ್ಘಾಟನೆಯಾದ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ

Spread the love

ಬೆಂಗಳೂರು: ಕಳೆದ 15 ದಿನದ ಹಿಂದಷ್ಟೇ ಉದ್ಘಾಟನೆಯಾದ ಬೆಂಗಳೂರಿನ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ ಆಗ್ತಿದೆ.

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಎಸ್.ಎಂ ಕೃಷ್ಣ ದಶಪಥ ಹೆದ್ದಾರಿಯಲ್ಲಿ ಸವಾರರ ಒನ್ ವೇ ಸಂಚಾರ ಪ್ರಾಣಕ್ಕೆ ಕಂಟಕವಾಗ್ತಿದೆ. ಕಡಬಗೆರೆ ಟು ಚಲ್ಲಘಟ್ಟ ಸಂಪರ್ಕಿಸುವ 11 ಕಿ.ಮೀ ಉದ್ದದ ರಸ್ತೆಯ ಎಂಟ್ರಿ-ಎಕ್ಸಿಟ್‌ಗಳಲ್ಲಿ ನಿಯಮಬಾಹಿರವಾಗಿ ಸವಾರರು ಒನ್ ವೇ ಸಂಚಾರ ಮಾಡ್ತಿದ್ದಾರೆ. ಸರ್ವೀಸ್ ರಸ್ತೆಗಳಿಗೆ ತೆರಳುವ ಭರದಲ್ಲಿ ನೇರವಾಗಿ ಹೆದ್ದಾರಿಯಲ್ಲಿ ಒನ್ ವೇನಲ್ಲಿ ಸಂಚಾರ ಮಾಡ್ತಿದ್ದಾರೆ. ಇದರಿಂದ ನಿಯಮ ಪಾಲನೆ ಮಾಡ್ತಿರೋ ಸವಾರರ ಜೀವಕ್ಕೂ ಕಂಟಕವಾಗ್ತಿದೆ.

ಕಳೆದ 15 ದಿನದ ಹಿಂದಷ್ಟೇ ಉದ್ಘಾಟನೆಗೊಂಡಿರುವ ಹೆದ್ದಾರಿಯಲ್ಲಿ ಬೈಕ್, ಕಾರು, ಲಾರಿ, ಟ್ರಕ್ ಪ್ರತಿ ವಾಹನಗಳಿಂದಲೂ ರೂಲ್ಸ್ ಬ್ರೇಕ್ ಮಾಡಿ ಸಂಚಾರ ಮಾಡ್ತಿದ್ರೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾವುದೇ ಕ್ರಮವಿಲ್ಲ. ಇದರಿಂದಲೇ ಸವಾರರು ರಾಜಾರೋಷವಾಗಿ ಒನ್ ವೇನಲ್ಲಿ ಸಂಚರಿಸುವ ಮೂಲಕ ಕುತ್ತು ತಂದುಕೊಳ್ಳುತ್ತಿದ್ದಾರೆ. `ಪಬ್ಲಿಕ್ ಟಿವಿ’ ಕ್ಯಾಮೆರಾದಲ್ಲಿ ಡೆಡ್ಲಿ ಒನ್ ವೇ ಸವಾರಿ ದೃಶ್ಯಗಳು ಸೆರೆಯಾಗಿವೆ.


Spread the love

About Laxminews 24x7

Check Also

ವಿಜಯಪುರ | ಭೂತನಾಳ ಕೆರೆಯಲ್ಲಿ 6 ಶವ ಪತ್ತೆ – ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಶಂಕೆ

Spread the loveವಿಜಯಪುರ: ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ  6 ಜನರ ಶವಗಳು ಪತ್ತೆಯಾಗಿದ್ದು, ಕೌಟುಂಬಿಕ ಕಲಹಕ್ಕೆ ಕುಟುಂಬವೇ ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ