Breaking News

Uncategorized

ಅಂತರ ತಾಲೂಕಾ ಹಾಗೂ ಗೋಕಾಕ ತಾಲೂಕಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ

ಗೋಕಾಕ: ಗೋಕಾಕ ತಾಲೂಕಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ ವತಿಯಿಂದ ದಿ. 26 ರಂದು ಸಂಜೆ 5 ಗಂಟೆಗೆ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಅಂತರ ತಾಲೂಕಾ ಹಾಗೂ ಗೋಕಾಕ ತಾಲೂಕಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಅಸೋಸಿಯೇಷನ ಕಾರ್ಯದರ್ಶಿ ರಮೇಶ ಕಳ್ಳಿಮನಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಈ ಸ್ಪರ್ಧೆಯಲ್ಲಿ 55, 60, 65, ಹಾಗೂ 65+ ಕೆಜಿ ದೇಹ ತೂಕದ ಸ್ಪರ್ಧಾಳುಗಳಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು …

Read More »

ಡಿಸಿಎಂ ಸವದಿ ನೇತೃತ್ವದಲ್ಲಿ ಬಸವಕಲ್ಯಾಣ ಉಪಚುನಾವಣೆಗೆ ರಣತಂತ್ರ

ಬೆಂಗಳೂರು : ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿದ್ದು, ಆ ಕ್ಷೇತ್ರದ ಚುನಾವಣಾ ಉಸ್ತುವಾರಿಗಳು ಹಾಗೂ ಉಪ ಮುಖ್ಯಮಂತ್ರಿಯವರಾದ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳ ಮತ್ತು ಬಿಜೆಪಿ ಮುಖಂಡರ ಸಭೆ ನಡೆಯಿತು. ಉಪ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಬಯಸಿದ 18ಕ್ಕೂ ಹೆಚ್ಚಿನ ಆಕಾಂಕ್ಷಿಗಳು ಈ ಸಭೆಯಲ್ಲಿ ಭಾಗವಹಿಸಿ ಚುನಾವಣಾ ಉಸ್ತುವಾರಿಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. …

Read More »

ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂದಿಸಿದಂತೆ ಪಿಎಸ್ಐ ಅಮಾನತು

ಚಿಕ್ಕಬಳ್ಳಾಪುರ – ಜಿಲ್ಲೆಯ ಗುಡಿಬಂಡೆಯ ಹಿರೇನಾಗವಲ್ಲಿ ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂದಿಸಿದಂತೆ ಗುಡಿಬಂಡೆ ಪೊಲೀಸ್ ಠಾಣೆ ಪಿಎಸ್ ಐ ಆರ್ ಗೋಪಾಲ ರೆಡ್ಡಿ ಅಮಾನತುಗೊಳಿಸಲಾಗಿದೆ.   ಗೃಹ ಇಲಾಖೆಯಿಂದ ಈ ಕುರಿತು ಆದೇಶ ಹೊರಬಿದ್ದಿದೆ. ಕ್ವಾರಿಯ ಮೇಲೆ ದಾಳಿ ನಡೆದ ನಂತರ ಆರೋಪಿಗಳನ್ನು ದಸ್ತಗಿರಿ  ಮಾಡಲು  ಪಿಎಸ್ಐ ಗೋಪಾಲ ರೆಡ್ಡಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಪ್ರಕರಣ ದಾಖಲಿಸಿದ ಬಗ್ಗೆ ಪೊಲೀಸ್ ಐಟಿ ತಂತ್ರಾಂಶದಲ್ಲಿ ನಮೂದಿಸಿಲ್ಲ. ಪ್ರಕರಣದ ತನಿಖೆ ನಡೆಸದೇ ಫೆ. ೨೧ ಮತ್ತು …

Read More »

ಕೊಲೆ ಪ್ರಕರಣ ಮೂವರು ಅರೆಸ್ಟ್………?

ಬೆಳಗಾವಿ, ತಾಲೂಕಿನ ಸೋಮನಟ್ಟಿ ಗ್ರಾಮದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಾರ್ಕೆಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.       ಅನೈತಿಕ ಸಂಬಂಧವೇ ಈ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಮಾಹಿತಿ ಸಿಕ್ಕಿದೆ ಎಂದು ಡಿಸಿಪಿ ಡಾ.ವಿಕ್ರಮ್ ಆಮ್ಟೆ ತಿಳಿಸಿದ್ದಾರೆ. ಬೆಳಗಾವಿ ತಾಲೂಕಿನ ಸೋಮನಟ್ಟಿ ಗ್ರಾಮದ ಸಾಗರ ಗಂಗಪ್ಪ ಪೂಜೇರಿ ಎಂಬ ಯುವಕ ಫೆ.11ರಂದು ನಾಪತ್ತೆಯಾಗಿದ್ದ, ನಂತರ ಫೆ.22ರಂದು ಜೋಯಿಡಾ ತಾಲೂಕಿನ ಉಳವಿ ಬಳಿ ಯುವಕನ …

Read More »

ನಾಳೆ ಸಚಿವ ಈಶ್ವರಪ್ಪರಿಂದ ಕವಲಗುಡ್ಡದ ಶ್ರೀ ಅಮೋಘಸಿದ್ಧ ಶಾಲೆಯ 14 ಕೊಠಡಿಗಳ ಲೋಕಾರ್ಪಣೆ..ಅಮರೇಶ್ವರ ಮಹಾರಾಜರು

ಕಾಗವಾಡ ತಾಲೂಕಿನ ಸಿದ್ಧಶ್ರೀ ಸಂಸ್ಥಾನ ಶ್ರೀ. ಕರಿಯೋಗಸಿದ್ಧ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಕೌಲಗುಡ್ಡ ಇಲ್ಲಿಗೆ ಕಟ್ಟಿಸಿದ 14 ನೂತನ ಕೋಣೆಗಳ ಕಟ್ಟಡದ ಉದ್ಘಾಟನೆ ಸಮಾರಂಭ ಗುರುವಾರ ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯದ ಗ್ರಾಮಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪಾ ಇವರು ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನೆರವೇರಿಸಲಿದ್ದಾರೆಯೆಂದು ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾಹಿತಿ ನೀಡಿದರು. ಬುಧವಾರ ರಂದು ಇನ್ ವಾಹಿನಿಗೆ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾಹಿತಿ ನೀಡುವಾಗ, ಕರಿಯೋಗಸಿದ್ಧ ಕನ್ನಡ …

Read More »

ಟಿಕೇಟ್ ಅಸಲಿ ಆಟ ಇನ್ನು ಶುರು ಇಂದಿನಿಂದಲೇ ನೀತಿ ಸಂಹಿತೆ ಜಾರಿ!

ನವದೆಹಲಿ. ಕೇಂದ್ರ ಸಚಿವ ಸುರೇಶ ಅಂಗಡಿ ಅವರ ನಿಧನದ ನಂತರ ತೆರವಾದ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯ  ದಿನಾಂಕ ಇಂದು ಘೋಷಣೆಯಾಗುವ ಸಾಧ್ಯತೆ ಇದೆ. ಕೇಂದ್ರ ಚುನಾವಣೆ ಆಯೋಗ ಈ ಸಂಬಂಧ ಬುಧವಾರ ಬೆಳಿಗ್ಗೆ  11 ಕ್ಕೆ ಪತ್ರಿಕಾಗೋಷ್ಠಿ ಕರೆದಿದೆ. ಆಸ್ಸಾಂ, ಪಶ್ಚಿಮ ಬಂಗಾಳ, ಪುದುಚೆರಿ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ.‌ ಇವುಗಳ ಜೊತೆಗೆ ಬೆಳಗಾವಿ ಉಪ ಚುನಾವಣೆ ಕೂಡ ನಡೆಯಬಹುದು. ಅದಕ್ಕೆ ತಕ್ಣದಿಂದಲೇ ನೀತಿ ಸಂಹಿತೆ …

Read More »

ನೀರಾವರಿ ಬಗ್ಗೆ ಚರ್ಚೆ……..?

ನವದೆಹಲಿ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌  ; ಕೃಷ್ಣಾ, ಕಾವೇರಿ ಮತ್ತು ಮಹದಾಯಿ ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಿದರು. ನವದೆಹಲಿಯ ಕೇಂದ್ರ ಜಲಶಕ್ತಿ  ಸಚಿವರ ಕಾರ್ಯಾಲಯದಲ್ಲಿ ಈ ಚರ್ಚೆ ನಡೆಯುತ್ತಿದೆ. ..

Read More »

ಇಂಧನ ದರ ಇಳಿಸುವಂತೆ ಯುವ ಮುಖಂಡ ರಾಹುಲ್ ಜಾರಕಿಹೊಳಿ ಆಗ್ರಹ

ಗೋಕಾಕ: “ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಬೇಕು. ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು” ಎಂದು ಯುವ ಮುಖಂಡ ರಾಹುಲ್ ಜಾರಕಿಹೊಳಿ ಆಗ್ರಹಿಸಿದರು. ನಗರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಕೋವಿಡ್ ನಿಂದಾಗಿ ಜನರು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈಗ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿರುವುದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗುತ್ತದೆ. ಹೀಗಾಗಿ, …

Read More »

ಬ್ರಾಹ್ಮಣರ ಅವಹೇಳನ ಖಂಡನೀಯ: ಸಚಿವ ಹೆಬ್ಬಾರ

ಕಾರವಾರ: ‘ಪೊಗರು ಚಲನಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿರುವುದು ಅತ್ಯಂತ ಖಂಡನೀಯ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ. ‘ಚಲನಚಿತ್ರದಲ್ಲಿ ಮಾತ್ರ ಪೊಗರು ತೋರಿಸಲಿ. ಅದರ ಹೊರತಾಗಿ ಬ್ರಾಹ್ಮಣರ ಮೇಲೆ ಅಥವಾ ಬೇರೆ ಯಾವುದೇ ಸಮಾಜದ ಮೇಲೆ ಪೊಗರು ತೋರಿಸುವುದು ಸರಿಯಲ್ಲ. ರಾಜ್ಯದ ಸಚಿವನಾಗಿಯೂ ನಾನು ಈ ರೀತಿಯ ಕೃತ್ಯವನ್ನು ಖಂಡಿಸುತ್ತೇನೆ. ಬ್ರಾಹ್ಮಣರ ಅವಹೇಳನ ಮಾಡುವ ದೃಶ್ಯಗಳನ್ನು ತೆಗೆದು ಹಾಕಿಯೇ ಚಲನಚಿತ್ರವನ್ನು ಬಿಡುಗಡೆ ಮಾಡಬೇಕು’ ಎಂದು ಅವರು ಪ್ರಕಟಣೆಯಲ್ಲಿ ಚಿತ್ರ …

Read More »

ಯಾರೇನು ಮಾಡಲಿಕ್ಕಾಗುತ್ತದೆ? ಅಂದರೆ ರಾಜೀನಾಮೆ ಕೊಟ್ಟು ಹೋಗಿ! ಡಿಕೆ ಶಿವಕುಮಾರ್ಆಕ್ರೋಶ

ಬೆಂಗಳೂರು, ಫೆ. 23: ಚಿಕ್ಕಬಳ್ಳಾಪುರ ಸ್ಪೋಟ ಘಟನೆ ಕುರಿತು ಸಿಎಂ ಯಡಿಯೂರಪ್ಪ ಅವರ, ನಾವು ನೀವು ಏನ್ ಮಾಡೋಕೆ ಆಗುತ್ತೆ ರೀ..? ನಮ್ಮ ಜಾಗದಲ್ಲಿ ನೀವು ಇದ್ದರೆ ನೀವು ಏನ್ ಮಾಡ್ತಿದ್ರಿ ಹೇಳಿ..? ಬೆಳಗಿನ ಜಾವ ಹೋಗಿ ಅದನ್ನೆಲ್ಲಾ ಮಾಡಿ ಅಂತಾ ನಾವು ಅವರಿಗೆ ಹೇಳಿದ್ವಾ..? ಎಂಬ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಪದೇ ಪದೆ ಇಂತಹ ಘಟನೆಗಳಿಗೆ ಯಾರು ಹೊಣೆ …

Read More »